ಲಕ್ನೋ : ಐಪಿಎಲ್ನ ಲೀಗ್ ಹಂತದಲ್ಲಿ ಅಂತಿಮಘಟ್ಟ ತಲುಪಿರುವ ಆರ್ಸಿಬಿ ಇಂದು ಲಕ್ನೋದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ. ಈಗಾಗ್ಲೇ ಪ್ಲೇ ಆಫ್ ತಲುಪಿರುವ ಬೆಂಗಳೂರು ತಂಡ, ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಕಾಪಾಡಿಕೊಳ್ಳಲು ಇಂದಿನ ಪಂದ್ಯ ತುಂಬಾನೇ ಮುಖ್ಯವಾಗಿದೆ.
ಈಗಾಗಲೇ 12 ಪಂದ್ಯಗಳನ್ನು ಆಡಿರುವ ಆರ್ಸಿಬಿ 8 ಮ್ಯಾಚ್ನಲ್ಲಿ ಗೆದ್ದು, 17 ಅಂಕದೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಆರ್ಸಿಬಿ ಮುಂದೆ ಇಂದು ನಡೆಯುವ ಪಂದ್ಯ ಸೇರಿ ಒಟ್ಟು ಎರಡು ಲೀಗ್ ಹಂತದ ಪಂದ್ಯಗಳಿವೆ. ಈ ಎರಡೂ ಪಂದ್ಯಗಳನ್ನು ಗೆದ್ದರೆ, ಆರ್ಸಿಬಿ ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳಲ್ಲಿ ಒಂದು ಸ್ಥಾನವನ್ನು ಅಲಂಕರಿಸಲಿದೆ. ಹೀಗಾಗಿ ಇಂದು ನಡೆಯಲಿರುವ ಪಂದ್ಯದಲ್ಲಿ ಗೆಲುವು ಅನಿವಾರ್ಯ. ಆದರೆ ಆರ್ಸಿಬಿ ತನ್ನ ಪ್ಲೇಯಿಂಗ್-11ನಲ್ಲಿ ಯಾರನ್ನೆಲ್ಲ ಆಡಿಸಲಿದೆ ಅಂತಾ ಕುತೂಹಲ ಮೂಡಿಸಿದೆ.
ಸಂಭಾವ್ಯ ಆಟಗಾರರ ಪಟ್ಟಿ ಹೀಗಿದೆ : ಫಿಲ್ ಸಾಲ್ಟ್ (ವಿಕೆಟ್ ಕೀಪರ್), ವಿರಾಟ್ ಕೊಹ್ಲಿ, ಮಯಾಂಕ್ ಅಗರ್ವಾಲ್, ರಜತ್ ಪಾಟೀದಾರ್ (ಕ್ಯಾಪ್ಟನ್), ಜಿತೇಶ್ ಶರ್ಮಾ, ಟಿಮ್ ಡೆವಿಡ್, ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಳ್, ಲುಂಗಿ ಎನ್ಗಿಡಿ ಆಡುವ ಸಾಧ್ಯತೆ ಇದೆ.
ಸನ್ ರೈಸರ್ಸ್ ಹೈದರಾಬಾದ್ ಬಗ್ಗೆ ಮಾತನ್ನಾಡೋದಾದರೆ, ಈಗಾಲೇ ಟೂರ್ನಿಯಿಂದ ಹೊರಬಿದ್ದಿದೆ. ಆಡಿರುವ 12 ಪಂದ್ಯಗಳಲ್ಲಿ 4 ಮ್ಯಾಚ್ ಗೆದ್ದು ಪ್ರಸ್ತುತ ಪಾಯಿಂಟ್ಸ್ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಹೀಗಾಗಿ ಹೈದರಾಬಾದ್ ತಂಡಕ್ಕೆ ನಾಳಿನ ಪಂದ್ಯ ಮಹತ್ವದ್ದಾಗಿಲ್ಲ.
ಇದನ್ನೂ ಓದಿ : ಮೈಸೂರು ಸ್ಯಾಂಡಲ್ ಸೋಪ್ಗೆ ತಮನ್ನಾ ರಾಯಭಾರಿ – ಕನ್ನಡಿಗರ ವಿರೋಧಕ್ಕೆ ಸಚಿವ ಎಂ.ಬಿ. ಪಾಟೀಲ್ ಸ್ಪಷ್ಟನೆ!
