ಆಲಿಕಲ್ಲು ಮಳೆ, ಗುಡುಗು, ಮಿಂಚಿನಿಂದ ಇಂಡಿಗೋ ವಿಮಾನ ಜಸ್ಟ್​ ಮಿಸ್ – ತುರ್ತು ಭೂಸ್ಪರ್ಶ.. 227 ಜನ ಬದುಕಿದ್ದೇ ಪವಾಡ!

ನವದೆಹಲಿ : ಆಲಿಕಲ್ಲು ಮಳೆ ಸುರಿಯುತ್ತಿರುವಾಗ 227 ಪ್ರಯಾಣಿಕರನ್ನು ಹೊತ್ತು ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನವೊಂದು ನಿನ್ನೆ ದೊಡ್ಡ ಅನಾಹುತದಿಂದ ಪಾರಾಗಿದೆ. ಇದರಿಂದ ವಿಮಾನದ ಮುಂದಿನ ಭಾಗ ಹಾನಿಯಾಗಿದ್ದು ಬಿಟ್ಟರೇ ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ.

ಇಂಡಿಗೋ ವಿಮಾನ 6E2142 ದೆಹಲಿಯಿಂದ ಜಮ್ಮುಕಾಶೀರದ ಶ್ರೀನಗರಕ್ಕೆ 227 ಪ್ರಯಾಣಿಕರನ್ನು ಹೊತ್ತು ಆಕಾಶದಲ್ಲಿ ಪ್ರಯಾಣಿಸುತ್ತಿತ್ತು. ವಿಮಾನ ಆಕಾಶದಲ್ಲಿ ಇರುವಾಗಲೇ ಬಲವಾದ ಆಲಿಕಲ್ಲು ಮಳೆ ಆರಂಭವಾಗಿದೆ. ಆಲಿಕಲ್ಲುಗಳು ವಿಮಾನದ ಮೇಲೆ ಬೀದ್ದಿದ್ದರಿಂದ ಶಬ್ಧ ಕೂಡ ಭಯ ಮೂಡಿಸಿದೆ. ಆಲಿಕಲ್ಲು ಮಳೆ ಜೊತೆಗೆ ಗುಡುಗು, ಮಿಂಚು, ಗಾಳಿಯೂ ಜೋರಾಗಿ ಬೀಸುತ್ತಿದ್ದರಿಂದ ಇಡೀ ವಿಮಾನವೇ ಆಕಾಶದಲ್ಲಿ ಅಲುಗಾಡಿದ್ದು ಭಾರೀ ಆತಂಕಕ್ಕೆ ಕಾರಣವಾಗಿತ್ತು.

ಆಕಾಶದಲ್ಲಿ ವಿಮಾನ ಅಲುಗಾಡುತ್ತಿದ್ದಂತೆ ಒಳಗಿದ್ದ ಮಕ್ಕಳು, ಮಹಿಳೆಯರು ಸೇರಿದಂತೆ ಎಲ್ಲ ಪ್ರಯಾಣಿಕರೆಲ್ಲರೂ ಭಯದಿಂದ ಜೋರಾಗಿ ಕಿರುಚಲು, ಕೂಗಲು ಆರಂಭಿಸಿದ್ದಾರೆ. ನಾವು ಬದುಕುವುದಿಲ್ವಾ ಎನ್ನುವ ಮಟ್ಟಿಗೆ ಪ್ರಯಾಣಿಕರು ಭಯ ಪಟ್ಟಿದ್ದಾರೆ. ಪ್ರಕ್ಷುಬ್ಧ ಹವಾಮಾನದಿಂದಾಗಿ ವಿಮಾನ ಪೈಲಟ್ ತಕ್ಷಣ ಶ್ರೀನಗರದ ವಾಯು ಸಂಚಾರ ನಿಯಂತ್ರಣಕ್ಕೆ ತುರ್ತು ವರದಿ ಮಾಡಿದ್ದಾರೆ. ತುರ್ತು ವರದಿ ಬೆನ್ನಲ್ಲೇ ಸಂಜೆ 6:30ಕ್ಕೆ ಸುರಕ್ಷಿತವಾಗಿ ವಿಮಾನ ಶ್ರೀನಗರದಲ್ಲಿ ಲ್ಯಾಂಡ್ ಆಗಿದೆ.

ಆಗಸದಲ್ಲೇ ಇರುವಾಗಲೇ ಆಲಿಕಲ್ಲು ಬಿದ್ದಿದ್ದರಿಂದವಿಮಾನದ ಮೂಗಿನ ಭಾಗ ಹಾನಿಯಾಗಿದೆ. ಆದರೆ ಸುರಕ್ಷಿತವಾಗಿ ವಿಮಾನ ಲ್ಯಾಂಡ್ ಆಗಿದ್ದರಿಂದ ಪ್ರಯಾಣಿಕರೆಲ್ಲ ನಿಟ್ಟುಸಿರು ಬಿಟ್ಟಿದ್ದಾರೆ. ಸದ್ಯ ವಿಮಾನದಲ್ಲಿ ಕೆಲ ಪ್ರಯಾಣಿಕರು ಮಾಡಿದಂತ ವಿಡಿಯೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಪ್ರಯಾಣಿಕರೆಲ್ಲರೂ ಭಯದಿಂದ ಕಿರುಚುತ್ತಿರುವುದು ನೋಡುಗರಿಗೆ ಆತಂಕ ಮೂಡಿಸುವಂತಿದೆ.

ಇದನ್ನೂ ಓದಿ : ನಂಜೇಗೌಡರೇ ನಿಮಗೆ ತಾಕತ್ತಿದ್ದರೆ ರಾಜೀನಾಮೆ ಕೊಟ್ಟು ಚುನಾವಣೆಗೆ ಬನ್ನಿ – ಹೂಡಿ ವಿಜಯ್ ಕುಮಾರ್ ಸವಾಲ್!

Btv Kannada
Author: Btv Kannada

Read More