ರೇಪಿಸ್ಟ್ ಮಡೆನೂರು ಮನು ಮೇಲೆ ಬ್ಯಾನ್ ಹೇರಿದ ಸ್ಯಾಂಡಲ್​ವುಡ್ – 100ಕ್ಕೂ ಹೆಚ್ಚು ಕೇಸ್ ದಾಖಲು!

ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ಅತ್ಯಾಚಾರ ಆರೋಪದ ಮೇಲೆ ಪೊಲೀಸರ ವಶದಲ್ಲಿದ್ದಾರೆ. ಈ ಮಧ್ಯೆ ಸ್ಯಾಂಡಲ್​ವುಡ್​ನ ಸ್ಟಾರ್ ಹೀರೋಗಳ ಬಗ್ಗೆ ನೀಡಿರುವ ಕೀಳುಮಟ್ಟದ ಹೇಳಿಕೆಯ ಆಡಿಯೋ ವೈರಲ್ ಆಗಿದ್ದು, ಇದು ಮತ್ತಷ್ಟು ವಿವಾದಗಳಿಗೆ ಕಾರಣವಾಗಿದೆ.

ವೈರಲ್ ಆದ ಆ ಆಡಿಯೋದಲ್ಲಿ ಮಡೆನೂರು ಮನು ಕನ್ನಡ ಚಿತ್ರರಂಗದ ಹೆಮ್ಮೆಯ ಸ್ಟಾರ್ ಡಾ.ಶಿವರಾಜ್ ಕುಮಾರ್ ಮತ್ತು ದರ್ಶನ್ ಅವರ ಸಾವನ್ನು ಬಯಸಿದ್ದಾರೆ. ಇಷ್ಟೇ ಅಲ್ಲ ಕನ್ನಡ ಚಿತ್ರರಂಗದ ಆಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ಕುರಿತು ಕೂಡ ತುಂಬಾನೇ ಕೀಳಾಗಿ ಮಾತನಾಡಿದ್ದಾರೆ.

ಮಾತನಾಡಿರುವುದು ಮಡೆನೂರು ಮನು ಅವರೇನಾ? ಎನ್ನುವ ಪ್ರಶ್ನೆಗೆ ಸದ್ಯ ಸ್ಪಷ್ಟ ಉತ್ತರ ಇಲ್ಲವಾದರೂ ಸೋಶಿಯಲ್ ಮೀಡಿಯಾದಲ್ಲಿ ಪೊಲೀಸರ ಕಸ್ಟಡಿಯಲ್ಲಿರುವ ಮಡೆನೂರು ಮನು ವಿರುದ್ಧ ವ್ಯಾಪಕವಾದ ಆಕ್ರೋಶ ವ್ಯಕ್ತವಾಗುತ್ತಿದೆ. ಸರಿಯಾಗಿ ಒಂದು ಸಿನಿಮಾ ತೆರೆಗೆ ಬಂದಿಲ್ಲ ಆಗಲೇ ಇಷ್ಟೊಂದು ದುರಂಹಕಾರಾನಾ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಹಲವಾರು ಜನ ಮಡೆನೂರು ಮನು ಮನಸ್ಥಿತಿಯನ್ನು ಕಂಡು ಬೆಚ್ಚಿ ಬಿದ್ದಿದ್ದು ಆಗಿದ್ದೆಲ್ಲ ಒಳ್ಳೆಯದಕ್ಕೆ ಎಂದು ಕೂಡ ಮಾತನಾಡುತ್ತಿದ್ದಾರೆ. ಮಡೆನೂರು ಮನು ವಿರುದ್ದ ಕಿಡಿ ಕಾರುತ್ತಿದ್ದಾರೆ.

