ಬಾಗಲಕೋಟೆ : ವಯೋವೃದ್ಧನ ಮೇಲೆ ಪಿಎಸ್ಐ ಓರ್ವ ಗೂಂಡಾ ವರ್ತನೆ ತೋರಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಜಿಲ್ಲೆಯ ಕೆರೂರು ಪೊಲೀಸ್ ಠಾಣೆ ಪಿಎಸ್ಐ ಭೀಮಪ್ಪ ರಬಕವಿ ದರ್ಪಕ್ಕೆ ವೃದ್ಧನ ಎಡಗೈಗೆ ಗಂಭೀರ ಗಾಯವಾಗಿದ್ದು, ಎರಡು ಬೆರಳು ಹಾಗೂ ಕೈ ಮೂಳೆ ಮುರಿದಿದೆ. ಬೆಳ್ಳಿಖಂಡಿ ಗ್ರಾಮದ ಭೀಮಪ್ಪ ಮೇಟಿ ಗಾಯಾಳು ವೃದ್ಧನಗಾಗಿದ್ದು, ಸದ್ಯ ಗಾಯಾಳು ಭೀಮಪ್ಪನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಗ್ರಾಮದಲ್ಲಿ ತಿಪ್ಪೆ ವಿಷಯಕ್ಕೆ ಭೀಮಪ್ಪ ಮೇಟಿ ಹಾಗೂ ಪಡಿಯಪ್ಪ ವಗ್ಗರ ಕುಟುಂಬಸ್ಥರ ನಡುವೆ ತಕರಾರಾಗಿತ್ತು. ಆ ಬಳಿಕ ಈ ಘಟನೆ ಕೆರೂರು ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ವೃದ್ಧ ಭೀಮಪ್ಪ ಮೇಟಿಯನ್ನು ಕೆರೂರು ಪೊಲೀಸರು ಠಾಣೆಗೆ ಕರೆತಂದಿದ್ದರು.
ಪೊಲೀಸ್ ಠಾಣೆಯಲ್ಲಿ ವಿಚಾರಣೆ ವೇಳೆ ವೃದ್ಧ ಭೀಮಪ್ಪನ ಮೇಲೆ ಏಕಾಏಕಿ ಪಿಎಸ್ಐ ಭೀಮಪ್ಪ ರಬಕವಿ ದರ್ಪ ತೋರಿದ್ದಾನೆ. ಪಿಎಸ್ಐ ಭೀಮಪ್ಪ ರಬಕವಿ ಕೋಪಕ್ಕೆ ವೃದ್ಧನ ಕೈ ಮುರಿದಿದೆ. ಕೈ ಮುರಿದರೂ ನಿಯಮ ಬಾಹಿರ ವೃದ್ಧನನ್ನು ಪೊಲೀಸರು 2 ದಿನ ಠಾಣೆಯಲ್ಲೇ ಇರಿಸಿಕೊಂಡಿದ್ದರು. ಆ ಬಳಿಕ ಗಾಯ ದೊಡ್ಡ ಪ್ರಮಾಣದಲ್ಲಿದೆ ಎಂದು ಅರಿತು, ಗಾಯಾಳು ವೃದ್ಧನನ್ನು ಆಸ್ಪತ್ರೆಗೆ ಕರೆದೊಯ್ಯದೇ ಪೊಲೀಸರು ಮನೆಗೆ ಬಿಟ್ಟು ಬಂದಿದ್ದಾರೆ. ಸದ್ಯ ಕುಟುಂಬಸ್ಥರು ಭೀಮಪ್ಪ ಮೇಟಿಯನ್ನು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇದೀಗ ‘ಕೈ ಮುರಿದಿದೆ ಎಂದು ಅಂಗಲಾಚಿದ್ರೂ’ ಬಿಡದ ಪಿಎಸ್ಐ ಬೀಮಪ್ಪ ರಬಕವಿ ಸಸ್ಪೆಂಡ್‌ಗೆ ವೃದ್ಧ ಹಾಗೂ ಆತನ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಬುಧವಾರ ಕೆರೂರ ಠಾಣೆಯಲ್ಲಿ ವೃದ್ಧನ ಮೇಲೆ ಪಿಎಸ್ಐನಿಂದ ಹಲ್ಲೆಯಾಗಿದ್ದು, ವೃದ್ಧ ಭೀಮಪ್ಪನ್ನು ಶುಕ್ರವಾರ ಆಸ್ಪತ್ರೆಗೆ ದಾಖಲಿಲಾಗಿದೆ.
ಇದನ್ನೂ ಓದಿ : ತೆರೆಗೆ ಬರಲು ಸಜ್ಜಾದ ‘ಕಾಲೇಜ್ ಕಲಾವಿದ’ – ಚಿತ್ರದ 2 ಹಾಡಿಗೂ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್!
