ಬಿಳಿ ಸೀರೆಯುಟ್ಟು ಪವಿತ್ರಾ ಗೌಡ ಕೋರ್ಟ್​ಗೆ ಎಂಟ್ರಿ – ಲುಕ್​ ಮೂಲಕವೇ ‘ದಾಸ’ನಿಗೆ ಸೈಲೆಂಟ್ ಮೆಸೇಜ್ ಕೊಟ್ರಾ?

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ  ಎ1 ಆರೋಪಿ ಪವಿತ್ರಾ ಗೌಡ ಅವರು ಇಂದು ಕೋರ್ಟ್​ಗೆ ಹಾಜರಾಗಿದ್ದಾರೆ. ನಟ ದರ್ಶನ್​ ಸೇರಿ ಇತರ ಆರೋಪಿಗಳಿಗೂ ಕೋರ್ಟ್ ಮುಂದೆ ಹಾಜರಾಗಲು ನೋಟಿಸ್ ಜಾರಿಗೊಳಿಸದ ಬೆನ್ನಲ್ಲೇ ಪ್ರಕರಣದ ಎಲ್ಲಾ ಆರೋಪಿಗಳು ಇಂದು ಕೋರ್ಟ್​ಗೆ ಬಂದಿದ್ದರು.

ಈ ವೇಳೆ ಅಚ್ಚ ಬಿಳುಪಿನ ಸೀರೆ ಹಾಗೂ ಅಚ್ಚ ಬಿಳುಪಿನ ಬ್ಲೌಸ್ ಧರಿಸಿಕೊಂಡು, ಕೂದಲು ಬಿಚ್ಚಿಟ್ಟು ಪವಿತ್ರಾ ಗೌಡ ಕೋರ್ಟ್​ಗೆ ಎಂಟ್ರಿ ಕೊಟ್ಟಿದ್ದಾರೆ. ಪವಿತ್ರಾ ಈ ಹಿಂದೆ ಕಲರ್​ಫುಲ್ ಸೀರೆ ಉಟ್ಟುಕೊಂಡೇ ಕೋರ್ಟ್ ವಿಚಾರಣೆಗ ಬಂದಿದ್ದರು. ಆದ್ರೆ ಈ ಬಾರಿ ಅವರ ಲುಕ್ ಎಲ್ಲರ ಗಮನ ಸೆಳೆದಿದೆ.

ಇನ್ನೊಂದು ವಿಚಾರ ಎಂದರೆ ನಟಿ ಈ ಹಿಂದೆ ಬರುವಾಗ ಕೂದಲು ಪೋನಿಟೇಲ್ ಮಾಡಿದ್ದರು. ಇದೀಗ ನಟಿ ಬಿಳಿ ಸೀರೆ ಉಟ್ಟು, ಕೂದಲು ಬಿಚ್ಚಿಟ್ಟು ಕೋರ್ಟ್​ಗೆ ಬಂದಿದ್ದು, ಇದು ಉದ್ದೇಶಪೂರ್ವಕ ನಡೆಯೇ? ಅಥವಾ ಯಾರಿಗಾದರೂ ಪವಿತ್ರಾ ಗೌಡ ಹಿಡನ್ ಮೆಸೇಜ್ ಕೊಡೋಕೆ ಉದ್ದೇಶಿಸಿದ್ರಾ? ಎಂಬ ಚರ್ಚೆಗಳು ಶುರುವಾಗಿದೆ.

ಸೋಷಿಯಲ್​ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆಗಳಾಗುತ್ತಿದ್ದು, ನೀನಿನ್ನು ನನ್ನ ಪಾಲಿಗಿಲ್ಲ ಎನ್ನುವ ಮೆಸೇಜ್ ಕೊಟ್ರಾ ಪವಿತ್ರಾ ಗೌಡ? ಈ ಫೊಟೋ ನೋಡಿದರೆ ಅದೇ ಭಾವನೆ ಮೂಡಿಸುವಂತೆ ಇದೆ ಎಂದಲ್ಲಾ ಟ್ರೋಲ್​ ಆಗುತ್ತಿದೆ. ಪವಿತ್ರಾ ಗೌಡ ಕಂಪ್ಲೀಟ್ ಬಿಳಿ ಸೀರೆ ಉಟ್ಟು ಬಂದ ಉದ್ದೇಶ ಏನು? ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.

ಮೇ 20ರಂದು ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರ ವಿವಾಹ ವಾರ್ಷಿಕೋತ್ಸವದ ಸಂಭ್ರಮದ ಫೋಟೋಗಳು, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಪೇಜ್​ಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಅದರ ಬೆನ್ನಲ್ಲೇ ಈ ಘಟನೆ ನಡೆದಿದೆ.

ಇದನ್ನೂ ಓದಿ : ಕೊಲೆ ಆರೋಪಿ ನಟ ದರ್ಶನ್ ಕೋರ್ಟ್​ಗೆ ಹಾಜರ್​ – ತನಿಖಾಧಿಕಾರಿಯಿಂದ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಕೆ!

Btv Kannada
Author: Btv Kannada

Read More