ಕಲಬುರಗಿ : ಚಿತ್ತಾಪುರದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ಪ್ರವಾಸಿ ಮಂದಿರದಲ್ಲಿ 5 ಗಂಟೆಗಳ ಕಾಲ ದಿಗ್ಬಂಧನ ಮಾಡಿರುವ ಘಟನೆಯನ್ನು ಖಂಡಿಸಿ (ಮೇ.24) ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಬಿಜೆಪಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.
ಹೌದು.. ಕೈ ಕಾರ್ಯಕರ್ತರು ಚಿತ್ತಾಪುರ ಐಬಿಯಲ್ಲಿ ಛಲವಾದಿ ನಾರಾಯಣಸ್ವಾಮಿ ದಿಗ್ಭಂಧನ ಹಿನ್ನಲೆ ಕಲಬುರಗಿಯಲ್ಲಿಂದು ‘ಕೈ’ ವಿರುದ್ಧ ರಾಜ್ಯ ಬಿಜೆಪಿ ಬೃಹತ್ ಹೋರಾಟ ನಡೆಸಲಿದೆ. ಸಚಿವ ಸ್ಥಾನದಿಂದ ಪ್ರಿಯಾಂಕ್ ಖರ್ಗೆ ಕಿತ್ತು ಹಾಕುವಂತೆ ಆಗ್ರಹಿಸಿರುವ ಬಿಜೆಪಿ, ಸಚಿವ ಸ್ಥಾನದಿಂದ ಪ್ರಿಯಾಂಕ್ರನ್ನು ಕೈ ಬಿಡುವ ತನಕ ಹೋರಾಟ ಮುಂದುವರೆಯಲಿದೆ ಎಂದು ಎಚ್ಚರಿಕೆ ನೀಡಿದೆ. ಇಂದು ಡಿಸಿ ಕಚೇರಿ ಮುಂದೆ ನಡೆವ ಹೋರಾಟದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಸಿ.ಟಿ ರವಿ ಅವರು ಕೂಡ ಭಾಗಿಯಾಗಲಿದ್ದಾರೆ.
ಪ್ರಿಯಾಂಕ್ ಖರ್ಗೆ ವಿರುದ್ಧ ಮಾತನಾಡಿರುವ ನೆಪವನ್ನು ಇಟ್ಟುಕೊಂಡು ಛಲವಾದಿ ನಾರಾಯಣಸ್ವಾಮಿ ಅವರಿಗೆ ದಿಗ್ಬಂಧನ ಮಾಡಿರುವುದು ಖಂಡನಾರ್ಹ. ಇದು ಇಡೀ ರಾಜ್ಯವೇ ತಲೆತಗ್ಗಿಸುವಂತಹ ಘಟನೆಯಾಗಿದೆ. ಯಾವ ತಪ್ಪಿಗೆ ಈ ಶಿಕ್ಷೆ? ಚಿತ್ತಾಪೂರಕ್ಕೆ ಹೋಗಿ ತಿರಂಗಾ ಯಾತ್ರೆ ಮಾಡಬಾರದ? ಅಲ್ಲಿ ಭಾಷಣ ಮಾಡಬಾರದಾ? ಈ ಕೃತ್ಯ ಮಾಡಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಬಿಜೆಪಿ ಆರೋಪಿಸಿದ್ದು, ಎಐಸಿಸಿ ಅಧ್ಯಕ್ಷರ ತವರಲ್ಲಿ ಇಂದು ಕೇಸರಿ ಪಡೆ ಆರ್ಭಟಿಸಲಿದೆ.
ಇದನ್ನೂ ಓದಿ : ಹಿಂದೂ ದೇವಾಲಯಗಳ ಮಸೂದೆಗೆ ಬೀಳಲಿಲ್ಲ ರಾಜ್ಯಪಾಲರ ಅಂಕಿತ – ರಾಷ್ಟ್ರಪತಿ ಅಂಗಳಕ್ಕೆ ಕಳುಹಿಸಿದ ಗೆಹ್ಲೋಟ್!
