ಬೆಂಗಳೂರು : ಖ್ಯಾತ ಯೂಟ್ಯೂಬರ್ ದಿವ್ಯಾ ವಸಂತಗೆ ಸಂಕಷ್ಟ ಶುರುವಾಗಿದೆ. ಬ್ಲಾಕ್ಮೇಲ್ ಕೇಸಲ್ಲಿ ದಿವ್ಯಾ ವಸಂತ ವಿರುದ್ಧ ಮತ್ತೆ FIR ದಾಖಲಾಗಿದೆ. ನಿಮ್ಮ ಸೆಕ್ಸ್ CD ಇದೆ ಅದನ್ನು ಯೂಟ್ಯೂಬ್ ಚಾನಲ್ಗಳಲ್ಲಿ ಹಾಕುತ್ತೇವೆ ಎಂದು ರಾಜ್ಯದ ಖ್ಯಾತ ಜ್ಯೋತಿಷಿ ಆನಂದ್ ಗುರೂಜಿಗೆ ದಿವ್ಯಾ ವಸಂತ ಬ್ಲಾಕ್ಮೇಲ್ ಮಾಡಿದ್ದಾರೆ.
ಆನಂದ್ ಗುರೂಜಿಗೆ ಹಾಡಹಗಲೇ ಆಶ್ರಮದ ಬಳಿ ಏಕವಚನದಲ್ಲೇ ನಿಂದಿಸಿ ಹಲ್ಲೆಗೆ ಯತ್ನಿಸಿ ದಿವ್ಯಾ ವಸಂತ ಮತ್ತಿತ್ತರರು ಅವಮಾನ ಮಾಡಿದ್ರಾ. ಆನಂದ್ ಗುರೂಜಿ ಕುಟುಂಬದ ಮಾನ ಹರಾಜು ಹಾಕುತ್ತೇನೆ ಎಂದು ಹಣಕ್ಕಾಗಿ ಗುರೂಜಿ ಮೇಲೆ ದೌರ್ಜನ್ಯ ಎಸಗಿ ದಿವ್ಯಾ ವಸಂತ ಮಾನಹಾನಿಗೆ ಯತ್ನಿಸಿದ್ದಾರೆ ಎಂಬ ಗಂಭಿರ ಆರೋಪ ಕೇಳಿಬಂದಿದೆ.
ನಿಮ್ಮ ಸೆಕ್ಸ್ ವಿಡಿಯೋವನ್ನು ಖ್ಯಾತ ಯೂಟ್ಯೂಬ್ ಚಾನಲ್ಗಳಲ್ಲಿ ವಿಡಿಯೋ ಹರಿಬಿಡೋದಾಗಿ ಬ್ಲಾಕ್ಮೇಲ್ ಮಾಡಿದ್ದು, ಈ ಬೆದರಿಕೆ ಹಿನ್ನಲೆ ಆನಂದ್ ಗುರೂಜಿ ಅವರು ಪೊಲೀಸ್ ಠಾಣೆಯ ಮೆಟ್ಟಿಲೇರಿ ದಿವ್ಯಾ ವಸಂತ ಹಾಗೂ ಮತ್ತಿತರರ ಮೇಲೆ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಖ್ಯಾತ ಯೂಟ್ಯೂಬರ್ ದಿವ್ಯಾ ವಸಂತ ಹಾಗೂ ಮತ್ತಿತರರ ಮೇಲೆ BNS 126 (2), BNS 351 ( 3), BNS 352, IT ಕಾಯ್ದೆ 66 E ಅಡಿ FIR ದಾಖಲಾಗಿದೆ.
ಬೇಲಬಲ್ ಸೆಕ್ಷನ್ಗಳ ಅಡಿಯಲ್ಲಿ ದಿವ್ಯಾ ವಸಂತ, ಮತ್ತಿತರರ ಮೇಲೆ FIR ದಾಖಲಾಗಿದ್ದು, FIR ಬಳಿಕ ಯೂಟ್ಯೂಬರ್ ದಿವ್ಯಾ ವಸಂತ ಜಾಮೀನಿಗಾಗಿ JMFC ದೇವನಹಳ್ಳಿ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ದಿವ್ಯಾ ವಸಂತ ವಿರುದ್ಧದ ಸೆಕ್ಷನ್ಗಳು ಎಲ್ಲಾ ಜಾಮೀನು ಸಹಿತ ಆಗಿವೆ. ಈ ಹಿಂದೆ ಕೂಡ ದಿವ್ಯಾ ವಸಂತ ಹನಿಟ್ರ್ಯಾಪ್ಗೆ ಯತ್ನಿಸಿ ಜೈಲು ಪಾಲಾಗಿದ್ದರು. ಜೈಲಿಗೆ ಹೋಗಿ ಬಂದರೂ ಬುದ್ಧಿ ಕಲಿಯದೇ ದಿವ್ಯಾ ವಸಂತ ಹಳೇ ಚಾಳಿ ಮುಂದುವರೆಸಿದ್ದಾರೆ. ಇದೀಗ ಆನಂದ್ ಗುರೂಜಿ ಪೊಲೀಸ್ ಕಮಿಷನರ್ಗೆ ದೂರು ಕೊಡಲು ಸಿದ್ದತೆ ನಡೆಸುತ್ತಿದ್ದು, ಬ್ಲಾಕ್ಮೇಲ್ ಕೇಸಲ್ಲಿ ಚಿಕ್ಕಜಾಲ ಪೊಲೀಸರಿಂದ ತನಿಖೆ ಮುಂದುವರೆದಿದೆ.
ಇದನ್ನೂ ಓದಿ : ರಾಜ್ಯದ 7 ಭ್ರಷ್ಟ ಅಧಿಕಾರಿಗಳ ಚಳಿ ಬಿಡಿಸಿದ ಲೋಕಾಯುಕ್ತ – ಅಪಾರ ಪ್ರಮಾಣದ ಚಿನ್ನಾಭರಣ, ನಗದು, ಅಕ್ರಮ ಆಸ್ತಿಗಳು ಪತ್ತೆ!
