ಬೆಂಗಳೂರು : ಕೆಆರ್ ಪುರ ಕಡೆಯಿಂದ ಮೇಖ್ರಿ ವೃತ್ತದ ಕಡೆಗೆ ತೆರಳುವ ಹೆಬ್ಬಾಳ ಮೇಲ್ಸೇತುವೆಗೆ ಹೆಚ್ಚುವರಿ ರ‍್ಯಾಂಪ್ ಅಳವಡಿಕೆ ಹಿನ್ನೆಲೆ ಇಂದಿನಿಂದ 5 ದಿನ ನಿತ್ಯ 3 ಗಂಟೆಗಳ ಕಾಲ ಹೆಬ್ಬಾಳ ಫ್ಲೈಓವರ್ ಬಂದ್ ಆಗಿರಲಿದೆ. ಈ ವೇಳೆ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ವಾಹನ ಸವಾರರಿಗೆ ಬೆಂಗಳೂರು ಸಂಚಾರ ಪೊಲೀಸ್ ಪ್ರಕಟಣೆ ಹೊರಡಿಸಿದೆ.
ಬೆಂಗಳೂರು ಸಂಚಾರ ಪೊಲೀಸ್ ಪ್ರಕಟಣೆಯಲ್ಲಿ ಏನಿದೆ? ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕೆ.ಆರ್. ಪುರ ಕಡೆಯಿಂದ ಮೇಖ್ರಿ ವೃತ್ತದ ಕಡೆಗೆ ಅಸ್ತಿತ್ವದಲ್ಲಿರುವ ಹೆಬ್ಬಾಳ ಮೇಲೇತುವೆಗೆ ಹೆಚ್ಚುವರಿ ಕ್ಯಾಂಪ್ಗಳನ್ನು ನಿರ್ಮಿಸುವ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಈ ಕಾಮಗಾರಿಯ ಭಾಗವಾಗಿ, ರೈಲ್ವೆ ಹಳಿಗಳ ಮೇಲೆ 33.5 ಮೀ ಉದ್ದದ 07 ಉಕ್ಕಿನ ಗರ್ಡ‌್ರಗಳನ್ನು ಅಳವಡಿಸುವ ಕಾಮಗಾರಿಯನ್ನು ಇಂದಿನಿಂದ ಮೇ 21ರವರೆಗೆ ನಡೆಯಲಿದೆ.
ಈ ವೇಳೆ ಪ್ರತಿದಿನ 3 ಗಂಟೆಗಳ ಕಾಲ ಅಂದರೆ ರಾತ್ರಿ 12ರಿಂದ ಬೆಳಗಿನ ಜಾವ 03 ಗಂಟೆವರೆಗೆ ಕಾಮಗಾರಿನ್ನು ಕೈಗೊಳ್ಳಲಾಗಿದೆ. ಹಾಗಾಗಿ ಸಾರ್ವಜನಿಕರ ಸುಗಮ ಸಂಚಾರದ ದೃಷ್ಟಿಯಿಂದ ಕಾಮಗಾರಿ ನಡೆಯುವ ಸಮಯದಲ್ಲಿ ಈ ಕೆಳಕಂಡ ಸಂಚಾರ ಮಾರ್ಪಾಡು ಮಾಡಲಾಗಿದೆ ಎಂದು ತಿಳಿಸಿದೆ.
ಪರ್ಯಾಯ ಮಾರ್ಗಗಳು ಹೀಗಿವೆ : ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೇಖ್ರಿ ವೃತ್ತದ ಕಡೆಗೆ ಚಲಿಸುವ ವಾಹನಗಳು ಎಸ್ಟೀಮ್ ಮಾಲ್‌ನಲ್ಲಿರುವ ಸರ್ವಿಸ್ ರಸ್ತೆಯನ್ನು ಪ್ರವೇಶಿಸಿ ಹೆಬ್ಬಾಳ ವೃತ್ತದಲ್ಲಿ ಹೊರ ವರ್ತುಲಕ್ಕೆ ಬಲ ತಿರುವು ಪಡೆದು ತುಮಕೂರು ಮಾರ್ಗವಾಗಿ ಚಲಿಸಿ, ಕುವೆಂಪು ವೃತ್ತದಲ್ಲಿ ಎಡ ತಿರುವು ಪಡೆದು ನ್ಯೂ ಬಿಇಎಲ್ ರಸ್ತೆ ಮೂಲಕ ಮೇಖ್ರಿ ವೃತ್ತವನ್ನು ತಲುಪಬಹುದಾಗಿದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ : ‘ನ್ಯೂಸ್-18 ಕನ್ನಡ’ ಕೈ ಹಿಡಿದ ಕೋಟಿ ಕೋಟಿ ಕನ್ನಡಿಗರು – ರೇಟಿಂಗ್ನಲ್ಲಿ ಟಾಪ್-2.. ಕೆಲವೇ ದಿನಗಳಲ್ಲಿ ನಂಬರ್-1 ಫಿಕ್ಸ್!
