ಬೆಂಗಳೂರು : ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ವಿರುದ್ದ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ನಟನ ವಿರುದ್ಧ ಸಹ ಕಲಾವಿದೆಯೇ ರೇಪ್ ಕೇಸ್ ದಾಖಲಿಸಿದ್ದಾರೆ.
ದೂರಿನ ಪ್ರಕಾರ, ಮಡೆನೂರು ಮನು ಮತ್ತು ದೂರುದಾರ ನಟಿ ಪರಸ್ಪರ ಪರಿಚಿತರಾಗಿದ್ದರು. ಮನು ಅವರು ಮಹಿಳೆಗೆ ಮದುವೆಯಾಗುವುದಾಗಿ ಭರವಸೆ ನೀಡಿದ್ದರು. ಇಬ್ಬರು ಕಾಮಿಡಿ ಕಿಲಾಡಿಗಳು ಶೋನಲ್ಲಿ ಕೂಡ ಒಟ್ಟಿಗೆ ಭಾಗವಹಿಸಿದ್ದರು.
FIR ನಲ್ಲಿ ಏನಿದೆ ಗೊತ್ತಾ? ದೂರುದಾರೆಗೆ ಸ್ವತಃ ಮಡೆನೂರು ಮನು ನಾಗರಭಾವಿಯಲ್ಲಿ ಬಾಡಿಗೆ ಮನೆಯನ್ನು ಹುಡುಕಿಕೊಟ್ಟಿದ್ದರು. 2018 ರಿಂದಲೂ ಮನುವಿನ ಪರಿಚಯ ಇತ್ತು, ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ಜೊತೆಯಾಗಿ ಕೆಲಸ ಮಾಡಿದ್ವಿ ಅಂತ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮೊದಲಿಗೆ ಪರಿಚಯ ಆಗಿ ಸ್ನೇಹ ಬೆಳೆದಿತ್ತು. ಮನುಗೆ ಮದುವೆ ಆಗಿ ಒಂದು ಮಗು ಕೂಡ ಇದೆ. 29/11/2022 ರಂದು ಶಿವಮೊಗ್ಗದ ಶಿಕಾರಿಪುರದ ಕಾರ್ಯಕ್ರಮಕ್ಕೆ ಮನು ಹಾಗೂ ಸಹ ಕಲಾವಿದೆ ಹೋಗಿದ್ದರು. ಅಲ್ಲಿ ಒಂದು ಹಾಸ್ಯ ಕಾರ್ಯಕ್ರಮ ಮಾಡಿದ್ದರು. ಕಾರ್ಯಕ್ರಮದ ಬಳಿಕ ಸಂಭಾವನೆ ನೀಡುವ ನೆಪದಲ್ಲಿ ರೂಂಗೆ ಬಂದು ನಟಿಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಇದಾದ ಮೇಲೆ 2022ನೇ ಸಾಲಿನ ಡಿಸೆಂಬರ್ ಮಾಹೆಯ 3ನೇ ರಂದು ನಟಿಯ ಮನೆಗೆ ಬಂದು ಆಕೆಯ ವಿರೋಧದ ನಡುವೆ ತಾಳಿ ಕಟ್ಟಿದ್ದಾನೆ. ನಂತರ ಅದೇ ಮನೆಯಲ್ಲಿ ಮನು ಸಹ ಕಲಾವಿದೆಯ ಮೇಲೆ ಹಲವಾರು ಬಾರಿ ಅತ್ಯಾಚಾರ ಮಾಡಿದ್ದಾನೆ.
ಈ ನಡುವೆ ಆಕೆ ಪ್ರಗ್ನೆಂಟ್ ಆಗಿದ್ದು, ಇದನ್ನು ತಿಳಿದ ಮನು ಮನೆಗೆ ಬಂದು ನಟಿಗೆ ಗರ್ಭಪಾತ ಆಗುವ ಮಾತ್ರೆ ನೀಡಿ ಗರ್ಭಪಾತ ಮಾಡಿಸಿದ್ದಾನೆ. ಇದಾದ ಮೇಲೆ ಮತ್ತೆ ನಟಿ ಪ್ರೆಗ್ನೆಂಟ್ ಆಗಿದ್ದು, ಮತ್ತೆ ಅದೇ ರೀತಿ ಆಕೆಗೆ ಗರ್ಭಪಾತ ಮಾಡಿಸಿದ್ದಾನೆ. ನಂತರ ಮನು ನಾಗರಭಾವಿಯಲ್ಲಿರುವ ಮನೆಯಲ್ಲಿಯೂ ಸಹ ನಟಿಯ ಮೇಲೆ ಅತ್ಯಾಚಾರ ಮಾಡಿ ಆಕೆಯ ಖಾಸಗಿ ವಿಡಿಯೋವನ್ನು ಆತನ ಪೋನ್ನಲ್ಲಿ ರೆಕಾರ್ಡ್ ಮಾಡಿಕೊಂಡು ನಟಿಗೆ ಹೊಡೆದು ಹಲ್ಲೆ ಮಾಡಿ ಈ ವಿಚಾರವನ್ನು ಯಾರಿಗೂ ಹೇಳಬೇಡ ಎಂದು ಬೆದರಿಕೆ ಹಾಕಿದ್ದಾನೆ.
ಮನು ಒಂದು ನಾಯಕ ನಟನಾಗಿ ಸಿನಿಮಾ ಮಾಡಲು ಒಪ್ಪಿಕೊಂಡಿದ್ದು, ಇದಕ್ಕೆ ನಟಿ ಸುಮಾರು ಲಕ್ಷಾಂತರ ರೂಪಾಯಿಗಳನ್ನು ಮನುಗೆ ನೀಡಿದ್ದಾರೆ. ಆದ್ದರಿಂದ ಈ ರೀತಿ ಆಕೆಯ ಮೇಲೆ ಅತ್ಯಾಚಾರ ಮಾಡಿ, ಮದುವೆ ಮಾಡಿಕೊಂಡಂತೆ ನಾಟಕ ಮಾಡಿ, ನಟಿಗೆ ಗರ್ಭಪಾತ ಮಾಡಿಸಿ ಮದುವೆ ಮಾಡಿಕೊಳ್ಳದೆ ಮೋಸ ಮಾಡಿದ್ದಾನೆ. ಇದನ್ನು ಕೇಳಿದಕ್ಕೆ ಮಡೆನೂರು ಮನು ಆಕೆಯ ಮೇಲೆ ಹಲ್ಲೆ ಮಾಡಿ ಪ್ರಾಣ ಬೆದರಿಕೆಯನ್ನು ಹಾಕಿದ್ದಾನೆ.
ಇದನ್ನೂ ಓದಿ : ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಮಡೆನೂರು ಮನು ವಿರುದ್ದ ರೇಪ್ ಕೇಸ್ ದಾಖಲು!
