ಕೊಲೆ ಆರೋಪಿ ನಟ ದರ್ಶನ್ ಕೋರ್ಟ್​ಗೆ ಹಾಜರ್​ – ತನಿಖಾಧಿಕಾರಿಯಿಂದ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಕೆ!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಇಂದು ಕೋರ್ಟ್​ಗೆ ವಿಚಾರಣೆಗೆ ಹಾಜರಾಗಿದ್ದಾರೆ. ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್​ಗೆ ಆರೋಪಿಗಳಾದ ನಟ ದರ್ಶನ್, ಪವಿತ್ರಾ ಗೌಡ ಹಾಗೂ ಇತರ ಆರೋಪಿಗಳು ಹಾಜರಾಗಿದ್ದು, ವಿಚಾರಣೆ ಎದುರಿಸುತ್ತಿದ್ದಾರೆ. 

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪವಿತ್ರಾ ಗೌಡ A1 ಆರೋಪಿಯಾಗಿದ್ದು, ನಟ ದರ್ಶನ್ A2 ಆರೋಪಿಯಾಗಿದ್ದಾರೆ. ಈ ಕೇಸ್​ನಲ್ಲಿ ಜೈಲು ಸೇರಿದ್ದ ನಟ ದರ್ಶನ್ ಹಾಗೂ ಗ್ಯಾಂಗ್ ಜಾಮೀನಿನ ಮೇಲೆ ಬಿಡಿಗಡೆಯಾಗಿ ಹೊರಬಂದಿದೆ. ಸದ್ಯ ಪ್ರಕರಣದ ವಿಚಾರಣೆ ಕೋರ್ಟ್​ನಲ್ಲಿದ್ದು, ಹೀಗಾಗಿ ಇಂದು ಆರೋಪಿಗಳು ವಿಚಾರಣೆಗೆ ಹಾಜರಾಗಿದ್ದಾರೆ.

ಮೊದಲಿಗೆ ಜಡ್ಜ್ ಎಲ್ಲಾ ಆರೋಪಿಗಳ ಹಾಜರಾತಿ ಪಡೆದಿದ್ದಾರೆ. ಈ ವೇಳೆ ಪವಿತ್ರಗೌಡ, ದರ್ಶನ್ ದೂರ ದೂರ ನಿಂತಿದ್ದರು. A-1 A-2 ಪ್ರಕಾರ ನಿಂತುಕೊಳ್ಳಿ ಎಂದು ಜಡ್ಜ್ ಹೇಳಿದ್ದಾರೆ. ದರ್ಶನ್​, ಪವಿತ್ರಗೌಡ ಅಕ್ಕಪಕ್ಕ ನಿಂತಿದ್ದರು ಒಬ್ಬರೋಬ್ಬರನ್ನು ನೋಡದೇ ಸಪ್ಪಗಾಗಿದ್ದಾರೆ.

ತನಿಖಾಧಿಕಾರಿಯಿಂದ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಕೆ : ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಕಾಮಾಕ್ಷಿಪಾಳ್ಯ ಪೊಲೀಸರು ಎಫ್ ಎಸ್ ಎಲ್ ವರದಿ ಹಾಗೂ ಇತರೆ ದಾಖಲೆಗಳನ್ನು ಕೋರ್ಟ್​ಗೆ ಸಲ್ಲಿಸಿದ್ದು, ಆರೋಪಿಗಳ ವಿರುದ್ಧ ಇರೋ ಕೆಲವೊಂದು ಸಾಕ್ಷ್ಯ, ಕೃತ್ಯಕ್ಕೆ ಬಳಸಿದ ವಾಹನಗಳ ರಿಲೀಸ್ ಪ್ರಕ್ರಿಯೆ ದಾಖಲೆಗಳನ್ನು ಒಳಗೊಂಡ ದೋಷಾರೋಪ ಪಟ್ಟಿ ನ್ಯಾಯಲಯಕ್ಕೆ ಸಲ್ಲಿಸಿದ್ದಾರೆ.

ಇದನ್ನೂ ಓದಿ : ರಾಜ್ಯದಲ್ಲಿ ಮೇ 24ರವರೆಗೂ ವರುಣಾರ್ಭಟ ಫಿಕ್ಸ್​​.. 9 ಜಿಲ್ಲೆಗೆ ಆರೆಂಜ್ ಅಲರ್ಟ್ – ಹವಾಮಾನ ಇಲಾಖೆ ಎಚ್ಚರಿಕೆ!
Btv Kannada
Author: Btv Kannada

Read More