ಕೇಂದ್ರ ಸಚಿವ ಎಲ್. ಮುರುಗನ್ ಭೇಟಿಯಾದ ಲಹರಿ ವೇಲು!

ಬೆಂಗಳೂರು : ಲಹರಿ ಸಂಸ್ಥೆ ಮಾಲೀಕ ಲಹರಿ ವೇಲು ಅವರು ಇಂದು ಬೆಂಗಳೂರಿನಲ್ಲಿ ಕೇಂದ್ರದ ಮಾಹಿತಿ ಮತ್ತು ಪ್ರಸಾರ, ಸಂಸದೀಯ ವ್ಯವಹಾರ ಸಚಿವ ಡಾ. ಎಲ್. ಮುರುಗನ್ ಅವರನ್ನು ಭೇಟಿ ಮಾಡಿದರು.

ಈ ಸಂದರ್ಭದಲ್ಲಿ ಡಾ. ಎಲ್. ಮುರುಗನ್ ಅವರು ಕರ್ನಾಟಕದ ಮಾಧ್ಯಮ ಮತ್ತು ಮನರಂಜನಾ ಉದ್ಯಮದ ಬಗ್ಗೆ ವಿಚಾರಿಸಿದ್ದಾರೆ. AVCG, ಮಾಧ್ಯಮ ಮತ್ತು ಮನರಂಜನಾ ವಲಯವನ್ನು ಅದ್ಧೂರಿಯಾಗಿ ಯಶಸ್ವಿಗೊಳಿಸುವ ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನವನ್ನು ಈಡೇರಿಸಲು ಉದ್ಯಮವು ಶ್ರಮಿಸಬೇಕೆಂದು ಲಹರಿ ವೇಲು ಕರೆ ನೀಡಿದರು.

ಇತ್ತೀಚೆಗೆ ಮುಂಬೈನಲ್ಲಿ ನಡೆದ 80 ಕ್ಕೂ ಹೆಚ್ಚು ದೇಶಗಳು ಭಾಗವಹಿಸಿದ್ದ ವಿಶ್ವ ಆಡಿಯೋ ವಿಡಿಯೋ ಮನರಂಜನಾ ಶೃಂಗಸಭೆ 2025 ಭಾರತವನ್ನು ಪ್ರಮುಖ ಶಕ್ತಿಯಾಗಿ ಮಾಡುವ ಮತ್ತು ದೇಶದ ಯುವಕರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ ಎಂದು ಲಹರಿ ವೇಲು ಹೇಳಿದರು.

ಇದನ್ನೂ ಓದಿ : ಧರ್ಮಸ್ಥಳ ಮೂಲದ ಏರೋಸ್ಪೇಸ್ ಉದ್ಯೋಗಿ ನಿಗೂಢ ಸಾವು – ಪಂಜಾಬ್​ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತದೇಹ ಪತ್ತೆ!

Btv Kannada
Author: Btv Kannada

Read More