ಮೈಸೂರು ಸ್ಯಾಂಡಲ್ ಸೋಪ್​ಗೆ ತಮನ್ನಾ ರಾಯಭಾರಿ.. ಕೂಡಲೇ ಈ ಒಪ್ಪಂದ ರದ್ದು ಮಾಡಿ – ರೂಪೇಶ್ ರಾಜಣ್ಣ ಗರಂ!

ಬೆಂಗಳೂರು : ರಾಜ್ಯ ಸರ್ಕಾರ ಒಡೆತನದ ಮೈಸೂರು ಸ್ಯಾಂಡಲ್‌ಸೋಪ್​ಗೆ ಬಹುಭಾಷಾ ನಟಿ ತಮನ್ನಾ ಭಾಟಿಯಾ ರಾಯಭಾರಿಯಾಗಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರವು ತಮ್ಮ ಒಡೆತನದ ಮೈಸೂರು ಸ್ಯಾಂಡಲ್ ಸೋಪ್​ಗೆ 2 ವರ್ಷ 2 ತಿಂಗಳ ಅವಧಿಗೆ ರಾಯಭಾರಿ ಆಗಿಸಿ 6.2 ಕೋಟಿ ನೀಡಲು ಒಪ್ಪಂದ ಮಾಡಿಕೊಂಡಿದೆ.
ನಟಿ ತಮನ್ನಾ ಭಾಟಿಯಾ ಅವರು ಈ ಬ್ರ್ಯಾಂಡ್​ಗೆ ರಾಯಭಾರಿ ಆಗಿರೋದು ವಿಶೇಷ. ಇದಕ್ಕೆ ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ಶುರುವಾಗಿದ್ದು, ತಮನ್ನಾ ಬದಲು ಕನ್ನಡದವರನ್ನೇ ಆಯ್ಕೆ ಮಾಡಿಕೊಳ್ಳಬಹುದಿತ್ತಲ್ಲ ಎಂದು ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಗರಂ ಆಗಿದ್ದಾರೆ.
ಕೂಡಲೇ ಈ ಒಪ್ಪಂದ ರದ್ದು ಮಾಡಿ, ನಮ್ಮ ನಂದಿನಿ ಹಾಲು ಇಂದು ಪ್ರಪಂಚ ಮುಟ್ಟಿದೆ. ಹಾಗೆಯೇ ಮೈಸೂರು ಸ್ಯಾಂಡಲ್ ಕೂಡ ಎಲ್ಲೆಡೆ ಮುಟ್ಟಿದೆ. ಅನವಶ್ಯಕವಾಗಿ ಬಳಸುತತ್ತಿರೋ ಹಣವನ್ನು ಯಾವುದಾದ್ರೂ ನಾಡಿನ ಜನರ ಅಭಿವೃದ್ಧಿಗೆ ಬಳಸಿ. ಅದು ಬಿಟ್ಟು ಈ ರೀತಿ ಪೋಲು ಮಾಡೋದು ಎಷ್ಟು ಸರಿ, ಯಾವ ನಟಿ ಕೂಡ ಇಲ್ಲದೇ
ಕಳೆದ ವರ್ಷ 400 ಕೋಟಿ ಲಾಭ ಮಾಡಿರೋ ಸೋಪ್ ಕಂಪನಿ. ಈಗ ಈ ಲಾಭದ ದುಡ್ಡು ಹೇಗೆ ಖರ್ಚು ಮಾಡ್ಬೇಕು ಅಂತ 6. 20 ಕೋಟಿ ಕೊಟ್ಟು ಇವರನ್ನು ಬ್ರಾಂಡ್ ಅಂಬಾಸಿಡರ್ ಮಾಡೋದೇನಿದೆ ಎಂದು ರೂಪೇಶ್ ರಾಜಣ್ಣ ಕಿಡಿ ಕಾರಿದ್ದಾರೆ.
ಸಚಿವ ಎಂ.ಬಿ ಪಾಟೀಲ್, ಸಿಎಂ ಸಿದ್ದರಾಮಯ್ಯನವರೇ ಬ್ರಾಂಡ್ ಅಂಬಾಸಿಡರ್ ಬೇಕೇ ಬೇಕು ಅಂದ್ರೆ ಯಾಕೆ ಕರ್ನಾಟಕದಲ್ಲಿ ಯಾರು ಇಲ್ಲವೇ? ಜನರ ದುಡ್ಡನ್ನು ಹೀಗೆ ಪೋಲು ಮಾಡೋದು ಸರಿಯೇ? ಕೂಡಲೇ ಇದನ್ನು ರದ್ದು ಮಾಡಿ ಎಂದು ಸೋಶಿಯಲ್ ಮೀಡಿಯಾದಲ್ಲಿ ರೂಪೇಶ್ ರಾಜಣ್ಣ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ : ‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾ ಹೀರೋ ಮಡೆನೂರು ಮನು ಅರೆಸ್ಟ್!

Btv Kannada
Author: Btv Kannada

Read More