ಪಂಜಾಬ್ : ಪಹಲ್ಗಾಮ್ ದಾಳಿಗೆ ಭಾರತ ಪ್ರತೀಕಾರ ತೀರಿಸಿಕೊಂಡಿದ್ದು, ‘ಆಪರೇಷನ್ ಸಿಂಧೂರ’ದ ಮೂಲಕ ಪಾಕಿಸ್ತಾನ ಹಾಗೂ ಉಗ್ರರ ಹುಟ್ಟಡಗಿಸಿದೆ. ‘ಆಪರೇಷನ್ ಸಿಂಧೂರ್’ನ್ನು ಯಶಸ್ವಿಯಾಗಿ ನಿರ್ವಹಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಭಾರತದ ಸಶಸ್ತ್ರ ಪಡೆಗಳನ್ನು ಶ್ಲಾಘಿಸಿದ್ದಾರೆ.
ಇದೀಗ ಭಾರತ-ಪಾಕ್ ಕದನ ವಿರಾಮದ ಬಳಿಕ ಭಾರತೀಯ ಸೈನಿಕರನ್ನು ಪ್ರಧಾನಿ ಮೋದಿ ಭೇಟಿಯಾಗಿದ್ದಾರೆ. ಇಂದು ಬೆಳಗ್ಗೆ ಪಂಜಾಬ್ನ ಅದಂಪುರ್ ವಾಯುನೆಲೆಗೆ ಮೋದಿ ಭೇಟಿ ನೀಡಿದ್ದು, ವಾಯುಪಡೆಯ ಸಿಬ್ಬಂದಿಗಳ ಬಳಿ ಮಾಹಿತಿ ಪಡೆದಿದ್ದಾರೆ.
ಹಾಗೆಯೇ, ಸಂಘರ್ಷದ ವೇಳೆ ಪರಾಕ್ರಮ ತೋರಿದ ಸೈನಿಕರನ್ನು ಮೋದಿ ಕೊಂಡಾಡಿದ್ದು, ಸೈನಿಕರೊಂದಿಗೆ ಆಪ್ತ ಸಮಲೋಚನೆ ನಡೆಸಿದ್ದಾರೆ. ಸೈನಿಕರು ಸಂತೋಷದಿಂದ ಪ್ರಧಾನಿ ಮೋದಿಯವರನ್ನು ಸುತ್ತುವರೆದು ಮಾತುಕತೆ ನಡೆಸುತ್ತಿರುವ ಫೋಟೋಗಳನ್ನು Indian Armed Forces ಫೇಸ್ಬುಕ್ ಪೇಜ್ನಲ್ಲಿ ಹಂಚಿಕೊಂಡಿದೆ. ಸದ್ಯ ಈ ಪೋಟೋಗಳು ಎಲ್ಲೆಡೆ ವೈರಲ್ ಆಗಿದೆ.
ಇದನ್ನೂ ಓದಿ : ಕನ್ನಡ ಮತ್ತು ಕನ್ನಡಿಗರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ಕೇಸ್ – FIR ರದ್ದು ಕೋರಿ ಸೋನು ನಿಗಮ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿಕೆ!

Author: Btv Kannada
Post Views: 279