ಬೆಂಗಳೂರು : ಬಿಬಿಎಂಪಿ ಪ್ರಧಾನ ಇಂಜಿನಿಯರ್ ಬಿ.ಎಸ್ ಪ್ರಹ್ಲಾದ್ಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ತಾಂತ್ರಿಕ ಮುಖ್ಯಸ್ಥರ ಹುದ್ದೆ ನೀಡಲಾಗಿದೆ. ಈ ಮೂಲಕ ಪ್ರಹ್ಲಾದ್ ಸೇವೆಯನ್ನು ದೊಡ್ಡ ಮಟ್ಟದಲ್ಲಿ ಬೆಳೆಸಿಕೊಳ್ಳಲು ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಉನ್ನತ ಹುದ್ದೆಗೆ ಪ್ರಹ್ಲಾದ್ ಅವರನ್ನು ನಿಯೋಜನೆ ಮಾಡಿರುವ ಸರ್ಕಾರ, ಪ್ರಹ್ಲಾದ್ ಅವರನ್ನು ಬಹಳಷ್ಟು ಮಹತ್ವದ ಯೋಜನೆಗಳಿಗೆ ಸಲಹೆಗಾರರಾಗಿ ಬಳಸಿಕೊಳ್ಳಲು ಸಿದ್ದತೆ ಮಾಡಿಕೊಂಡಿದೆ.
ಈ ಬಗ್ಗೆ ಸರ್ಕಾರದಿಂದ ಅಧಿಕೃತ ಪ್ರಕಟಣೆಯೊಂದೇ ಬಾಕಿ ಉಳಿದಿದ್ದು, ಬಿಟಿವಿಗೆ ಸರ್ಕಾರ ಹಾಗೂ ಬಿಬಿಎಂಪಿ ಉನ್ನತ ಮೂಲಗಳ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ : ರಾಜಾಜಿನಗರದಲ್ಲಿ ‘ಜೂನಿಯರ್ ಟೋಸ್’ ಶುಭಾರಂಭ – ಅಶ್ವಿನಿ ಪುನೀತ್ರಾಜ್ಕುಮಾರ್ ಕನಸಿಗೆ ಶಾಸಕ ಗೋಪಾಲಯ್ಯ, ಅನುಶ್ರೀ ಸಾಥ್!

Author: Btv Kannada
Post Views: 223