ಬೆಂಗಳೂರು : ರಾಜ್ಯದ ಕನ್ನಡ ನ್ಯೂಸ್ ಚಾನಲ್ಗಳಿಗೆ ಸುದ್ದಿ ಕೊಡುವುದರ ಪೈಪೋಟಿ ಜೊತೆ ವೀಕ್ಷಕರನ್ನು ಕೂಡ ತಲುಪುವ ಅತೀ ಮಹತ್ವದ ಜವಾಬ್ದಾರಿ ಇರುತ್ತದೆ. ಪ್ರತಿ ಕ್ಷಣ ಕ್ಷಣದ ಮಾಹಿತಿ, ಇಂಚಿಂಚೂ ವಿವರ ನೀಡೋದು ನ್ಯೂಸ್ ಚಾನಲ್ಗಳ ಕೆಲಸ. ಹಾಗಾಗಿ ಸಮಾಜದಲ್ಲಿ ನ್ಯೂಸ್ ಚಾನಲ್ಗಳಿಗೆ ಅತೀ ಮಹತ್ವದ ಸ್ಥಾನ ಲಭಿಸಿದೆ.
ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ನ್ಯೂಸ್-18 ಕನ್ನಡ ಚಾನಲ್ ಭರ್ಜರಿಯಾಗಿ ತನ್ನ ನಾಗಾಲೋಟ ಮುಂದುವರಿಸುತ್ತಿದೆ. ಅತೀ ಕಡಿಮೆ ಅವಧಿಯಲ್ಲಿ ನ್ಯೂಸ್-18 ಕನ್ನಡ ನ್ಯೂಸ್ ಚಾನಲ್ ರಾಜ್ಯದ ಕೋಟಿ ಕೋಟಿ ಕನ್ನಡಿಗರ ಮನ ಗೆದ್ದಿದೆ. ಕನ್ನಡ ನ್ಯೂಸ್ ಚಾನಲ್ಗಳ ಸುದ್ದಿ ಲೋಕದಲ್ಲಿ ನ್ಯೂಸ್-18 ಕನ್ನಡ ರಾಜ್ಯದ 2ನೇ ನ್ಯೂಸ್ ಚಾನಲ್ ಆಗಿ ಹೊರ ಹೊಮ್ಮಿದೆ.
ಈ ವಾರದ ನ್ಯೂಸ್ ಚಾನಲ್ಗಳ ರೇಟಿಂಗ್ ಪಾಯಿಂಟ್ ಪಟ್ಟಿಯಲ್ಲಿ ನ್ಯೂಸ್-18 ಕನ್ನಡ 2ನೇ ಸ್ಥಾನದಲ್ಲಿ ರಾರಾಜಿಸಿದೆ. ಒಟ್ಟು 362 ರೇಟಿಂಗ್ ಪಾಯಿಂಟ್ನಲ್ಲಿ ನ್ಯೂಸ್-18 ಕನ್ನಡ 68 ಪಾಯಿಂಟ್ ಗಳಿಸಿದೆ. ಮುಂದಿನ 4-5 ತಿಂಗಳಲ್ಲಿ ಕನ್ನಡದ ನಂಬರ್-1 ನ್ಯೂಸ್ ಚಾನಲ್ TV-9 ಅನ್ನು ಹಿಂದಿಕ್ಕಿ ನ್ಯೂಸ್-18 ಕನ್ನಡ ನಂಬರ್-1 ಚಾನಲ್ ಆಗೋ ಎಲ್ಲಾ ಸಾಧ್ಯತೆಗಳು ಇವೆ.
ವಾರದ ರೇಟಿಂಗ್ ಪಾಯಿಂಟ್ ಪಟ್ಟಿ ನೋಡೋದಾದ್ರೆ : – ರೇಟಿಂಗ್ ಪಾಯಿಂಟ್ ಒಟ್ಟು – 362
- TV-9 – ಕನ್ನಡ – 100
- ನ್ಯೂಸ್ -18 ಕನ್ನಡ – 68
- ಪಬ್ಲಿಕ್ ಟಿವಿ – 64
- ಸುವರ್ಣ ನ್ಯೂಸ್ – 45
- ನ್ಯೂಸ್ ಫಸ್ಟ್ – 26
- ರಿಪಬ್ಲಿಕ್ ಕನ್ನಡ – 22
ರಾಜ್ಯದ ನ್ಯೂಸ್ ಚಾನಲ್ಗಳಲ್ಲಿ ಮೊದಲ ಸ್ಥಾನ TV-9, 2ನೇ ಸ್ಥಾನ ನ್ಯೂಸ್-18 ಕನ್ನಡ ಪಾಲಾದ್ರೆ ಕೊನೇ ಸ್ಥಾನದಲ್ಲಿ ರಿಪಬ್ಲಿಕ್ ಟಿವಿ ಕನ್ನಡ (R.ಕನ್ನಡ) ತೃಪ್ತಿ ಪಟ್ಟಿದೆ. ರಿಪಬ್ಲಿಕ್ ಟಿವಿ ಕನ್ನಡ ಏನೇ ಸರ್ಕಸ್ ಮಾಡಿದ್ರೂ ಅದು ಜನರನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಪರಿಣಾಮ ಕೊನೇ ಸಾಲಿನಲ್ಲೇ ಈ ವಾರವೂ ಮುಂದುವರಿದಿದೆ.
