ಮೇ 17ರಿಂದ ಮತ್ತೆ IPL ಹಬ್ಬ.. ಮೊದಲ ಪಂದ್ಯದಲ್ಲೇ ಆರ್​ಸಿಬಿ-ಕೆಕೆಆರ್​ ಮುಖಾಮುಖಿ – ಫೈನಲ್ ಯಾವಾಗ? ಇಲ್ಲಿದೆ ಡೀಟೇಲ್ಸ್​!

ನವದೆಹಲಿ : ಭಾರತ ಹಾಗೂ ಪಾಕ್ ನಡುವಿನ ಉದ್ನಿಗ್ನತೆ ಹಿನ್ನೆಲೆಯಲ್ಲಿ 2025ರ ಐಪಿಎಲ್ ಟೂರ್ನಿ ಅರ್ಧಕ್ಕೆ ನಿಂತಿತ್ತು. ಉಭಯ ದೇಶಗಳ ನಡುವೆ ಯುದ್ಧದ ಭೀತಿ ಎದುರಾಗಿದ್ದರಿಂದ ಮೇ 8ರಂದು ನಡೆಯುತ್ತಿದ್ದ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಿದ್ದ BCCI, 2025ರ ಐಪಿಎಲ್ ಟೂರ್ನಿಯನ್ನು ಒಂದು ವಾರ ಮುಂದೂಡಿತ್ತು.

ಆದರೀಗ ಎರಡೂ ದೇಶಗಳು ಕದನ ವಿರಾಮ ಘೋಷಿಸಿರುವ ಕಾರಣ ಬಿಸಿಸಿಐ ಉಳಿದ ಪಂದ್ಯಗಳಿಗೆ ಹೊಸ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಹೊಸ ವೇಳಾಪಟ್ಟಿಯ ಪ್ರಕಾರ, ಮೇ 17ರಿಂದ ಲೀಗ್ ಮತ್ತೆ ಪ್ರಾರಂಭವಾಗಲಿದ್ದು, ಒಟ್ಟು 17 ಪಂದ್ಯಗಳು 6 ಸ್ಥಳಗಳಲ್ಲಿ ನಡೆಯಲಿವೆ. ಹಾಗೆಯೇ ಫೈನಲ್ ಪಂದ್ಯವು ಜೂನ್ 3ರಂದು ನಡೆಯಲಿದೆ. ಈ ಬಗ್ಗೆ ಇಂಡಿಯನ್ ಪ್ರೀಮಿಯರ್ ಲೀಗ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

ಹೊಸ ವೇಳಾಪಟ್ಟಿಯ ಪ್ರಕಾರ, ಮೇ 17ರಂದು ಬೆಂಗಳೂರಿನಲ್ಲಿ ಮೊದಲ ಪಂದ್ಯ ನಡೆಯಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಸೆಣೆಸಾಡಲಿದೆ. ಮೇ 25ರಂದು ಕೊನೆಯ ಲೀಗ್ ಹಂತದ ಪಂದ್ಯ ನಡೆಯಲಿದೆ. ಮೇ 29ರಂದು ಕ್ವಾಲಿಫೈಯರ್ 1, ಮೇ 30ರಂದು ಎಲಿಮಿನೇಟರ್ ಪಂದ್ಯ ನಡೆದರೆ, ಜೂನ್ 1 ರಂದು ಕ್ವಾಲಿಫೈಯರ್ 2 ಪಂದ್ಯ ನಡೆಯಲಿದ್ದು, ಜೂನ್ 3ರಂದು ಫೈನಲ್ ಪಂದ್ಯ ನಡೆಯಲಿದೆ.

ಐಪಿಎಲ್ 2025 : ಹೊಸ ಶೆಡ್ಯೂಲ್..

ಪ್ಲೇ ಆಫ್ ಪಂದ್ಯಗಳ ವೇಳಾಪಟ್ಟಿ ಇಂತಿದೆ :

ಮೇ 29ರಂದು ಮೊದಲ ಕ್ವಾಲಿಫೈಯರ್ ಪಂದ್ಯ

ಮೇ 30ರಂದು ಎಲಿಮಿನೇಟರ್ ಪಂದ್ಯ

ಜೂನ್ 1 ಎರಡನೇ ಕ್ವಾಲಿಫೈಯರ್ ಪಂದ್ಯ

ಜೂನ್ 3ರಂದು ಫೈನಲ್ ಪಂದ್ಯ ನಡೆಯಲಿದೆ.

ಇದನ್ನೂ ಓದಿ : ಭಾರತೀಯ ಹೆಣ್ಮಕ್ಕಳ ಸಿಂಧೂರ ಅಳಿಸಿದರೆ ಏನಾಗುತ್ತೆ ಅಂತ ಉಗ್ರರಿಗೆ ತೋರಿಸಿದ್ದೇವೆ – ಪ್ರಧಾನಿ ಮೋದಿ!

Btv Kannada
Author: Btv Kannada

Read More