ನಂಜೇಗೌಡರೇ ನಿಮಗೆ ತಾಕತ್ತಿದ್ದರೆ ರಾಜೀನಾಮೆ ಕೊಟ್ಟು ಚುನಾವಣೆಗೆ ಬನ್ನಿ – ಹೂಡಿ ವಿಜಯ್ ಕುಮಾರ್ ಸವಾಲ್!

ಕೋಲಾರ : ಶಾಸಕ ಕೆ.ವೈ ನಂಜೇಗೌಡರೇ.. ಕಳೆದ ನಿಮ್ಮ ಆಡಳಿತ ಅವಧಿಯಲ್ಲಿ 220 ಕೋಟಿಗಳ ಕಥೆ ಕೇಳಿದ್ದ ಮಾಲೂರು ತಾಲ್ಲೂಕಿನ ಜನ ಈಗ 3,200 ಕೋಟಿಯ ಕಥೆಯನ್ನು ಕೇಳಿ ಕೇಳಿ ಬೇಸತ್ತಿದ್ದಾರೆ. ಸರಿಯಾಗಿ ಗ್ಯಾರಂಟಿಗಳಿಗೆ ಹಣ ಹೊಂದಿಸಲು ಆಗದ ನಿಮಗೆ ಅಭಿವೃದ್ಧಿಗೆ ಹಣವನ್ನು ಬಿಡುಗಡೆಗೊಳಿಸಲು ಸಾಧ್ಯವೇ? ಎಂದು ಸ್ವಾಭಿಮಾನಿ ಪಕ್ಷದ ಮುಖಂಡ ಹೂಡಿ ವಿಜಯ್ ಕುಮಾರ್ ಅವರು ಆಕ್ರೋಶ ಹೊರಹಾಕಿದ್ದಾರೆ.

ಹೂಡಿ ವಿಜಯ್​ಕುಮಾರ್
ಹೂಡಿ ವಿಜಯ್​ಕುಮಾರ್

ಈ ಬಗ್ಗೆ ಫೇಸ್​ಬುಕ್​​ನಲ್ಲಿ ಲೈವ್ ​​ಮೂಲಕ ಹೂಡಿ ವಿಜಯ್​ಕುಮಾರ್ ಅವರು ಕೋಲಾರದ ಮಾಲೂರು ಶಾಸಕ ಕೆ.ವೈ ನಂಜೇಗೌಡ ವಿರುದ್ದ ಗುಡುಗಿದ್ದಾರೆ. ಹೂಡಿ ವಿಜಯ್​ಕುಮಾರ್ ಅವರು ಅಧಿಕಾರದಲ್ಲಿರದಿದ್ದರೂ ಕೂಡ ಇತ್ತೀಚೆಗೆ ತಮ್ಮ ಸ್ವಂತ ಖರ್ಚಿನಲ್ಲಿ ಮಾಲೂರಿನಲ್ಲಿ ಹದಗೆಟ್ಟ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯಕ್ಕೆ ಚಾಲನೆ ನೀಡಿದ್ದರು.

ಆದ್ರೆ, ಈ ವೇಳೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿ, ನಾವೇ ಗುಂಡಿಗಳನ್ನ ಮುಚ್ಚಿಸೋದಾಗಿ ವಾದಿಸಿದ್ದರು. ಆ ಬಳಿಕ ಮಾಲೂರು ಪೊಲೀಸರು ಸ್ವಾಭಿಮಾನಿ ಪಕ್ಷದ ನಾಯಕರೊಂದಿಗೆ ಮಾತುಕತೆ ನಡೆಸಿ ಗುಂಡಿ ಮುಚ್ಚುವ ಕಾರ್ಯವನ್ನು ನಿಲ್ಲಿಸಲು ಸೂಚಿಸಿದ್ದರು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಒಂದು ವಾರದೊಳಗೆ ಗುಂಡಿ ಮುಚ್ಚುವ ಭರವಸೆಯ ಪತ್ರ ನೀಡಿದ ಬಳಿಕ ಸ್ವಾಭಿಮಾನಿ ಪಕ್ಷದ ನಾಯಕರು ಗುಂಡಿ ಮುಚ್ಚುವ ಕಾರ್ಯ ನಿಲ್ಲಿಸಿದ್ದರು.

