ಕಲಬುರಗಿ : ಚಿತ್ತಾಪುರದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ಪ್ರವಾಸಿ ಮಂದಿರದಲ್ಲಿ 5 ಗಂಟೆಗಳ ಕಾಲ ದಿಗ್ಬಂಧನ ಮಾಡಿರುವ ಘಟನೆಯನ್ನು ಖಂಡಿಸಿ (ಮೇ.24) ಇಂದು ಕಲಬುರಗಿಯಲ್ಲಿ ರಾಜ್ಯ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸುತ್ತಿದೆ.
ಪ್ರತಿಭಟನೆಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್ ಅವರು, ನಮ್ಮ ಯಾವ ಬಿಜೆಪಿಯ ಕಾರ್ಯಕರ್ತರಿಗೆ ಏನಾದ್ರು ಆದ್ರೆ ಇಲ್ಲಿ ಬಂದು ಖರ್ಗೆಯವರಿಗೆ ಸವಾಲ್ ಹಾಕ್ತೆವೆ. ದಿನಾ ಅಂಬೇಡ್ಕರ್ ಸಂವಿಧಾನ ಪುಸ್ತಕ ಹಿಡಿದುಕೊಂಡು ಓಡಾಡ್ತಿರಲ್ಲ, ಯಾವ ಪೇಜ್ನಲ್ಲಿ ಗುಂಡಾಗಿರಿ ಮಾಡಿ ಅಂತಾ ಬರೆದಿದ್ದಾರೆ ತೋರಿಸಿ ಎಂದು ಆರ್. ಅಶೋಕ್ ಪ್ರಶ್ನಿಸಿದ್ದಾರೆ.
ಮುಂದುವರಿದು ಮಾತನಾಡಿದ ಅವರು, ನಿಮಗೆ ದಮ್ ಇದ್ರೆ ನಾವೆಲ್ಲರೂ ಬಂದಿದ್ದೇವೆ.. ಬಂದು ಕೂಡಿ ಹಾಕಿ ನೋಡೊಣ. ಯಾವಗ ಬಿದ್ದು ಹೋಗುತ್ತೋ ಗೋತ್ತಿಲ್ಲ ನಿಮ್ಮ ಸರ್ಕಾರ. ಪುಟಗೋಸಿ ಮೂರು ರಾಜ್ಯದಲ್ಲಿ ಇದ್ದು, ನಮಗೆ ಚಾಲೆಂಜ್ ಆ? ಎಂದು ಆರ್. ಅಶೋಕ್ ಟಾಂಗ್ ಕೊಟ್ಟಿದ್ದಾರೆ.
ನೀವು ಪದ್ಮಭೂಷಣ ಪ್ರಶಸ್ತಿ ಕೊಡ್ತಿರಾ? ಅದು ಕೊಡುದು ಕೇಂದ್ರ ಸರ್ಕಾರ. ಅಂಬೇಡ್ಕರ್ ಹುಲಿಗಳು ಅಂತಿರಲ್ಲ.. ಅಂಬೇಡ್ಕರ್ ಸತ್ತಾಗ ಮೂರಡಿ ಆರಡಿ ಜಾಗ ಕೊಡಲಿಲ್ಲ. ಆವಾಗೆಲ್ಲಿ ಹೋಗಿದ್ರು ಈ ಹುಲಿಗಳು. ನಕಲಿ ಗಾಂಧಿಗಳ ಕಾಲು ನೆಕ್ಕೋದಕ್ಕೆ ಹೋಗಿದ್ದರಾ ಹೇಗೆ? ಇವತ್ತು ಡಿಕೆಶಿ ಎರಡೂವರೆ ಕೋಟಿ ನ್ಯಾಷನಲ್ ಹೆರಾಲ್ಡ್ಗೆ ದೇಣಿಗೆ ಕೊಟ್ಟಿದ್ದೇವೆ ಅಂತಾ ಹೇಳ್ತಾರೆ. ಅಂಬೇಡ್ಕರ್ ಅವರಿಗೆ ಕೇವಲ ಐದು ಸಾವಿರ ದುಡ್ಡು ಕೊಡೊಕೆ ಯೋಗ್ಯತೆ ಇಲ್ಲದವರು, ಏಳುನೂರು ಕೋಟಿ ಐವತ್ತು ಲಕ್ಷಕ್ಕೆ ಬರೆಯಿಸಿಕೊಂಡಿದ್ದಾರೆ. ಅಂಬೇಡ್ಕರ್ ಅವರ ಶವ ಬೇಕಾಗಿರಲಿಲ್ಲ. ಅವರ ಪುಸ್ತಕ ಬೇಕಾಗಿತ್ತು ಎಂದು ಗುಡುಗಿದ್ದಾರೆ.
ಪುಸ್ತಕ ಬರೆದಿರೋದು ಇದೆನೋ ಖಾಲಿ ಇದೇನೋ ಗೋತ್ತಿಲ್ಲ. ಇವತ್ತು ಪೊಲೀಸ್ ಠಾಣೆಯನ್ನ ಕಾಂಗ್ರೆಸ್ ಠಾಣೆಯಾಗಿ ಮಾಡಿ ಬಿಟ್ಟಿದ್ದಾರೆ. ಯಾರೆಲ್ಲಾ ರಿಪಬ್ಲಿಕ್ ಅಂತಾ ಓಡಾಡಿದ್ರೋ ಅವರು ಇವತ್ತು ಪಬ್ಲಿಕ್ನಲ್ಲೆ ಇಲ್ಲ. ಬಿಜೆಪಿ ನಂ 1 ಪಾರ್ಟಿ ನಮ್ಮನ್ನ ಎದುರಿಸುವ. ದೈರ್ಯ ನಿಮಗಿಲ್ಲ ಎಂದು ಕಲಬುರಗಿಯಲ್ಲಿ ಕಾಂಗ್ರೆಸ್ ವಿರುದ್ದ ಆರ್ ಅಶೋಕ್ ಗುಡುಗಿದ್ದಾರೆ.
ಇದನ್ನೂ ಓದಿ : ಕರ್ನಾಟಕಕ್ಕೆ ಮತ್ತೆ ಕಾಲಿಟ್ಟ ಮಹಾಮಾರಿ ಕೊರೋನಾ – ಮಾಸ್ಕ್ ಧರಿಸಿಯೇ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಿಎಂ!
