ಸಚಿವ ಕೃಷ್ಣಭೈರೇಗೌಡರ ಆಪ್ತನ ಗೂಂಡಾಗಿರಿ – ಜಮೀನು ಒತ್ತುವರಿಗೆ ತೆರಳಿದ್ದ ಕಂದಾಯ ಅಧಿಕಾರಿಗಳ ಮೇಲೆಯೇ ಹಲ್ಲೆ!

ಬೆಂಗಳೂರು : ಕಂದಾಯ ಸಚಿವ ಕೃಷ್ಣಭೈರೇಗೌಡರ ಆಪ್ತನೊಬ್ಬ ಕಂದಾಯ ಇಲಾಖೆ ಅಧಿಕಾರಿಗಳ ಮೇಲೆಯೇ ಗೂಂಡಾಗಿರಿ ಎಸಗಿದ್ದಾನೆ. ನಡುರಸ್ತೆಯಲ್ಲೇ ಕಂದಾಯ ಅಧಿಕಾರಿ ಹಾಗೂ ವಿಲೇಜ್ ಅಕೌಂಟೆಡ್ ವಿರುದ್ಧ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾನೆ.

ಬೆಂಗಳೂರು ಉತ್ತರ ತಾಲ್ಲೂಕಿನ ಜಾಲಾ ಹೋಬಳಿಯ ಮೈಲನಹಳ್ಳಿಯಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಆಪ್ತ ಎಂ.ಜಿ.ರಾಜಕುಮಾರ್ ಎಂಬಾತ ಗೂಂಡಾಗಿರಿ ನಡೆಸಿದ್ದಾನೆ. ಕಂದಾಯ ಸಚಿವರ ತವರು ಕ್ಷೇತ್ರದಲ್ಲೇ ಕಂದಾಯ ಅಧಿಕಾರಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಪೊಲೀಸರು ಇದ್ದರೂ ಕೂಡ ಏನೂ ಮಾಡದೇ ಅಸಹಾಯಕರಾಗಿ ನಿಂತಿದ್ದಾರೆ.

ರೆವಿನ್ಯೂ ಇನ್ಸ್‌ಪೆಕ್ಟರ್ ಜಯಪ್ರಕಾಶ್ ಮತ್ತು VA ಭರತ್ ಕುಮಾರ್ ಅವರು ಮೈಲನಹಳ್ಳಿಯಲ್ಲಿ ಸರ್ವೇ ನಂಬರ್ 94 ರಲ್ಲಿ 1.15 ಎಕರೆ ಒತ್ತುವರಿ ತೆರವಿಗೆ ಮುಂದಾಗಿದ್ದರು. ಈ ವೇಳೆ ಮೈಲನಹಳ್ಳಿ ಗ್ರಾಮದ ಕಾಂಗ್ರೆಸ್ ಮುಖಂಡ ಹಾಗೂ ಸಚಿವ ಕೃಷ್ಣಭೈರೇಗೌಡರ ಆಪ್ತ ಎಂ.ಜಿ.ರಾಜಕುಮಾರ್ ದಬ್ಬಾಳಿಕೆ ಮಾಡಿ ನಡು ರಸ್ತೆಯಲ್ಲೆ ಹಲ್ಲೆ ಮಾಡಿದ್ದಾನೆ.


ಕಂದಾಯ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿ ಸರಕಾರಿ ಕೆಲಸಕ್ಕೆ ಅಡ್ಡಿಪಡಿಸಿರುವ ಎಂ.ಜಿ. ರಾಜಕುಮಾರ್ & ಸಹೋದರ ಎಂ.ಜಿ. ನಾಗರಾಜು ವಿರುದ್ಧ ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ಮಾಡಿರುವ A-1 ಎಂ.ಜಿ.ರಾಜಕುಮಾರ್ ನಡೆಗೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಸಚಿವ ಕೃಷ್ಣಭೈರೇಗೌಡರು ಈತನನ್ನು ಕರೆದು ಛೀಮಾರಿ ಹಾಕಿ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕೆಂಬ ಆಗ್ರಹ ವ್ಯಕ್ತವಾಗ್ತಿದೆ.

ಇದನ್ನೂ ಓದಿ : ಭಾರೀ ಮಳೆಗೆ RCB-KKR ಪಂದ್ಯ ಕ್ಯಾನ್ಸಲ್​.. ಟೂರ್ನಿಯಿಂದ ಕೋಲ್ಕತ್ತಾ ಔಟ್​.. ಬೆಂಗಳೂರಿಗೆ ಎಷ್ಟನೇ ಸ್ಥಾನ?

Btv Kannada
Author: Btv Kannada

Read More