ಬಾಗಲಕೋಟೆ : ಮುಸುಕುಧಾರಿ ಕಳ್ಳರು ನಡುರಸ್ತೆಯಲ್ಲಿ ಬಿಂದಾಸ್ ಆಗಿ ಓಡಾಡಿ ಸರಣಿ ಮನೆಗಳ್ಳತನ ನಡೆಸಿರೋ ಘಟನೆ ಬಾಗಲಕೋಟೆ ಜಿಲ್ಲೆಯ ಕುಳಗೇರಿ ಗ್ರಾಮದಲ್ಲಿ ನಡೆದಿದೆ. ರಾತ್ರಿ ವೇಳೆ ಆಗಮಿಸಿರೋ 4 ಜನ ಮುಸುಕುಧಾರಿಗಳು ಕೈಯಲ್ಲಿ ಟಾರ್ಚ್ ಹಿಡಿದು ಬೀಗ ಹಾಕಿರೋ ಮನೆಗಳನ್ನ ಪರಿಶೀಲಿಸಿದ್ದಾರೆ.
ನಂತರ ಬೀಗ ಹಾಕದ ಬಡಿಗೇರ ಮತ್ತು ಜಕಾತಿ ಎಂಬುವವರ ಮನೆಗೆ ನುಗ್ಗಿ 3 ಲಕ್ಷ ನಗದು ಸೇರಿ 3 ತೊಲಿ ಬಂಗಾರದ ಆಭರಣ ಕದ್ದೊಯ್ದಿದ್ದಾರೆ. ಈ ಘಟನೆ ಬೆನ್ನಲ್ಲೇ ಸ್ಥಳಕ್ಕೆ ಪೋಲಿಸರು ಶ್ವಾನದಳ ಮತ್ತು ಬೆರಳೆಚ್ಚು ತಜ್ಞರೊಂದಿಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಇತ್ತ ಕಳ್ಳರ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮುಸುಕುಧಾರಿ ಕಳ್ಳರ ಓಡಾಟ ಕಂಡು ಬಡಾವಣೆಗಳ ಜನರು ಆತಂಕಗೊಂಡಿದ್ದಾರೆ. ಇನ್ನೊಂದೆಡೆ ಕುಳಗೇರಿ ಪೋಲಿಸ್ ಠಾಣೆಯಲ್ಲಿ ಸಿಬ್ಬಂದಿ ಕೊರತೆ ಇದ್ದು, ಸಿಬ್ಬಂದಿ ನೇಮಿಸಿ ರಕ್ಷಣೆ ನೀಡುವಂತಾಗಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ನಾಲ್ಕು ರಾಜ್ಯಗಳ 5 ವಿಧಾನಸಭಾ ಕ್ಷೇತ್ರಗಳಿಗೆ ಜೂ.19ಕ್ಕೆ ಉಪಚುನಾವಣೆ, 23ಕ್ಕೆ ಫಲಿತಾಂಶ!
