ಬೆಂಗಳೂರು : ಸಹ ಕಲಾವಿದೆ ಮೇಲೆ ಅತ್ಯಾಚಾರವೆಸಗಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿರುವ ಅನ್ನಪೂರ್ಣೇಶ್ವರಿ ನಗರ ಪೊಲೀಸರು, ಕಾಮಿಡಿ ಕಿಲಾಡಿ ರಿಯಾಲಿಟಿ ಶೋ ಖ್ಯಾತಿಯ ಮಡೆನೂರು ಮನು ಅವರನ್ನು ನಿನ್ನೆ ಬಂಧಿಸಿದ್ದರು.
ಇಂದು ಮಡೆನೂರು ಮನುಗೆ ಮೆಡಿಕಲ್ ಟೆಸ್ಟ್ ಮಾಡಿಸಿ, ಆ ಬಳಿಕ ನಟನನ್ನು ಪೊಲೀಸರು 6th ACJM ಕೋರ್ಟ್ಗೆ ಹಾಜರು ಪಡಿಸಿದ್ದಾರೆ. ರೇಪಿಸ್ಟ್ ಮಡೆನೂರು ಮನು ಅವರನ್ನು ಇದೀಗ ಕೋರ್ಟ್ ಐದು ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿದೆ. ಇನ್ನು ಮೇ.27ರವರೆಗೆ ಅತ್ಯಾಚಾರ ಆರೋಪಿ ಮಡೆನೂರು ಮನು ಪೊಲೀಸ್ ಕಸ್ಟಡಿಯಲ್ಲಿರಲಿದ್ದಾನೆ.
ಹಾಸ್ಯ ನಟನಾಗಿ ಖ್ಯಾತಿ ಪಡೆದಿದ್ದ ಮನು, ‘ಕುಲದಲ್ಲಿ ಕೀಳ್ಯಾವುದೋ’ ಎಂಬ ಚಿತ್ರದಲ್ಲಿ ನಾಯಕನಾಗಿ ಬಡ್ತಿ ಪಡೆದಿದ್ದು, ಈ ಚಿತ್ರ ಇಂದೇ ಬಿಡುಗಡೆಯಾಬೇಕಿತ್ತು. ಇದೀಗ ಮಡೆನೂರು ಮನು ಅವರು ಬಂಧನ ಆಗಿದ್ದು, ಸಿನಿಮಾ ಇಂದು ರಿಲೀಸ್ ಆಗುತ್ತಿಲ್ಲ. ಹೀಗಾಗಿ ಚಿತ್ರತಂಡ ಸದ್ಯ ಆಘಾತಕ್ಕೋಳಗಾಗಿದೆ.
ಇದನ್ನೂ ಓದಿ : ರತನ್ ಗಂಗಾಧರ್ ನಿರ್ದೇಶನದ “ಸೀಸ್ ಕಡ್ಡಿ” ಟ್ರೈಲರ್ ರಿಲೀಸ್!

Author: Btv Kannada
Post Views: 168