ಕಾಂತಾರ ಪ್ರೀಕ್ವೆಲ್ ಶುರುವಾದಾಗಿನಿಂದ ರಿಷಬ್ ಶೆಟ್ಟಿಗೆ ಸಾಲು ಸಾಲು ಸಂಕಷ್ಟ.. ಕೆಟ್ಟಿತಾ ಡಿವೈನ್ ಸ್ಟಾರ್ ಟೈಮ್?

ಕಾಂತಾರ ಪ್ರೀಕ್ವೆಲ್ ಶುರುವಾದಗಿನಿಂದ ಒಂದಲ್ಲಾ ಒಂದು ವಿವಾದಗಳಿಂದ ಸದ್ದು ಮಾಡುತ್ತಲೇ ಇದೆ. ಪಾಸಿಟಿವ್​ಗಿಂತ ನೆಗೆಟಿವ್ ವಿಚಾರದಲ್ಲಿಯೇ ಈ ಸಿನಿಮಾ ಸುದ್ದಿಯಾಗ್ತಿದ್ದು, ಈಗ ರಾಕೇಶ್ ಪೂಜಾರಿ ವಿಚಾರಕ್ಕೆ ನೆಟ್ಟಿಗರು ರಿಷಬ್​ಗೆ ಕ್ಲಾಸ್ ತೆಗೆದುಕೊಳ್ತಿದ್ದಾರೆ.

ಕಾಂತಾರ ಸಿನಿಮಾ ಮೂಲಕ ರಿಷಬ್ ಶೆಟ್ಟಿ ವಿಶ್ವದಾದ್ಯಂತ ಜನಪ್ರಿಯತೆ ಪಡೆದರು. 16 ಕೋಟಿಯ ಬಜೆಟ್​ನ ಕಾಂತಾರದಲ್ಲಿ ದೈವದ ಆಶೀರ್ವಾದದಿಂದ ರಿಷಬ್ ಶೆಟ್ಟಿ ಗೆಳೆಯ ರಕ್ಷಿತ್ ಶೆಟ್ಟಿಯನ್ನೇ ಮೀರಿಸಿ ಬೆಳೆದಿದ್ದಾರೆ. ರಿಷಬ್ ಶೆಟ್ಟಿ ಅವರು ನಿರ್ದೇಶನಕ್ಕೂ ಸೈ ನಟನೆಗೂ ಜೈ. ಸದ್ಯ ರಿಷಬ್ ಶೆಟ್ಟಿ ಕಾಂತಾರ ಪ್ರೀಕ್ವೆಲ್ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಕಾಂತಾರಕ್ಕಾಗಿ ಕುಟುಂಬವು ಕೂಡ ರಿಷಬ್ ಜೊತೆಗೆ ಕುಂದಾಪುರದಲ್ಲಿಯೇ ಬೀಡುಬಿಟ್ಟಿದೆ. ಹೀಗಿರುವಾಗ ಕಾಂತಾರ ಪ್ರೀಕ್ವೆಲ್​ಗೆ ವಿಘ್ನಗಳು ಎದುರಾಗಿದ್ಯಾ ಅನ್ನೋ ಬೆನ್ನಿನಲ್ಲೇ ಒಂದಿಲ್ಲ ಒಂದು ವಿವಾದಗಳಿಗೂ ಸಾಕ್ಷಿಯಾಗ್ತಿದೆ.

ಇತ್ತೀಚಿಗೆ ಕಪಿಲ್ ನೀರಿನಲ್ಲಿ ಮುಳುಗಿ ಸಾವಿಗೀಡಾದ ಸುದ್ದಿ ಬರ್ತಿದ್ದಂತೆ ರಿಷಬ್ ಅವರನ್ನ ಹೋಗಿನೋಡುವ ಪ್ರಯತ್ನ ಮಾಡಿದ್ರೋ ಇಲ್ಲವೋ ಆದ್ರೆ ಸೋಷಿಯಲ್ ಮಿಡಿಯಾದಲ್ಲಿ ಅದಕ್ಕೆ ಸ್ಪಷ್ಟನೆ ಮಾತ್ರ ಕೊಟ್ಟರು. ಕಪಿಲ್ ಸಾವು ಶೂಟಿಂಗ್ ಸಮಯದಲ್ಲಿ ಆದದ್ದಲ್ಲ ಅಂತ ಪೋಸ್ಟ್ ಹಾಕಿದ್ದರು.

