ಮಂಗಳೂರು : ಸಂವಿಧಾನದ ಹತ್ತನೇ ಅನುಸೂಚಿಯಡಿ ಸಭಾಧ್ಯಕ್ಷರ ಅಧಿಕಾರ ಮತ್ತು ನಿಯಮಗಳನ್ನು ಪರಿಶೀಲಿಸುವ ರಾಷ್ಟ್ರೀಯ ಸಮಿತಿಗೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ ಖಾದರ್ ಅವರನ್ನು ನೇಮಕ ಮಾಡಲಾಗಿದೆ.
ದೇಶಾದ್ಯಂತ ಕೇವಲ ನಾಲ್ಕು ವಿಧಾನಸಭಾ ಸ್ಪೀಕರ್‌ಗಳನ್ನು ಒಳಗೊಂಡ ಸಮಿತಿಗೆ ಯು.ಟಿ ಖಾದರ್ ಅವರನ್ನು ನೇಮಕ ಮಾಡಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಆದೇಶ ಹೊರಡಿಸಿದ್ದಾರೆ.
ಈ ನೇಮಕ ಮಹತ್ವದು ಎಂದು ಪರಿಗಣಿಸಲಾಗಿದೆ. ಮಹಾರಾಷ್ಟ್ರದ ಸ್ಪೀಕರ್ ರಾಹುಲ್ ನಾರ್ವೇಕರ್ ಸಮಿತಿಯ ಅಧ್ಯಕ್ಷರಾಗಿದ್ದು, ಒಡಿಶಾ ಸ್ಪೀಕರ್ ಸುರಮ ಪಾದಿ, ಕರ್ನಾಟಕ ಸ್ಪೀಕರ್ ಯು.ಟಿ ಖಾದರ್, ನಾಗಲ್ಯಾಂಡ್ ಸ್ಪೀಕರ್ ಷರಿಂಗೈನ್ ಲಾಂಗ್ ಕುಮೆರ್ ಸಮಿತಿಯ ಸದಸ್ಯರಾಗಿದ್ದಾರೆ.
ರಾಜ್ಯ ವಿಧಾನಸಭೆಗಳಲ್ಲಿ ಸ್ಪೀಕರ್ ಅವರ ಅಧಿಕಾರ, ಜವಾಬ್ದಾರಿಗಳು ಮತ್ತು ಕಾರ್ಯವಿಧಾನದ ನಿಯಮಗಳನ್ನು ರಾಷ್ಟ್ರೀಯ ಸಮಿತಿಗೆ ಪರಿಶೀಲಿಸಲಿದ್ದು, ನಾಲ್ಕು ಬಾರಿ ಶಾಸಕರಾಗಿರುವ ಖಾದರ್ ಅವರು, ಈ ರಾಷ್ಟ್ರೀಯ ಸಮಿತಿಗೆ ನಾಮನಿರ್ದೇಶನಗೊಂಡ ಕರ್ನಾಟಕದ ಮೊದಲ ಸ್ಪೀಕರ್ ಆಗಿದ್ದಾರೆ.
ಇದನ್ನೂ ಓದಿ : ಪ್ಲೀಸ್ ನೀರು ಹರಿಸಿ.. ಭಾರತದ ಬಳಿ ಮತ್ತೆ ಭಿಕ್ಷೆ ಬೇಡಿದ ಪಾಕ್ – ‘ಸಿಂಧೂ ಜಲ ಒಪ್ಪಂದ’ವನ್ನು ಮರುಪರಿಶೀಲಿಸುವಂತೆ ಪತ್ರ!
