ಪಾಕಿಸ್ತಾನದಿಂದ ಮುಕ್ತರಾಗಲು ಹೋರಾಡ್ತಿರುವ ಬಲೂಚಿಸ್ತಾನ ಇದೀಗ ಸ್ವಾತಂತ್ರ್ಯ ಘೋಷಿಸಿಕೊಂಡಿದೆ. ನಾವು ಪಾಕಿಸ್ತಾನದಿಂದ ಪ್ರತ್ಯೇಕವಾಗಿದ್ದೇವೆ ಎಂದು ಬಲೂಚಿಸ್ತಾನದ ನಾಯಕರು ಘೋಷಣೆ ಮಾಡಿದ್ದಾರೆ.
ಸುಮಾರು 6 ಕೋಟಿ ಜನರಿರುವ ಬಲೂಚಿಸ್ತಾನ ಸ್ವಾತಂತ್ರ್ಯ ಘೋಷಣೆ ಬೆನ್ನಲ್ಲೇ ‘ರಿಪಬ್ಲಿಕ್ ಬಲೂಚಿಸ್ತಾನ’ ಅಂತಾ ಅಲ್ಲಿನ ನಾಯಕರು ನಾಮಕರಣ ಮಾಡಿದ್ದಾರೆ. ಸ್ವಾತಂತ್ರ ಬಲೂಚಿಸ್ತಾನವನ್ನು ಭಾರತ ಮತ್ತು ವಿಶ್ವಸಂಸ್ಥೆ ನಮ್ಮನ್ನು ಗುರುತಿಸಿ ಮಾನ್ಯತೆ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಅಂದ್ಹಾಗೆ ಬಲೂಚಿಸ್ತಾನದಲ್ಲಿ ಸುಮಾರು 6 ಕೋಟಿ ಜನರಿದ್ದಾರೆ. ಸ್ವಾತಂತ್ರ್ಯ ಘೋಷಿಸಿಕೊಂಡ ಬೆನ್ನಲ್ಲೇ ಬಲೂಚ್ ನಾಯಕರು ಪ್ರತ್ಯೇಕ ಬಲೂಚ್ ನಕ್ಷೆ, ಧ್ವಜವನ್ನು ಪ್ರದರ್ಶಿಸಿದ್ದಾರೆ. ಪಾಕಿಸ್ತಾನ ಸರ್ಕಾರ, ಸೇನೆಯ ದೌರ್ಜನ್ಯದ ವಿರುದ್ಧ ಬಲೂಚ್ ಜನರು ದಶಕಗಳಿಂದ ಹೋರಾಟ ನಡೆಸುತ್ತಿದ್ದರು.
ಬಲೂಚಿಸ್ತಾನಕ್ಕೆ ದೆಹಲಿಯಲ್ಲಿ ಅಧಿಕೃತ ರಾಯಭಾರ ಕಚೇರಿ ತೆರೆಯಲು ಅವಕಾಶ ಕೊಡಬೇಕು ಎಂದು ಬಲೂಚ್ ನಾಯಕರು ಮನವಿ ಮಾಡಿದ್ದಾರೆ. ಬಲೂಚ್ ಹೋರಾಟಗಾರ ಮೀರ್ ಯಾರ್ ಬಲೂಚ್ ಭಾರತಕ್ಕೆ ಬೆಂಬಲ ಘೋಷಣೆ ಮಾಡಿದ್ದಾರೆ. ಪಾಕ್ ವಿರುದ್ಧ ಅಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸುತ್ತಿರುವುದಕ್ಕೆ ನಮ್ಮ ಬೆಂಬಲ ಇದೆ. ಪಿಒಕೆಯನ್ನು ಪಾಕಿಸ್ತಾನ ಖಾಲಿ ಮಾಡಬೇಕೆಂಬ ಭಾರತದ ಆಗ್ರಹಕ್ಕೆ ಬಲೂಚ್ ಬೆಂಬಲಿಸುತ್ತೆ. ನರೇಂದ್ರ ಮೋದಿ ಅವರೇ ನೀವು ಏಕಾಂಗಿಯಲ್ಲ, ನಿಮ್ಮ ಹಿಂದೆ ಬಲೂಚಿಸ್ತಾನದ 60 ಮಿಲಿಯನ್ ಜನರಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ : ನವಲಗುಂದ ಬೈಪಾಸ್ ರಸ್ತೆ ನಿರ್ಮಾಣಕ್ಕೆ AACಯಿಂದ ಅನುಮತಿ – ಮೋದಿ ಹಾಗೂ ನಿತಿನ್ ಗಡ್ಕರಿಗೆ ಅಭಿನಂದಿಸಿದ ಪ್ರಹ್ಲಾದ್ ಜೋಶಿ!