ಈ ಪೋಸ್ಟ್ ಬಳಿಕ ರಿಷಬ್ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದ್ದು ಅಂದರೆ ಯುದ್ದ ನಡೆಯೋ ಸಮಯದಲ್ಲಿ ಆಪರೇನ್ ಸಿಂಧೂರದ ಬಗ್ಗೆ ಒಂದೇ ಒಂದು ಪೋಸ್ಟ್ ಮಾಡಲಿಲ್ಲ. ನಮ್ಮ ಭಾರತೀಯ ಸೈನಿಕರ ಶೌರ್ಯ, ಪರಾಕ್ರಮವನ್ನ ಶ್ಲಾಘಿಸಿ ಒಂದೇ ಒಂದು ಪೋಸ್ಟ್ ಮಾಡದೆ ಇದ್ದದ್ದು ಕೂಡ ರಿಷಭ್ ಅವರು ಟೀಕೆಗಳನ್ನ ಎದುರಿಸುವಂತೆ ಮಾಡಿತ್ತು.
ಇದೀಗ ಕಾಂತಾರ ಪ್ರಿಕ್ವೆಲ್ ಶೂಟಿಂಗ್ ಮುಗಿಸಿ ಬಂದಿದ್ದ ರಾಕೇಶ್ ಪೂಜಾರಿ ಹೃದಯಾಘಾತಕ್ಕೆ ಒಳಗಾದ ಸುದ್ದಿ ತಿಳಿದು ಕೊನೆಯ ಬಾರಿಗೆ ಅವರನ್ನ ನೋಡೋ ಪ್ರಯತ್ನವನ್ನ ಮಾಡಲಿಲ್ವಲ್ಲಾ ಅನ್ನೋ ಪ್ರಶ್ನೆ ಮಾಡಲಾಗ್ತಿದೆ. ಇದಿಷ್ಟೇ ಆಗಿದ್ದರೆ ಪರವಾಗಿಲ್ಲ ಸೋಷಿಯಲ್ ಮಿಡಿಯಾದಲ್ಲಿ ರಿಷಬ್ ರಾಕೇಶ್ ಪೂಜಾರಿ ಬಗ್ಗೆ ಮಾಡಿರೋ ಭಾವುಕ ಪೋಸ್ಟ್​ನಲ್ಲಿ ಅವರ ಹೆಸರನ್ನ ಹೇಳದೆ ಇರೋದು ಸಹನಟನ ಹೆಸರು ಮರೆತೇ ಹೋಯ್ತಾ ಅನ್ನೋ ಪ್ರಶ್ನೆ ಮಾಡುವಂತೆ ಮಾಡಿದೆ.
ರಾಕೇಶ್ ಪೂಜಾರಿ ಅವರ ಅಂತಿಮ ದರ್ಶನಕ್ಕೆ ನಿರ್ದೇಶಕ ಯೋಗರಾಜ್ ಭಟ್, ರಕ್ಷಿತಾ, ಅನುಶ್ರೀ, ಮಾಸ್ಟರ್ ಆನಂದ್ ಸೇರಿದಂತೆ ಇನ್ನೂ ಹಲವಾರು ಮಂದಿ ಕಲಾವಿದರು ಬೆಂಗಳೂರಿನಿಂದ 400 ಕಿ.ಮೀ ಕ್ರಮಿಸಿ ಬಂದಿದ್ದರು. ಆದರೆ ಇಲ್ಲೇ 30 ಕಿ.ಮೀ ದೂರದ ಬೈಂದೂರಿನಲ್ಲಿರುವ ರಿಷಬ್ ಶೆಟ್ಟಿ ರಾಕೇಶ್ ಪೂಜಾರಿಯ ಅಂತಿಮ ದರ್ಶನಕ್ಕೆ ಬಂದಿಲ್ಲ. ಘಟನೆ ನಡೆದು ಮೂರು ದಿನವಾದರೂ ಸೌಜನ್ಯಕ್ಕಾದರೂ ಅವರ ಕುಟುಂಬದವರನ್ನು ಭೇಟಿ ಆಗಿಲ್ಲ. ‘ಕಾಂತಾರ ಚಾಪ್ಟರ್ 1’ ಸಿನಿಮಾನಲ್ಲಿ ರಾಕೇಶ್ ಪೂಜಾರಿ ನಟಿಸಿದ್ದರು, ಸಹ ನಟನ ಸಾವಿಗೂ ರಿಷಬ್ ಶೆಟ್ಟಿ ಬಾರದೇ ಇರುವುದಕ್ಕೆ ಟೀಕೆ ವ್ಯಕ್ತವಾಗಿದೆ.

ಇದನ್ನೂ ಓದಿ : ಖ್ಯಾತ ಜ್ಯೋತಿಷಿ ಆನಂದ್ ಗುರೂಜಿಗೆ ಬ್ಲಾಕ್​ಮೇಲ್​ – ಯೂಟ್ಯೂಬರ್ ದಿವ್ಯಾ ವಸಂತ ವಿರುದ್ಧ FIR!

Btv Kannada
Author: Btv Kannada

Read More