ಬೆಂಗಳೂರು : ಬಿಬಿಎಂಪಿ ಯುಗಾಂತ್ಯವಾಗಿದೆ. ಬಿಬಿಎಂಪಿ ಅನ್ನೋ ಹೆಸರು ಬೆಂಗಳೂರಿಗರ ಜನಮಾನಸದಿಂದ ಇನ್ನು ದೂರವಾಗಲಿದೆ. ಇಂದಿನಿಂದ ‘ಗ್ರೇಟರ್ ಬೆಂಗಳೂರು'(GBA) ಉದಯಿಸಲಿದ್ದು, ಸಿಲಿಕಾನ್ ಸಿಟಿಯ ವ್ಯಾಪ್ತಿ ಕೂಡ ದೊಡ್ಡದಾಗುತ್ತಿದೆ.
ಇಂದಿನಿಂದ ಬೆಂಗಳೂರು, ಗ್ರೇಟರ್ ಬೆಂಗಳೂರು ಆಗಲಿದ್ದು, ಸರ್ಕಾರ ಇಂದು ಈ ಬಗ್ಗೆ ಇಂದು ಅಧಿಕೃತ ಆದೇಶ ಹೊರಡಿಸಲಿದೆ. ಸಿಲಿಕಾನ್ ಸಿಟಿ ಬೆಂಗಳೂರು ಕೇಂದ್ರ, ಕೇಂದ್ರ ಉತ್ತರ, ಬೆಂಗಳೂರು ದಕ್ಷಿಣ ಈ ರೀತಿಯಲ್ಲಿ ಮೂರು ಪಾಲಿಕೆಗಳಾಗಿ ವಿಸರ್ಜನೆಯಾಗಲಿದೆ. ಜೊತೆಗೆ ಬಿಬಿಎಂಪಿ ಅನ್ನೋ ಹೆಸರು ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ.
ಕಾಯ್ದೆಯ ಪ್ರಕಾರ ಮೂರು ಇಲ್ಲವೇ ಐದು ಪಾಲಿಕೆಯನ್ನಾಗಿ ಮಾಡಿ ಗ್ರೇಟರ್ ಬೆಂಗಳೂರು ಕೇಂದ್ರ, ಗ್ರೇಟರ್ ಬೆಂಗಳೂರು ಉತ್ತರ, ಗ್ರೇಟರ್ ಬೆಂಗಳೂರು ದಕ್ಷಿಣ ಹೀಗೆ ನಾಮಕರಣ ಮಾಡುವ ಸಾಧ್ಯತೆ ಇದೆ. GBA ಆಡಳಿತಾಧಿಕಾರಿಯಾಗಿ ತುಷಾರ ಗಿರಿನಾಥ್ ಅವರೇ ಮುಂದುವರೆಯಲಿದ್ದಾರೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದಲ್ಲಿ ಸಿಎಂ ಸಿದ್ದರಾಮಯ್ಯ ಅಧ್ಯಕ್ಷರು, ಬೆಂಗಳೂರು ಅಭಿವೃದ್ಧಿ ಸಚಿವರು ಉಪಾಧ್ಯಕ್ಷರಾಗಲಿದ್ದಾರೆ. ಉಳಿದಂತೆ ಸ್ಥಳೀಯ ಶಾಸಕರು, ಸಂಸದರು, ಸ್ಥಳೀಯ ಸಂಸ್ಥೆಗಳು ಮುಖ್ಯಸ್ಥರು ಸದಸ್ಯರಾಗಿರಲಿದ್ದಾರೆ.
ಗ್ರೇಟರ್ ಬೆಂಗಳೂರಿನಿಂದ ಸಿಲಿಕಾನ್ ಸಿಟಿಯ ವ್ಯಾಪ್ತಿ ಕೂಡ ಹಿರಿದಾಗಲಿದೆ. ನಗರದ ಕೈಗಾರಿಕಾ ಪ್ರದೇಶ ಎಲೆಕ್ಟ್ರಾನಿಕ್ ಸಿಟಿ, ಜಿಗಣಿ, ಅತ್ತಿಬೆಲೆ, ಬಾಗಲೂರು, ಬೊಮ್ಮಸಂದ್ರ, ಹೆಸರಘಟ್ಟ, ಹಾರೋಹಳ್ಳಿ, ದಾನಸಪುರ, ಕುಂಬಳಗೋಡು ಸೇರಿದಂತೆ ಹಲವು ಪ್ರದೇಶಗಳನ್ನು ಗ್ರೇಟರ್ ಬೆಂಗಳೂರು ಪ್ರದೇಶದ ವ್ಯಾಪ್ತಿಗೆ ಸೇರಿಸಿಕೊಳ್ಳಲಿದೆ. ಗ್ರೇಟರ್ ಬೆಂಗಳೂರಿನಲ್ಲಿ ಹಲವು ಬದಲಾವಣೆ ಸಾಧ್ಯತೆ ಇದ್ದು, ಕಟ್ಟಡಗಳ ಗಾತ್ರ, ಎತ್ತರ ನಿಯಮಗಳು ಬದಲಾಗುವ ಸಾಧ್ಯತೆ ಇದೆ.
