ವಿಜಯಪುರ : ಡ್ಯಾನ್ಸ್ ಮಾಡುತ್ತಿದ್ದಾಗಲೇ ಯುವಕನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ ದಾರುಣ ಘಟನೆ ವಿಜಯಪುರ ನಗರದ ಚಪ್ಪರಬಂದ ಕಾಲೋನಿಯಲ್ಲಿ ನಡೆದಿದೆ. ಮಹಮ್ಮದ್ ಪೈಗಂಬರ್ ಗಂಗನಹಳ್ಳಿ (28) ಹೃದಯಾಘಾತದಿಂದ ಮೃತಪಟ್ಟ ಯುವಕ.
ಮಹಮ್ಮದ್ ಪೈಗಂಬರ್ ತನ್ನ ಸಂಬಂಧಿಕರ ಮದುವೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದ. ಸ್ನೇಹಿತರ ಜೊತೆ ಸಂಗೀತಕ್ಕೆ ಸಖತ್ ಸ್ಟೆಪ್ಸ್ ಹಾಕುತ್ತಿದ್ದ. ಆದರೆ ಇದ್ದಕ್ಕಿದ್ದಂತೆ ಯುವಕ ಕುಸಿದು ಬಿದ್ದಿದ್ದು, ಹೃದಯಾಘಾತಕ್ಕೆ ಬಲಿಯಾಗಿದ್ದಾನೆ.
ಮೃತ ಮಹಮ್ಮದ್ ಪೈಗಂಬರ್ ಅವರು ವಿಜಯಪುರದಲ್ಲಿ ಅಲೋಮಿನಿಯಂ ಕಿಟಕಿ, ಬಾಗಿಲು ಕೆಲಸ ಮಾಡುತ್ತಿದ್ದ. ಮಹಮ್ಮದ್ ಪೈಗಂಬರ್ ಹೃದಯಾಘಾತ ಸ್ನೇಹಿತರು, ಸಂಬಂಧಿಕರು ಬೆಚ್ಚಿ ಬೀಳುವಂತೆ ಮಾಡಿದೆ. ಮಹಮ್ಮದ್ ಪೈಗಂಬರ್ ಗಂಗನಹಳ್ಳಿ ಅಲ್ಯೂಮಿನಿಯಂ ಕಿಟಕಿ, ಬಾಗಿಲು ಕೆಲಸ ಮಾಡುತ್ತಿದ್ದನು. ಮೃತ ಯುವಕ ಸಾವಿಗೂ ಮುನ್ನ ಖುಷಿಯಾಗಿ ಡ್ಯಾನ್ಸ್ ಮಾಡುತ್ತಿದ್ದ ವಿಡಿಯೋ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಗೋಳಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಪ್ರಿಯಕರನ ಜೊತೆ ಓಡಿ ಹೋದ ಮಗಳು – ಮನನೊಂದು ಒಂದೇ ಕುಟುಂಬದ ಮೂವರು ಆತ್ಮಹತ್ಯೆ!
