ಆಕ್ಷನ್ ಪ್ರಿನ್ಸ್ ಹೊಸ ಚಿತ್ರಕ್ಕೆ ಮುಹೂರ್ತ ಫಿಕ್ಸ್ – ‘ಮಫ್ತಿ’ಯ ಮಾಸ್ ಮಾಂತ್ರಿಕನಿಂದ ಧ್ರುವ ಸರ್ಜಾಗೆ ಆಕ್ಷನ್ ಕಟ್!

ಸ್ಯಾಂಡಲ್​ವುಡ್​ನ​​​ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗುತ್ತಿದ್ದಾರೆ. ಇದೀಗ ಧ್ರುವ ಅಭಿನಯದ ಮತ್ತೊಂದು ಹೊಸ ಚಿತ್ರ ಶೀಘ್ರವೇ ಅನೌನ್ಸ್ ಆಗಲು ಸಜ್ಜಾಗಿದೆ. ಧ್ರುವ ಸರ್ಜಾ ನಟನೆಯ ನೂತನ ಸಿನಿಮಾಗೆ ಈಗಾಗಲೇ ಮುಹೂರ್ತ ಫಿಕ್ಸ್ ಆಗಿದ್ದು, ‘ಮಫ್ತಿ’ಯ ಮಾಸ್ ಮಾಂತ್ರಿಕ ನರ್ತನ್ ಅವರು​​ ಧ್ರುವಗೆ ಆಕ್ಷನ್ ಕಟ್ ಹೇಳಲಿದ್ದಾರೆ.

ಹೀಗಾಗಿ ಪ್ರೊಡಕ್ಷನ್ ಹೌಸ್​​ಗಳು ನಟ ಧ್ರುವ ಸರ್ಜಾ ಸಿನಿಮಾವನ್ನು ನಿರ್ಮಾಣ ಮಾಡಲು ಕಾಂಪಿಟೇಶನ್​​ನಲ್ಲಿದೆ. ಕೆವಿನ್ ಅಥವಾ ಹೊಂಬಾಳೆ ಫಿಲಂಸ್ ಧ್ರುವ ಸರ್ಜಾ ನಟನೆಯ ಮುಂದಿನ ಚಿತ್ರವನ್ನು ಪ್ರೊಡ್ಯೂಸ್​ ಮಾಡುವ ಸಾಧ್ಯತೆಯಿದ್ದು, ಈ ಎರಡು ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳು ತುದಿಗಾಲಲ್ಲಿ ನಿಂತು ಧ್ರುವ ಅಭಿನಯದ ಹೊಸ ಚಿತ್ರಕ್ಕೆ ಹಣ ಹೂಡಲು ಕಾಯುತ್ತಿದೆ ಎಂಬ ಚರ್ಚೆಗಳು ನಡೆಯುತ್ತಿದೆ.

ಸದ್ಯ ಧ್ರುವ ಸರ್ಜಾ ಅವರು ಡೈರೆಕ್ಟರ್​ ಪ್ರೇಮ್ ನಿರ್ದೆಶನದ​​ ‘ಕೆಡಿ’ ಸಿನಿಮಾದ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಕೆಡಿ ಸಿನಿಮಾದ ಸಾಂಗ್ ಶೂಟಿಂಗ್ ದೂರದ ಸ್ವಿಜರ್‌ಲ್ಯಾಂಡ್​​ನಲ್ಲಿ ನಡೆಯುತ್ತಿದ್ದು, ಧ್ರುವ ಸರ್ಜಾ ಪತ್ನಿ ಪ್ರೇರಣಾ ಸೇರಿದಂತೆ ಫ್ಯಾಮಿಲಿ ಜೊತೆಗೇನೆ ಸ್ವಿಜರ್‌ಲ್ಯಾಂಡ್‌ಗೆ ಹೋಗಿದ್ದಾರೆ. ಕೆಡಿ ಟೀಮ್ ಸ್ವಿಜರ್‌ಲ್ಯಾಂಡ್​ನಲ್ಲಿಯೇ ಬೀಡು ಬಿಟ್ಟಿದೆ.

ಈ ಮಧ್ಯೆ ಧ್ರುವ ಸರ್ಜಾ ಮುಂದಿನ ಚಿತ್ರಕ್ಕೆ ಭರದಿಂದ ಸಿದ್ದತೆಗಳು ಸಾಗಿದ್ದು, ಶೀಘ್ರವೇ ಈ ಕುರಿತು ಚಿತ್ರತಂಡದಿಂದ ಅಧಿಕೃತ ಮಾಹಿತಿಗಳು ಹೊರಬರುವ ಸಾಧ್ಯತೆಯಿದೆ. ಆ್ಯಕ್ಷನ್ ಪ್ರಿನ್ಸ್ ಅಭಿಮಾನಿಗಳು ಈ ಸುದ್ದಿ ಕೇಳಿ ಪುಲ್​ ಖುಷ್ ​ಆಗಿದ್ದು, ಹೆಚ್ಚಿನ ಅಪ್​​ಡೇಟ್​​ಗಾಗಿ ಕಾಯುತ್ತಿದ್ದಾರೆ.

ಇದನ್ನೂ ಓದಿ : ರಾಜಾಜಿನಗರದಲ್ಲಿ ‘ಜೂನಿಯರ್ ಟೋಸ್’ ಶುಭಾರಂಭ – ಅಶ್ವಿನಿ ಪುನೀತ್​​ರಾಜ್​ಕುಮಾರ್​ ಕನಸಿಗೆ ಶಾಸಕ ಗೋಪಾಲಯ್ಯ, ಅನುಶ್ರೀ ಸಾಥ್!

Btv Kannada
Author: Btv Kannada

Read More