ತಾಳಿ ಕಟ್ಟುವ ವೇಳೆ ಮುರಿದು ಬಿದ್ದ ಮದುವೆ – ಕೊನೆ ಕ್ಷಣದಲ್ಲಿ ನಂಗೆ ಮದ್ವೆ ಬೇಡ ಎಂದ ವಧು!

ಹಾಸನ : ತಾಳಿ ಕಟ್ಟುವ ವೇಳೆ ನಡೆದ ಹೈಡ್ರಾಮದಿಂದ ಕೊನೆ ಕ್ಷಣದಲ್ಲಿ ಮದುವೆ ಮುರಿದು ಬಿದ್ದಿದೆ. ಮುಹೂರ್ತದ ವೇಳೆ ವಧು ಮದುವೆ ನಿಲ್ಲಿಸಿರುವ ಘಟನೆ ಹಾಸನ ನಗರದ ಶ್ರೀ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ನಡೆದಿದೆ.

 

ಹಾಸನ ತಾಲ್ಲೂಕಿನ, ಬೂವನಹಳ್ಳಿ ಗ್ರಾಮದ ಸ್ನಾತಕೋತ್ತರ ಪದವಿ ಓದಿರುವ ಪಲ್ಲವಿಗೆ ಆಲೂರು ತಾಲ್ಲೂಕಿನ ವೇಣುಗೋಪಾಲ.ಜಿ ಜೊತೆ ಇಂದು ಮದುವೆ ನಿಶ್ಚಯವಾಗಿತ್ತು. ವರ ಈಶ್ವರಹಳ್ಳಿ ಕೂಡಿಗೆಯಲ್ಲಿ ವೇಣುಗೋಪಾಲ.ಜಿ ಸರ್ಕಾರಿ ಶಾಲೆ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದಾನೆ. ಮುಹೂರ್ತದ ವೇಳೆ ಯುವತಿಗೆ ಫೋನ್ ಕರೆ ಬಂದಿದೆ. ನಂತರ ನಾನು ಬೇರೆ ಹುಡುಗನನ್ನು ಪ್ರೀತಿಸುತ್ತಿದ್ದೇನೆ ಮದುವೆ ಬೇಡ ಎಂದು ವಧು ಹಠ ಹಿಡಿದಿದ್ದಾಳೆ.

 

ತೀವ್ರ ವಿರೋಧ ವ್ಯಕ್ತಪಡಿಸಿದ ಯುವತಿ ತಕ್ಷಣವೇ ಮದುವೆ ಬೇಡ ಎಂದು ರೂಂಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾಳೆ. ಪೋಷಕರ ಮನವೊಲಿಕೆಗೂ ಕ್ಯಾರೇ ಎನ್ನದ ಯುವತಿ ಮದುವೆ ಬೇಡವೇ ಬೇಡ ಎಂದು ಹಠ ಹಿಡಿದಿದ್ದಾಳೆ. ಹಾಗಾಗಿ ವರ ನನಗೂ ಈ ಮದುವೆ ಬೇಡ ಎಂದಿದ್ದಾನೆ. ಕಲ್ಯಾಣಮಂಟಪಕ್ಕೆ ವಧು-ವರನ ಕಡೆಯ ನೂರಾರು ಮಂದಿ ಆಗಮಿಸಿದ್ದು ಮಗಳು ಮದುವೆ ಬೇಡ ಎಂದಿದ್ದಕ್ಕೆ ಪೋಷಕರು ಕಣ್ಣೀರಿಟ್ಟಿದ್ದಾರೆ.

 ಇದನ್ನೂ ಓದಿ : ಡಿ ಬಾಸ್​ಗೆ ಮತ್ತೆ ಸಂಕಷ್ಟ – ನಟ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿಗೆ ಸಮನ್ಸ್ ಜಾರಿ!

 

Btv Kannada
Author: Btv Kannada

Read More