2007ರಲ್ಲಿ ರಚನೆಯಾಗಿದ್ದ ಬಿಬಿಎಂಪಿಗೆ 2010ರಲ್ಲಿ ಸ್ಥಳೀಯ ಚುನಾವಣೆಗಳು ನಡೆದಿತ್ತು. ಇಂತಹ ಬಿಬಿಎಂಪಿ ಇಂದು ತನ್ನ ಅಸ್ತಿತ್ವ ಕಳೆದುಕೊಳ್ಳಲಿದ್ದು, ಇಂದಿನಿಂದ ಗ್ರೇಟರ್ ಬೆಂಗಳೂರು ಜಾರಿಯಾಲಿದೆ. ಕಳೆದ ನಾಲ್ಕು ವರ್ಷಗಳಿಂದ ಬಿಬಿಎಂಪಿ ಚುನಾವಣೆ ನಡೆದಿಲ್ಲ. ಇಂತಹ ಟೈಂನಲ್ಲಿ ಗ್ರೇಟರ್ ಬೆಂಗಳೂರಿನ ಆಡಳಿತದ ಬಗ್ಗೆ ಕುತೂಹಲ ,ಪ್ರಶ್ನೆಗಳು ಕೂಡ ಹುಟ್ಟಿಕೊಂಡಿದೆ.
GBAನಲ್ಲಿ ಏನೆಲ್ಲಾ ಬದಲಾಗಲಿದೆ?
- ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (GBA) ಮುಖ್ಯಮಂತ್ರಿಗಳೇ ಅಧ್ಯಕ್ಷರು
- ಬೆಂಗಳೂರು ಅಭಿವೃದ್ಧಿ ಸಚಿವರೇ GBAನ ಉಪಾಧ್ಯಕ್ಷ
- ತಲಾ 125 ವಾರ್ಡ್‌ಗಳನ್ನು ಒಳಗೊಂಡ ಮೂರು ನಗರ ಪಾಲಿಕೆ
- ಪ್ರತಿ ಪಾಲಿಕೆಗೂ ಗ್ರೇಟರ್ ಬೆಂಗಳೂರು ಪ್ರದೇಶದ ಗಡಿ ನಿಗಧಿ ಮಾಡಲಾಗುತ್ತೆ
- ಎಲೆಕ್ಟ್ರಾನಿಕ್ ಸಿಟಿ, ಅತ್ತಿಬೆಲೆ, ಜಿಗಣಿ ಕೈಗಾರಿಕೆ ಪ್ರದೇಶ ಬೊಮ್ಮಸಂದ್ರ
- ಸರ್ಜಾಪುರ, ಬಾಗಲೂರು, ರಾಜಾನುಕುಂಟೆ, ಹೆಸರಘಟ್ಟ, ದಾಸನಪುರ ಸೇರ್ಪಡೆ
- ಮಾಕಳಿ, ತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ, ಹಾರೋಹಳ್ಳಿಯೂ ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ
- ಗ್ರೇಟರ್ ಬೆಂಗಳೂರು ಕಟ್ಟಡಗಳ ಗಾತ್ರ, ಎತ್ತರ ನಿಯಮಗಳು ಬದಲು ಸಾಧ್ಯತೆ
- ವಸತಿ ಕಟ್ಟಡಗಳಿಗೆ ಶೇ. 50ರಷ್ಟು & ವಾಣಿಜ್ಯ ಕಟ್ಟಡಗಳಿಗೆ ಶೇ. 25ರಷ್ಟು ಕಡಿತ ತರುವ ಸಾಧ್ಯತೆ
ಇದನ್ನೂ ಓದಿ : ರಾಜ್ಯದಲ್ಲಿ ಬೆಳ್ಳಂಬೆಳಗ್ಗೆ ಲೋಕಾ ರೇಡ್ – ಕರ್ನಾಟಕದಾದ್ಯಂತ 7 ಭ್ರಷ್ಟ ಅಧಿಕಾರಿಗಳ ಮನೆಗಳ ಮೇಲೆ ದಾಳಿ!