”ಮಡೆನೂರು ಮನು ನಿಜಕ್ಕೂ ಡಾ.ಶಿವರಾಜ್ ಕುಮಾರ್, ದರ್ಶನ್ ಮತ್ತು ಧ್ರುವಾ ಸರ್ಜಾ ಅವರ ಬಗ್ಗೆ ಮಾತನಾಡಿದ್ದು ನಿಜಾನಾ ? ಗೊತ್ತಿಲ್ಲ. ಆದರೆ ಸದ್ಯಕ್ಕೆ ಮಡೆನೂರು ಮನು ವಿರುದ್ಧ ಜಿಲ್ಲಾವಾರು ಕೇಂದ್ರಗಳಲ್ಲಿ ಡಾ.ರಾಜ್ ಕುಮಾರ್ ಅಭಿಮಾನಿಗಳ ಒಕ್ಕೂಟದಿಂದ ನೂರಕ್ಕೂ ಅಧಿಕ ದೂರು ದಾಖಲಾಗುತ್ತಿವೆ. ಅಖಿಲ ಕರ್ನಾಟಕ ಡಾ. ರಾಜಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟದ ಗೌರವಾಧ್ಯಕ್ಷರಾದ ಎನ್.ಆರ್.ರಮೇಶ್ ಅವರು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ಮಾಡಲು ಬುಧವಾರ ವಾಣಿಜ್ಯ ಮಂಡಳಿಗೆ ಬರುತ್ತಿದ್ದಾರೆ” ಎಂದು ಉಮೇಶ್ ಬಣಕಾರ್ ಫಿಲ್ಮಿ ಬೀಟ್‌ ಕನ್ನಡಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ಧಾರೆ.

”ಮಡೆನೂರು ಮನು ಈಗಷ್ಟೇ ಬೆಳೆಯುತ್ತಿರುವ ಹುಡುಗ. ಮೊನ್ನೆಯಷ್ಟೇ ಒಂದು ಸಿನಿಮಾ ಬಿಡುಗಡೆಯಾಗಿದೆ. ಕೇವಲ ಒಂದು ಚಿತ್ರ ಮಾಡಿರುವ ಹುಡುಗ ಕನ್ನಡ ಚಿತ್ರರಂಗದ ದಂತಕತೆ ಡಾ.ಶಿವರಾಜ್ ಕುಮಾರ್ ಅವರ ಬಗ್ಗೆ ಮಾತನಾಡಿದ್ದು ಅಕ್ಷಮ್ಯ ಅಪರಾಧ, ಕೇವಲ ಶಿವಣ್ಣ ಮಾತ್ರವಲ್ಲ ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ದರ್ಶನ್ ಮತ್ತು ಧ್ರುವಾ ಸರ್ಜಾ ಅವರ ಕುರಿತು ಅಷ್ಟೊಂದು ಕೀಳು ಮಟ್ಟದಲ್ಲಿ ಮಾತನಾಡುವ ಯಾವ ಹಕ್ಕು ಕೂಡ ಮಡೆನೂರು ಮನುಗೆ ಇಲ್ಲ, ಮಡೆನೂರು ಮನು ಮಾತನಾಡಿದ ಮಾತುಗಳನ್ನು ಕನ್ನಡ ಚಿತ್ರರಂಗ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ” ಎಂದು ಉಮೇಶ್ ಬಣಕಾರ್ ಹೇಳಿದ್ದಾರೆ. ಅವರಾಡಿರುವ ಮಾತು ಅವರ ರೋಗಿಷ್ಟ ಮನಸ್ಥಿತಿಗೆ ಕೈಗನ್ನಡಿ ಎಂದು ಹೇಳಿದ್ದಾರೆ.

ಇದನ್ನೂ ಓದಿ : BMTC ನಲ್ಲಿ ಬೆಕ್ಕು ತಂದಿದ್ದಕ್ಕೆ ಕಂಡಕ್ಟರ್-ಪ್ರಯಾಣಿಕನ‌ ನಡುವೆ ಮಾರಾಮಾರಿ!

Btv Kannada
Author: Btv Kannada

Read More