‘ವಿಡಿಯೋ’ ಸಿನಿಮಾ ಮೂಲಕ ಮತ್ತೆ ಒಂದಾದ ದೀಕ್ಷಿತ್ ಶೆಟ್ಟಿ ಹಾಗೂ ಡೈರೆಕ್ಟರ್​ ಶ್ರೀನಿಧಿ!

‘ಬ್ಲಿಂಕ್’ ಚಿತ್ರದ ಯಶಸ್ಸಿನ ನಂತರ ದೀಕ್ಷಿತ್ ಶೆಟ್ಟಿ ಹಾಗೂ ಡೈರೆಕ್ಟರ್​ ಶ್ರೀನಿಧಿ ಬೆಂಗಳೂರು ರವರು ಇದೀಗ “ವಿಡಿಯೋ” ಎಂಬ ಚಿತ್ರದ ಮೂಲಕ ಮತ್ತೆ ಒಂದಾಗಿದ್ದಾರೆ. ಈ ಚಿತ್ರದ ಮೂಲಕ ದೀಕ್ಷಿತ್ ಶೆಟ್ಟಿಯವರು ತಮ್ಮ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ.

ಧೀ ಸಿನಿಮಾಸ್ ಅಡಿಯಲ್ಲಿ ಹೊರ ಬರುತ್ತಿರುವ ಮೊದಲ ಚಿತ್ರ ‘ವಿಡಿಯೋ’ ಆಗಿದೆ. ಈ ಚಿತ್ರವು found footage genre ಚಿತ್ರವಾಗಿದ್ದು, vlog ಮತ್ತು documentary ಶೈಲಿಯಲ್ಲಿ ಚಿತ್ರವು ಹೊರಹೊಮ್ಮುತ್ತದೆ ಎಂದು ನಿರ್ದೇಶಕ ಶ್ರೀನಿಧಿ ಬೆಂಗಳೂರು ಮಾಹಿತಿ ಹಂಚಿಕೊಂಡಿದ್ದಾರೆ.

ಕಳೆದ ಹನ್ನೊಂದು ವರ್ಷಗಳಿಂದ ನಟನಾಗಿ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲೂ ಅಭಿನಯಿಸುತ್ತಿರುವ ದೀಕ್ಷಿತ್ ಶೆಟ್ಟಿ, ಈ ಚಿತ್ರದ ಮೂಲಕ ನಿರ್ಮಾಪಕರಾಗಿ ಉದಯೋನ್ಮುಖ ಪ್ರತಿಭೆಗಳಿಗೆ ಬೆಂಬಲ ನೀಡಲು ಜೊತೆ ನಿಲ್ಲುತ್ತೇನೆ ಎಂದು ಹೇಳಿದ್ದಾರೆ. ಈಗಾಗಲೇ ‘ವಿಡಿಯೋ’ ಸಿನಿಮಾದ ಎಂಭತ್ತರಷ್ಟು ಭಾಗ ಚಿತ್ರೀಕರಣ ಮುಗಿದಿದ್ದು, ಆದಷ್ಟು ಬೇಗ ಬಿಡುಗಡೆಗೆ ತಯಾರಿ ಮಾಡಿಕೊಳ್ಳುತ್ತೇವೆ ಎಂದು ಚಿತ್ರತಂಡ ತಿಳಿಸಿದೆ.

ಇದನ್ನೂ ಓದಿ : ಡಾ.ಶಿವರಾಮ ಕಾರಂತ ಬಳಿಕ ಬೆಂಗಳೂರಲ್ಲಿ ಮತ್ತೊಂದು ಲೇಔಟ್ – 2 ಸಾವಿರ ಎಕರೆಯಲ್ಲಿ ಬಡಾವಣೆ.. BDA ಕಮಿಷನರ್ ತರಾತುರಿಯಲ್ಲಿ ಸಹಿ ಮಾಡಿದ್ದೇಕೆ?

Btv Kannada
Author: Btv Kannada

Read More