ಐಪಿಎಲ್ 2025ನೇ ಸಾಲಿನ ಲೀಗ್‌ನಲ್ಲಿ ಇನ್ನೂ 10 ಪಂದ್ಯಗಳು ಬಾಕಿ ಇರುವಂತೆ ಪ್ಲೇ ಆಫ್‌ಗೆ ಮೂರು ಬಲಿಷ್ಠ ತಂಡಗಳು ಸ್ಥಾನ ಖಚಿತಪಡಿಸಿಕೊಂಡಿವೆ. ಗುಜರಾತ್ ಟೈಟನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಪ್ಲೇ ಆಫ್‌ಗೆ ಎಂಟ್ರಿ ಕೊಟ್ಟಿವೆ. ಈ ನಡುವೆ ಉಳಿದಿರುವ ಇನ್ನೊಂದು ಸ್ಥಾನಕ್ಕೆ 5 ಬಾರಿಯ ಚಾಂಪಿಯನ್ಸ್ ಸೇರಿ ಮೂರು ಪ್ರಮುಖ ತಂಡಗಳು ಪೈಪೋಟಿ ನಡೆಸಲಿದೆ.
ಬಾಕಿ ಉಳಿದಿರುವ ಇನ್ನೊಂದು ಸ್ಥಾನಕ್ಕಾಗಿ ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡಗಳು ಪೈಪೋಟಿ ನಡೆಸಲಿದೆ. ಇದರಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಇನ್ನು ಎರಡು ಪಂದ್ಯಗಳು ಉಳಿದಿದ್ದು, ಇದರಲ್ಲಿ ಎರಡಕ್ಕೆ ಎರಡನ್ನೂ ಗೆದ್ದರೆ ಪ್ಲೇ ಆಫ್ ತಲುಪಲಿದೆ.
ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ ಇನ್ನು ಮೂರು ಪಂದ್ಯಗಳು ಬಾಕಿ ಉಳಿದಿದ್ದು, ಈ ಮೂರರಲ್ಲಿ ಮೂರನ್ನು ಗೆದ್ದರೆ ಮಾತ್ರ ಪ್ಲೇ ಆಫ್ ತಲುಪುವ ಸಾಧ್ಯತೆ ಇದೆ. ಇತ್ತ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಕೂಡ ಎರಡು ಪಂದ್ಯಗಳು ಬಾಕಿ ಉಳಿದಿದ್ದು, ಇದರಲ್ಲಿ 2ನ್ನೂ ಗೆದ್ದರೆ ಪ್ಲೇ ಆಫ್ ತಲುಪುವ ಸಾಧ್ಯತೆ ಇದೆ. ಆದ್ರೆ, ಈ ತಂಡಗಳಿಗೆ ತಮ್ಮ ತಮ್ಮ ನಡುವೆಯೇ ಕೆಲವು ಪಂದ್ಯಗಳು ಬಾಕಿ ಉಳಿದಿರುವುದರಿಂದ ಯಾವ ತಂಡ ಪ್ಲೇ ಆಫ್‌ಗೆ ಎಂಟ್ರಿ ಪಡೆಯಲಿದೆ ಎಂಬ ಕುತೂಹಲ ಮೂಡಿದೆ.
- ಲಖನೌ ಸೂಪರ್‌ಜೈಂಟ್ಸ್ vs ಸನ್‌ರೈಸರ್ಸ್ ಹೈದರಾಬಾದ್
- ಚೆನ್ನೈ ಸೂಪರ್ ಕಿಂಗ್ಸ್ vs ರಾಜಸ್ಥಾನ್ ರಾಯಲ್ಸ್
- ಮುಂಬೈ ಇಂಡಿಯನ್ಸ್ vs ಡೆಲ್ಲಿ ಕ್ಯಾಪಿಟಲ್ಸ್
- ಗುಜರಾತ್ ಟೈಟನ್ಸ್ vs ಲಖನೌ ಸೂಪರ್‌ಜೈಂಟ್ಸ್
- ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಸನ್‌ರೈಸರ್ಸ್ ಹೈದರಾಬಾದ್
- ಪಂಜಾಬ್ ಕಿಂಗ್ಸ್ vs ಡೆಲ್ಲಿ ಕ್ಯಾಪಿಟಲ್ಸ್
- ಗುಜರಾತ್ ಟೈಟನ್ಸ್ vs ಚೆನ್ನೈ ಸೂಪರ್ ಕಿಂಗ್ಸ್
- ಸನ್‌ರೈಸರ್ಸ್ ಹೈದರಾಬಾದ್ vs ಕೊಲ್ಕತ್ತಾ ನೈಟ್ ರೈಡರ್ಸ್
- ಪಂಜಾಬ್ ಕಿಂಗ್ಸ್ vs ಮುಂಬೈ ಇಂಡಿಯನ್ಸ್
