ಬೆಂಗಳೂರು: ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರನ್ನು ಮೈಸೂರು ಸ್ಯಾಂಡಲ್ ಸೋಪ್ನ ಅಧಿಕೃತ ರಾಯಭಾರಿಯನ್ನಾಗಿ 2 ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ.
ರಾಜ್ಯ ಸರ್ಕಾರದ ಅಧೀನದಲ್ಲಿರುವ ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ ಲಿಮಿಟೆಡ್ ನಿಂದ ಈ ಪ್ರಕಟಣೆ ಹೊರಬಿದ್ದಿದ್ದು, ಮೈಸೂರು ಸ್ಯಾಂಡಲ್ ಮತ್ತು ಇತರ ಉತ್ಪನ್ನಗಳಿಗೆ 2 ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ.
ಈಗಾಗಲೇ ಅನೇಕ ಬ್ಯೂಟಿ ಬ್ರ್ಯಾಂಡ್ಗಳು ತಮನ್ನಾ ಭಾಟಿಯಾ ಜೊತೆ ಒಪ್ಪಂದ ಮಾಡಿಕೊಂಡಿವೆ. ಈಗ ಮೈಸೂರು ಸ್ಯಾಂಡಲ್ಸೋಪ್ ಕೂಡ ಈ ನಟಿಯ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ. ಎರಡು ವರ್ಷಗಳ ಕಾಲ ತಮನ್ನಾ ಜೊತೆ ಕರ್ನಾಟ ಸರ್ಕಾರ ಒಪ್ಪಂದ ಇರಲಿದ್ದು, ಇದಕ್ಕಾಗಿ ನಟಿಗೆ ಬರೋಬ್ಬರಿ 6.20 ಕೋಟಿ ರೂಪಾಯಿ ನೀಡಲಾಗಿದೆ.
ಇದನ್ನೂ ಓದಿ : ಕೋರಮಂಗಲದಲ್ಲಿ ಮರದ ಕೊಂಬೆ ಬಿದ್ದು ವ್ಯಕ್ತಿ ಸಾವು – ಡೆಡ್ಲಿ ಸೀನ್ ಸಿಸಿಟಿವಿಯಲ್ಲಿ ಸೆರೆ!

Author: Btv Kannada
Post Views: 210