ಗೋಲ್ಡ್ ಸ್ಮಗ್ಲಿಂಗ್ ‘ರಾಣಿ’ ರನ್ಯಾ ವಿರುದ್ಧ ಕಾಫಿಪೋಸಾ ಕಾಯ್ದೆ – CEIB ನಡೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿಕೆ!

ಬೆಂಗಳೂರು : ಗೋಲ್ಡ್ ಸ್ಮಗ್ಲಿಂಗ್ ಕೇಸ್​ನಲ್ಲಿ ನಟಿ ರನ್ಯಾ ರಾವ್‌ ವಿರುದ್ಧ ಸಿಇಐಬಿ ಕಾಫಿಪೋಸಾ ಕಾಯ್ದೆ ಅಡಿ ಬಂಧನದ ಆದೇಶ ನೀಡಿತ್ತು. ನಟಿ ವಿರುದ್ಧ ಕಾಫಿಪೋಸಾ ಕಾಯ್ದೆ ಅನ್ವಯಿಸಿರುವುದನ್ನ ಪ್ರಶ್ನಿಸಿ ರನ್ಯಾ ತಾಯಿ ರೋಹಿಣಿ ಸಲ್ಲಿಸಿದ್ದರು.

ಇಂದು ಹೈಕೋರ್ಟ್ ವಿಭಾಗೀಯ ಪೀಠ ಅರ್ಜಿ ವಿಚಾರಣೆ ನಡೆಸಿದೆ. ನ್ಯಾ. ಎಚ್‌ ಪಿ ಸಂದೇಶ್‌ ಮತ್ತು ರಾಮಚಂದ್ರ ಹುದ್ದಾರ್‌ ಅವರ ರಜಾಕಾಲೀನ ವಿಭಾಗೀಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಸಿ, ಜೂನ್‌. 3ಕ್ಕೆ ವಿಚಾರಣೆ ಮುಂದೂಡಿದ್ದಾರೆ.

12.56 ರೂ. ಕೋಟಿ ಮೌಲ್ಯದ 14.2 ಕೆಜಿ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದ ಮೇಲೆ ನ್ಯಾ ರಾವ್ ಅವರನ್ನು ಮಾರ್ಚ್ 3 ರಂದು ಬಂಧಿಸಲಾಗಿತ್ತು. ರನ್ಯಾ ರಾವ್ ಮತ್ತು ಪ್ರಕರಣದ ಇತರ ಇಬ್ಬರು ಆರೋಪಿಗಳು ಪರಪ್ಪನ ಅಗ್ರಹಾರದಲ್ಲಿದ್ದಾರೆ.

ಇದನ್ನೂ ಓದಿ : ‘ಸೂರ್ಯ’ ಚಿತ್ರದ “ಕೆಂಪಾನ‌ ಗಲ್ಲದ ಹುಡುಗಿ” ಡ್ಯುಯೆಟ್ ಹಾಡಲ್ಲಿ ಉತ್ತರ ಕರ್ನಾಟಕದ ಸೊಗಡು!

Btv Kannada
Author: Btv Kannada

Read More