ಮೈಸೂರು : ವ್ಯಕ್ತಿಯೋರ್ವನನ್ನು ದುಷ್ಕರ್ಮಿಗಳು ಬರ್ಬರ ಹತ್ಯೆಗೈದು ಕೈ, ಕಾಲು, ರುಂಡ ಕತ್ತರಿಸಿ ಕೆರೆಗೆ ಎಸೆದಿರುವ ಘಟನೆ ಮೈಸೂರಿನ ಕೆ.ಹೆಮ್ಮನಹಳ್ಳಿಯಲ್ಲಿ ನಡೆದಿದೆ.
ಕೆರೆಯಲ್ಲಿ ತೆಲುತ್ತಿರೋ ವ್ಯಕ್ತಿಯ ಕೈ, ಕಾಲು, ರುಂಡದ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಘಟನೆಯಿಂದ ಮೈಸೂರಿಗರು ಬೆಚ್ಚಿಬಿದ್ದಿದ್ದಾರೆ.
ದುಷ್ಕರ್ಮಿಗಳು 30ರಿಂದ 40 ವರ್ಷ ವಯಸ್ಸಿನ ವ್ಯಕ್ತಿಯ ದೇಹದ ಅಂಗಾಂಗಗಳನ್ನ ಕತ್ತರಿಸಿ ಕೆರೆಗೆ ಎಸೆದು ಹೋಗಿದ್ದು, ತಲೆ, ಎಡ ಮುಂಗೈ, ಬಲ ಮೊಣಕಾಲು, ಹಾಗೂ ಒಂದು ತೊಡೆಯ ಭಾಗ ಪತ್ತೆಯಾಗಿದೆ. ಉಳಿದ ದೇಹದ ಭಾಗಗಳನ್ನ ಹುಡುಕಲು ಪೊಲೀಸರು ಮುಂದಾಗಿದ್ದಾರೆ. ಜಯಪುರ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದು, ಕೆರೆಯಲ್ಲಿ ಸಿಕ್ಕ ಶವದ ಗುರುತು ಪತ್ತೆ ಹಚ್ಚಲು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ : ಇತಿಹಾಸದಲ್ಲೇ ಮೊದಲ ಬಾರಿಗೆ ಬಿಜೆಪಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ರಾಜ್ಯ ಸರ್ಕಾರ ಆದೇಶ!

Author: Btv Kannada
Post Views: 274