ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಇಂದು ಕೋರ್ಟ್‌ಗೆ ಹಾಜರಾಗಿದ್ದ ಆರೋಪಿಗಳಾದ ನಟ ದರ್ಶನ್ ಮತ್ತು ಪವಿತ್ರಾ ಗೌಡ ಇಬ್ಬರೂ ಪರಸ್ಪರ ಭೇಟಿಯಾಗಿದ್ದಾರೆ.
ಕೋರ್ಟ್‌ನಲ್ಲಿ ವಿಚಾರಣೆ ಮುಗಿಸಿ ಲಿಫ್ಟ್‌ನಲ್ಲಿ ಬರುವಾಗ ಇಬ್ಬರೂ ಮುಖಾಮುಖಿಯಾದರು. ಈ ವೇಳೆ ಫೋನ್ ನಂಬರ್ ಕೊಡುವಂತೆ ಪವಿತ್ರಾಗೌಡ ಹಠ ಮಾಡಿದರು. ನಂಬರ್ ಬೇಕೇ ಬೇಕು ಎಂದು ದುಂಬಾಲು ಬಿದ್ದರು. ಕೈಹಿಡಿದು ಫೋನ್ ನಂಬರ್ ನೀಡುವಂತೆ ಒತ್ತಾಯಿಸಿದರು. ಕೊನೆಗೆ ತನ್ನ ಫೋನ್ ನಂಬರ್ ಅನ್ನು ದರ್ಶನ್, ಪವಿತ್ರಾ ಮೊಬೈಲ್ ಪಡೆದುಕೊಂಡು ಡಯಲ್ ಮಾಡಿಕೊಟ್ಟಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಬಿಡುಗಡೆಯಾದ ಬಳಿಕ ದರ್ಶನ್ ಮತ್ತು ಪವಿತ್ರಾ ಗೌಡ ದೂರ ಆಗಿದ್ದರು. ಪವಿತ್ರಾ ಜೊತೆಗೆ ಸ್ವತಃ ದರ್ಶನ್ ಅಂತರ ಕಾಯ್ದುಕೊಂಡಿದ್ದರು. ಈ ಹಿಂದೆ ಕೋರ್ಟ್ ಆಗಿಮಿಸಿದ್ದಾಗ ಪವಿತ್ರಾ ಜೊತೆ ದರ್ಶನ್ ಮಾತನಾಡುತ್ತಿರಲಿಲ್ಲ. ಇಂದು ಪವಿತ್ರಾಗೌಡ ಹಠ ಮಾಡಿದ್ದಕ್ಕೆ ದರ್ಶನ್ ಫೋನ್ ನಂಬರ್ ಕೊಟ್ಟಿದ್ದಾರೆ.
ಇದನ್ನೂ ಓದಿ : ವಿಚಾರಣೆ ಮುಗಿಸಿ ಹೊರಗೆ ಬರುವಾಗ ಕೈ ಕೈ ಹಿಡಿದುಕೊಂಡು ಬಂದ ದರ್ಶನ್-ಪವಿತ್ರಾಗೌಡ.. ಮತ್ತೆ ಪ್ರೀತಿಯಲ್ಲಿ ಬಿದ್ರಾ ದಾಸ?