ಆದಾದ ನಂತರ ಸ್ವಾಭಿಮಾನಿ ಪಕ್ಷದ ನಾಯಕರ ರಸ್ತೆ ಅಭಿವೃದ್ದಿ ಕಾರ್ಯವನ್ನು ಶಾಸಕ ಕೆ.ವೈ ನಂಜೇಗೌಡ ಅವರು ಟೀಕಿಸಿದ್ದರು. ಈ ಬೆನ್ನಲ್ಲೇ ಇದೀಗ ಮಾಲೂರು ಶಾಸಕ ಕೆ.ವೈ.ನಂಜೇಗೌಡ ವಿರುದ್ದ ಹೂಡಿ ವಿಜಯಕುಮಾರ್ ಗುಡುಗಿದ್ದಾರೆ. ‘ಕಳೆದ 2 ವರ್ಷಗಳಿಂದ ಕೆ.ವೈ.ನಂಜೇಗೌಡ ಅಭಿವೃದ್ಧಿಯನ್ನೆ ಮಾಡಿಲ್ಲ. ಮಾಲೂರಿನ ರಸ್ತೆಗಳೆಲ್ಲಾ ಗುಂಡಿ ಬಿದ್ದು ಸಂಚಾರಕ್ಕೆ ಅಯೋಗ್ಯವಾಗಿದೆ. ವಿದ್ಯಾರ್ಥಿಗಳು, ವೃದ್ಧರು ಮಾಲೂರಿನಲ್ಲಿ ಗುಂಡಿಗೆ ಬಿದ್ದು ಕೈ, ಕಾಲು ಕಳೆದುಕೊಳ್ತಿದ್ದಾರೆ. ನಾವೇ ರಸ್ತೆ ರಿಪೇರಿ ಮಾಡಲು ಮುಂದಾದರೆ ಶಾಸಕರು ತಡೆಯೊಡ್ಡುತ್ತಾರೆ. PWD, ಪೊಲೀಸರನ್ನು ಕಳಿಸಿ ರಸ್ತೆ ರಿಪೇರಿಯನ್ನು ಶಾಸಕರು ನಿಲ್ಲಿಸ್ತಾರೆ ಎಂದು ಆರೋಪಿಸಿದ್ದಾರೆ.

ನಂಜೇಗೌಡರೇ ತಾಕತ್ತಿದ್ದರೆ MLAಗೆ ರಾಜೀನಾಮೆ ನೀಡಿ ಚುನಾವಣೆಗೆ ಬನ್ನಿ – PWD ಅಧಿಕಾರಿಗಳು, ಪೊಲೀಸರನ್ನು ಕಳಿಸಿ ರಸ್ತೆ ರಿಪೇರಿಯನ್ನು ಶಾಸಕರು ನಿಲ್ಲಿಸ್ತಾರೆ. ನನ್ನ ಸ್ವಂತ ಖರ್ಚಿನಲ್ಲಿ ರಸ್ತೆ ಕಾಂಕ್ರಿಟ್​​​ ಹಾಕಿದ್ದರೆ ಶಾಸಕರು ನಿಲ್ಲಿಸ್ತಾರೆ. ನಾನು ಮಾಡೋ ಕೆಲಸವನ್ನು ಶಾಸಕರು ಯಾಕೆ ಮಾಡ್ತಿಲ್ಲ? ನನ್ನ ವಿರುದ್ಧ ಅಪಪ್ರಚಾರ ಮಾಡೋ ಶಾಸಕ ನಂಜೇಗೌಡ ಈಗ ಚುನಾವಣೆ ಎದುರಿಸಲಿ. ತಾಕತ್ತಿದ್ದರೆ MLA ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆಗೆ ಬನ್ನಿ. ಮಾಲೂರು ಅಲ್ಲಾದರೂ ಓಕೆ.. ಬೆಂಗಳೂರಲ್ಲಾದರೂ ಓಕೆ.. ಚುನಾವಣೆಗೆ ಬನ್ನಿ ಎಂದು MLA ಕೆ.ವೈ ನಂಜೇಗೌಡಗೆ ಪರಾಜಿತ ಅಭ್ಯರ್ಥಿ ಹೂಡಿ ವಿಜಯಕುಮಾರ್ ಅವರು ನೇರ ಸವಾಲು ಹಾಕಿದ್ದಾರೆ. ಸದ್ಯ ಮಾಲೂರು MLA ನಂಜೇಗೌಡ ರಾಜೀನಾಮೆ ನೀಡಿ ಚುನಾವಣೆ ಎದುರಿಸ್ತಾರಾ ಎಂದು ಕಾದುನೋಡಬೇಕು.

ಶಾಸಕ ಕೆ.ವೈ ನಂಜೇಗೌಡ
ಶಾಸಕ ಕೆ.ವೈ ನಂಜೇಗೌಡ

ಇದನ್ನೂ ಓದಿ : ಇಂದು ಬಿಕನೇರ್ ವಾಯುನೆಲೆಗೆ ಪ್ರಧಾನಿ ಮೋದಿ ಭೇಟಿ!

Btv Kannada
Author: Btv Kannada

Read More