ಮೆಟ್ರೋದಲ್ಲಿ ಹುಡುಗಿಯರ ವಿಡಿಯೋ ರೆಕಾರ್ಡ್ ಮಾಡಿ ವಿಕೃತಿ ಮರೆದಿದ್ದ ಕಿಡಿಗೇಡಿ ಅರೆಸ್ಟ್!

ಬೆಂಗಳೂರು : ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವ ಹುಡುಗಿಯರ ವಿಡಿಯೋ ರೆಕಾರ್ಡ್ ಮಾಡಿ ಇನ್ಸ್ಟಾ ಗ್ರಾಂ ನಲ್ಲಿ ಅಪ್ಲೋಡ್‌ ಮಾಡಿ ವಿಕೃತಿ ಮೆರೆದಿದ್ದ ಕಿಡಿಗೇಡಿಯನ್ನು ಪೊಲೀಸರು ಬಂಧಿಸಿದ್ದಾರೆ.

metro_chicks ಖಾತೆಯಿಂದ 13ಕ್ಕೂ ಹೆಚ್ಚು ವಿಡಿಯೋ ಅಪ್‌ಲೋಡ್‌ ಮಾಡಿದ್ದ ದಿಗಂತ್​ ಎಂಬಾತನನ್ನ ಬನಶಂಕರಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹಾಸನದ ಹೊಳೆನರಸೀಪುರದ ಮೂಲದ ದಿಗಂತ್​ನನ್ನು ಇಂದು ಬೆಂಗಳೂರಿನ ಪೀಣ್ಯ ಬಳಿ ಬಂಧನ ಮಾಡಲಾಗಿದೆ.

metro_chicks ಖಾತೆಯಿಂದ 13ಕ್ಕೂ ಹೆಚ್ಚು ವಿಡಿಯೋ ಅಪ್‌ಲೋಡ್‌ ಮಾಡಲಾಗಿತ್ತು. ಈ ಖಾತೆಯನ್ನು 5,538 ಮಂದಿ ಫಾಲೋ ಮಾಡುತ್ತಿದ್ದು, ಮೆಟ್ರೋ ರೈಲಿನ ಒಳಗೆ, ನಿಲ್ದಾಣದಲ್ಲಿ ಹುಡುಗಿಯರ ಆಕ್ಷೇಪಾರ್ಹ ರೀತಿಯ ವಿಡಿಯೋಗಳನ್ನು ರೆಕಾರ್ಡ್‌ ಮಾಡಲಾಗಿತ್ತು. ಈ ಖಾತೆಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ವಿಡಿಯೋಗಳು ಡಿಲೀಟ್‌ ಆಗಿದೆ. ಈ ಸಂಬಂಧ ಇನ್‌ಸ್ಟಾ ಪೇಜ್‌ ವಿರುದ್ಧ ಬನಶಂಕರಿ ಠಾಣೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲು ಮಾಡಿಕೊಂಡು ವಿಡಿಯೋ ಅಪ್ಲೋಡ್‌ ಮಾಡಿದವರ ಪತ್ತೆಗೆ ಬಲೆ ಬೀಸಿದ್ದರು.

ಈ ಬಗ್ಗೆ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಯುವತಿಯರ ವಿಡಿಯೋ ಸೆರೆಹಿಡಿಯುತ್ತಿದ್ದವನನ್ನ ಬಂಧಿಸಿದ್ದೇವೆ. ಆರೋಪಿ ಮೆಟ್ರೋದಲ್ಲಿ ಯುವತಿಯರ ವಿಡಿಯೋ ಮಾಡುತ್ತಿದ್ದ. ಬಳಿಕ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದ. ಈ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಆರೋಪಿಯನ್ನು ಬಂಧಿಸಿ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಬಂಧಿತ ಆರೋಪಿ ಹಾಸ‌ನದ ಹೊಳೆನರಸೀಪುರದವನಾಗಿದ್ದು, ಬೆಂಗಳೂರಿನ ತಿಗಳರ ಪಾಳ್ಯವಾಸವಾಗಿದ್ದ. ಮುರುಗೇಶ್ ಪಾಳ್ಯದ ಖಾಸಗಿ ಕಂಪೆನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡ್ತಿದ್ದ. ಕೆಲಸಕ್ಕೆ ತಿಗಳರ ಪಾಳ್ಯದಿಂದ ಮುರುಗೇಶ್ ಪಾಳ್ಯ ನಡುವೆ ಮೇಟ್ರೋದಲ್ಲಿ ಪ್ರಯಾಣ ಮಾಡುವಾಗ ರೆಕಾರ್ಡ್ ಮಾಡುತ್ತಿದ್ದ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ : ಬಹುನಿರೀಕ್ಷಿತ “45” ಚಿತ್ರದ ‘ಶಿವಂ ಶಿವಂ ಸನಾತನಂ’ ಸಾಂಗ್ ರಿಲೀಸ್ – ಶ್ರೀ ವಿಭೂಷಿತ ಶ್ರೀಬಾಲ್ಕಾನಂದ ಗಿರಿ ಜಿ ಮಹಾರಾಜ್ ಸ್ವಾಮೀಜಿ ಸಾಥ್!

Btv Kannada
Author: Btv Kannada

Read More