ಪ್ರಶಾಂತ್‌ ನೀಲ್‌ ಚಿತ್ರದಿಂದ ಜೂ.NTR ಬರ್ತ್‌ಡೇಗೆ ಇಲ್ಲ ಸರ್ಪ್ರೈಸ್‌ – ಅಧಿಕೃತ ಹೇಳಿಕೆ ನೀಡಿದ ಮೈತ್ರಿ ಮೂವಿ ಮೇಕರ್ಸ್!

ಮೇ 20ರಂದು ಜೂನಿಯರ್‌ ಎನ್‌ಟಿಆರ್‌ ಬರ್ತ್‌ಡೇ. ಆ ನಿಮಿತ್ತ ಪ್ರಶಾಂತ್‌ ನೀಲ್‌ ನಿರ್ದೇಶನದ ಸಿನಿಮಾದಿಂದ ಬಿಗ್‌ ಸರ್ಪ್ರೈಸ್‌ ಸಿಗಬಹುದು ಎಂದು ಅಭಿಮಾನಿಗಳು ಕಾದಿದ್ದರು. ಆದರೆ, “ವಾರ್‌ 2” ಸಿನಿಮಾದಿಂದ ಅಪ್‌ಡೇಟ್‌ ಬರುತ್ತಿರುವ ಹಿನ್ನೆಲೆಯಲ್ಲಿ, ನಮ್ಮ ಸಿನಿಮಾದ ಗ್ಲಿಂಪ್ಸ್‌ ಮುಂದೂಡುತ್ತಿದ್ದೇವೆ ಎಂದು ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್‌ ಮತ್ತು ಎನ್‌ಟಿಆರ್‌ ಆರ್ಟ್ಸ್‌ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದೆ. ಹಾಗೆಯೇ ಮುಂದಿನ ದಿನಗಳಲ್ಲಿ ಒಂದೊಳ್ಳೆಯ ಶುಭ ಸಂದರ್ಭದಲ್ಲಿ ವಿಶೇಷ ಅಪ್‌ಡೇಟ್ ಹಂಚಿಕೊಳ್ಳಲಿದ್ದೇವೆ ಎಂದಿದೆ.

ಮೈತ್ರಿ ಮೂವಿ ಮೇಕರ್ಸ್‌ ಹಂಚಿಕೊಂಡ ಪೋಸ್ಟ್​​ನಲ್ಲಿ ಏನಿದೆ? “ನಮಗೆ ಹುರಿದುಂಬಿಸಲು ಲೆಕ್ಕವಿಲ್ಲದಷ್ಟು ಕಾರಣಗಳನ್ನು ನೀಡಿದ ವ್ಯಕ್ತಿಯನ್ನು ಆಚರಿಸಲು ನೀವು ಎಷ್ಟು ಉತ್ಸುಕರಾಗಿದ್ದೀರಿ ಎಂದು ನಮಗೆ ತಿಳಿದಿದೆ. #WAR2 ಕಂಟೆಂಟ್ ಬಿಡುಗಡೆಯಾಗುತ್ತಿದೆ. ಆ ಗ್ಲಿಂಪ್ಸ್‌ಗೆ ಅವಕಾಶ ನೀಡುವುದು ಉತ್ತಮ ಎಂದು ನಾವು ಭಾವಿಸಿದ್ದೇವೆ. #NTRNeel MASS MISSILE ಗ್ಲಿಂಪ್ಸ್‌ ಶೀಘ್ರದಲ್ಲಿ ನಿಮ್ಮ ಮುಂದೆ ಬರಲಿದೆ. ಈ ವರ್ಷ, ನಾವು ಮ್ಯಾನ್ ಆಫ್ ಮಾಸಸ್, NTR ಅವರ ಹುಟ್ಟುಹಬ್ಬದ ಆಚರಣೆಯನ್ನು #WAR2 ಚಿತ್ರಕ್ಕಾಗಿ ಅರ್ಪಿಸುತ್ತಿದ್ದೇವೆ.” ಎಂದು ಹೇಳಿದೆ.

ಇನ್ನೂ ಶೀರ್ಷಿಕೆ ಅಂತಿಮವಾಗದ ಪ್ರಶಾಂತ್ ನೀಲ್ ನಿರ್ದೇಶಿಸಿದ ಈ ಆಕ್ಷನ್-ಪ್ಯಾಕ್ಡ್ ಚಿತ್ರವು ಜೂನ್ 25, 2026 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಅಭಿಮಾನಿಗಳು ಚಿತ್ರದ ಆಗಮನಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ತೆಲುಗು, ತಮಿಳು, ಹಿಂದಿ, ಕನ್ನಡ, ಮಲಯಾಳಂ ಮತ್ತು ಇತರ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ.

ಪ್ರಶಾಂತ್ ನೀಲ್ ಕಲ್ಪಿಸಿಕೊಂಡಂತೆ ಮತ್ತು ಎನ್‌ಟಿಆರ್‌ ಅವರನ್ನು ಪ್ರಬಲ ಪಾತ್ರದಲ್ಲಿ ನೋಡಲು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಮೇಲೆ ನಿರೀಕ್ಷೆಗಳು ಗರಿಗೆದರಿವೆ. ಬ್ಲಾಕ್‌ ಬಸ್ಟರ್‌ ಹಿಟ್‌ ನೀಡಿ ಹೆಸರುವಾಸಿಯಾದ ಪ್ರಶಾಂತ್ ನೀಲ್, ಎನ್‌ಟಿಆರ್‌ ಅವರನ್ನು ಬೇರೆ ರೀತಿಯಲ್ಲಿಯೇ ತೋರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.

ಈ ಚಿತ್ರವನ್ನು ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಾದ ಮೈತ್ರಿ ಮೂವಿ ಮೇಕರ್ಸ್ ಮತ್ತು NTR ಆರ್ಟ್ಸ್ ಬ್ಯಾನರ್‌ ಅಡಿಯಲ್ಲಿ ಕಲ್ಯಾಣ್ ರಾಮ್ ನಂದಮೂರಿ, ನವೀನ್ ಯೆರ್ನೇನಿ, ರವಿಶಂಕರ್ ಯಲಮಂಚಿಲಿ ಮತ್ತು ಹರಿ ಕೃಷ್ಣ ಕೊಸರಾಜು ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಗುಲ್ಶನ್ ಕುಮಾರ್, ಭೂಷಣ್ ಕುಮಾರ್ ಮತ್ತು ಟಿ-ಸೀರೀಸ್ ಫಿಲ್ಮ್ಸ್ ಪ್ರಸ್ತುತಪಡಿಸಿದ್ದಾರೆ. ಭುವನ್ ಗೌಡ ಛಾಯಾಗ್ರಹಣವನ್ನು ನಿರ್ವಹಿಸಿದರೆ, ರವಿ ಬಸ್ರೂರ್ ಸಂಗೀತವಿದೆ.

ಇದನ್ನೂ ಓದಿ : ವಾಹನ ಸವಾರರೇ ಗಮನಿಸಿ.. ಹೆಬ್ಬಾಳ ಫ್ಲೈಓವರ್​​ ಇಂದಿನಿಂದ ಮೇ 21ರವರೆಗೆ ಪ್ರತಿದಿನ 3 ಗಂಟೆ ಬಂದ್.. ಪರ್ಯಾಯ ಮಾರ್ಗಗಳು ಹೀಗಿವೆ!

Btv Kannada
Author: Btv Kannada

Read More