ಇಂದು ಭಾರತ-ಇಂಗ್ಲೆಂಡ್ 2ನೇ ಏಕದಿನ ಪಂದ್ಯ – ಸರಣಿ ಗೆಲುವಿನ ಮೇಲೆ ಕಣ್ಣಿಟ್ಟ ರೋಹಿತ್ ಪಡೆ!

ಚಾಂಪಿಯನ್ಸ್​ ಟ್ರೋಫಿಗೂ ಮುನ್ನ ಭಾರತ-ಇಂಗ್ಲೆಂಡ್​ ತಂಡಗಳು ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡುತ್ತಿವೆ. ಗುರುವಾರ ನಡೆದಿದ್ದ ಮೊದಲ ಪಂದ್ಯಲ್ಲಿ ರೋಹಿತ್​ ಸೈನ್ಯ ಆಂಗ್ಲರನ್ನು ಮಣಿಸಿ 1-0 ಅಂತರದಿಂದ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ.

ಇಂದು ಎರಡನೇ ಪಂದ್ಯಕ್ಕಾಗಿ ಉಭಯ ತಂಡಗಳು ಸಜ್ಜಾಗಿವೆ. ಎರಡನೇ ಪಂದ್ಯವನ್ನು ರೋಹಿತ್ ಪಡೆ ಗೆದ್ದುಕೊಂಡರೆ, ಟಿ20 ಸರಣಿಯ ಜೊತೆಗೆ ಏಕದಿನ ಸರಣಿಯನ್ನು ಭಾರತ ಗೆದ್ದಂತ್ತಾಗುತ್ತದೆ. ಇತ್ತ ಇಂಗ್ಲೆಂಡ್ ಎರಡನೇ ಏಕದಿನ ಪಂದ್ಯವನ್ನು ಗೆದ್ದು ಏಕದಿನ ಸರಣಿಯನ್ನು 1-1ರಿಂದ ಸಮಬಲಗೊಳಿಸಲು ಎದುರು ನೋಡುತ್ತಿದೆ.

ಇಂದಿನ ಪಂದ್ಯಕ್ಕೆ ಕಟಕ್‌ನ ಬಾರಾಬತಿ ಮೈದಾನ ಆತಿಥ್ಯ ವಹಿಸಿಕೊಂಡಿದ್ದು, 6 ವರ್ಷಗಳ ನಂತರ ಮೊದಲ ಬಾರಿಗೆ ಈ ಮೈದಾನದಲ್ಲಿ ಏಕದಿನ ಪಂದ್ಯ ನಡೆಯುತ್ತಿದೆ. ಟೀಂ ಇಂಡಿಯಾ ಇಲ್ಲಿ ಆಡಿರುವ ಹೆಚ್ಚಿನ ಪಂದ್ಯಗಳಲ್ಲಿ ಗೆಲುವು ಸಾಧಿಸಿ ಪ್ರಾಬಲ್ಯ ಮೆರೆದಿದೆ.

ಇನ್ನು ಭಾರತ ಮತ್ತು ಇಂಗ್ಲೆಂಡ್ ತಂಡಗಳು ಈವರೆಗೆ ಒಟ್ಟು 108 ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇವುಗಳಲ್ಲಿ ಇಂಗ್ಲೆಂಡ್ 44 ಬಾರಿ ಗೆಲುವು ಸಾಧಿಸಿದ್ದರೆ, ಭಾರತ 58 ಪಂದ್ಯಗಳನ್ನು ಗೆದ್ದಿದೆ. ಅದೆ ರೀತಿ ಇಂದಿನ ಪಂದ್ಯವನ್ನು ಗೆದ್ದು ಸರಿಣಿ ವಶಪಡಿಸಿಕೊಳ್ಳಲು ರೋಹಿತ್​ ಪಡೆ ಭರ್ಜರಿ ತಯಾರಿ ನಡೆಸಿದೆ.

ಇಂದಿನ ಪಂದ್ಯ ಎಷ್ಟು ಗಂಟೆಗೆ ಶುರು? ಲೈವ್​ ಸ್ಟ್ರೀಮಿಂಗ್ ವಿವರ ಇಲ್ಲಿದೆ : ಭಾರತ-ಇಂಗ್ಲೆಂಡ್ ​ನಡುವಿನ 2ನೇ ಏಕದಿನ ಪಂದ್ಯ ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್​ನಲ್ಲಿ ನೇರಪ್ರಸಾರ ಇರಲಿದೆ. ಹಾಗೆಯೇ ಮೊಬೈಲ್​ನಲ್ಲಿ ಲೈವ್​ ಸ್ಟ್ರೀಮಿಂಗ್​ ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​​ನಲ್ಲಿ ವೀಕ್ಷಿಸಬಹುದು. ಮಧ್ಯಾಹ್ನ 1:30ಕ್ಕೆ ಪಂದ್ಯ ಶುರುವಾಗಲಿದೆ.

Btv Kannada
Author: Btv Kannada

Read More

Read More