ನ್ಯೂಸ್-18 ಕನ್ನಡ ಭರ್ಜರಿ ಪರ್ಫಾಮೆನ್ಸ್ಗೆ ಕಾರಣ : – ನ್ಯೂಸ್-18 ಕನ್ನಡ ಈ ಪರಿ ಕನ್ನಡಿಗರ ಮನ ಗೆಲ್ಲಲು ಪ್ರಮುಖ ಕಾರಣ ಅಂದ್ರೆ ಜನರ ನಡುವಿನ ನೈಜ ಸಮಸ್ಯೆಗಳ ವರದಿ ಪ್ರಸಾರ. ಜೊತೆಗೆ ಭಾರತ – ಪಾಕಿಸ್ತಾನ ನಡುವಿನ ಯುದ್ಧದ ಸನ್ನಿವೇಶವನ್ನು ಇಂಚಿಂಚೂ ಕರುನಾಡ ಜನರ ಮುಂದೆ ಇಟ್ಟಿರೋದು. ಇಂಡೋ-ಪಾಕ್ ಯುದ್ಧದ ಕ್ಷಣ ಕ್ಷಣದ ಮಾಹಿತಿ, ರಾಷ್ಟ್ರೀಯ ಬೆಳವಣಿಗೆಯ ಸಂಪೂರ್ಣ ವಿವರವನ್ನು ಅತೀ ವೇಗವಾಗಿ ವೀಕ್ಷಕರ ಮುಂದಿಟ್ಟಿರೋದು ನ್ಯೂಸ್-18 ಕನ್ನಡ 2ನೇ ಸ್ಥಾನಕ್ಕೆ ಏರಲು ಕಾರಣವಾಗಿದೆ.
ನ್ಯೂಸ್-18 ಕನ್ನಡ ಸುದ್ದಿ ಜೊತೆ ಗುಣಮಟ್ಟದಲ್ಲಿ ರಾಜಿ ಇಲ್ಲದಿರೋದು, ರಿಪೋರ್ಟಿಂಗ್, LIVE ಕವರೇಜ್ ಈ ಎಲ್ಲಾ ಅಂಶಗಳು ವೀಕ್ಷಕರಿಗೆ ಇಷ್ಟ ಆಗಿರೋದು ನಂಬರ್-2 ಸ್ಥಾನಕ್ಕೆ ಏರಿಸಿದೆ. ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಮಾಲೀಕತ್ವದ viacom-18 ಸಂಸ್ಥೆ ಭಾಗವಾಗಿ ನ್ಯೂಸ್-18 ಕನ್ನಡ ನ್ಯೂಸ್ ಚಾನಲ್ ಕಾರ್ಯ ನಿರ್ವಹಿಸುತ್ತಿದೆ. ಮುಂದಿನ 4-5 ತಿಂಗಳಲ್ಲಿ ಕನ್ನಡದ ನಂಬರ್-1 ನ್ಯೂಸ್ ಚಾನಲ್ TV-9 ಅನ್ನು ಹಿಂದಿಕ್ಕಿ ನ್ಯೂಸ್-18 ಕನ್ನಡ ನಂಬರ್-1 ಚಾನಲ್ ಆಗೋ ಎಲ್ಲಾ ಸಾಧ್ಯತೆಗಳು ಇವೆ.
ವರದಿ : ರಿಯಾಜ್ ಪಾಷ, ಬಿಟಿವಿ ನ್ಯೂಸ್ ಡೆಸ್ಕ್
ಇದನ್ನೂ ಓದಿ : ತಾಳಿ ಕಟ್ಟಿದ 15 ನಿಮಿಷದಲ್ಲೇ ಹೃದಯಾಘಾತದಿಂದ ಮದುಮಗ ನಿಧನ – ಬಾಗಲಕೋಟೆಯಲ್ಲಿ ಹೃದಯ ವಿದ್ರಾವಕ ಘಟನೆ!
