ಪ್ರೇಮಿಗಳ ದಿನದಂದು ಪೃಥ್ವಿ ಅಂಬಾರ್, ಪ್ರಮೋದ್ ನಟನೆಯ ‘ಭುವನಂ ಗಗನಂ’ ಚಿತ್ರ ತೆರೆಗೆ!

ಪೃಥ್ವಿ ಅಂಬಾರ್ ಮತ್ತು ಪ್ರಮೋದ್ ಅಭಿನಯದ ಭುವನಂ ಗಗನಂ ಸಿನಿಮಾ ತೆರೆ ಕಾಣಲು ಸಜ್ಜಾಗಿದ್ದು, ಸುಂದರ ಪ್ರೇಮಕಥಾಹಂದರ ಹೊಂದಿರುವ ಈ ಚಿತ್ರ ಫೆಬ್ರವರಿ 14ರಂದು ಪ್ರೇಮಿಗಳ ದಿನದ ಸ್ಪೆಷಲ್ ಆಗಿ ರಾಜ್ಯಾದ್ಯಂತ ರಿಲೀಸ್ ಆಗಲಿದೆ. ಎಸ್‌ವಿಸಿ ಫಿಲಂಸ್‌ ಬ್ಯಾನರ್‌ನಡಿಯಲ್ಲಿ ಎಂ ಮುನೇಗೌಡ ನಿರ್ಮಿಸಿರುವ ಈ ಚಿತ್ರವನ್ನು ಗಿರೀಶ್ ಮೂಲಿಮನಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

ಲವರ್ ಬಾಯ್ ಆಗಿ ಗಮನಸೆಳೆದಿರುವ ಪೃಥ್ವಿ ಅಂಬರ್ ಹಾಗೂ ರಗಡ್ ಪಾತ್ರಗಳ ಮೂಲಕ ಖ್ಯಾತಿ ಪಡೆದಿರುವ ಪ್ರಮೋದ್ ನಾಯಕರಾಗಿ ಭುವನಂ ಗಗನಂನಲ್ಲಿ ನಟಿಸಿದ್ದಾರೆ. 

ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡರಲ್ಲೂ ನಡೆಯುವ ಕಥೆ ಭುವನಂ ಗಗನಂ ಸಿನಿಮಾದಲ್ಲಿದ್ದು, ಇದು ಪ್ರೇಮ, ಪ್ರಣಯ ಮತ್ತು ಕೌಟುಂಬಿಕ ಭಾವನೆಗಳನ್ನು ಒಳಗೊಂಡಿದೆ. ಲವ್ ಮಾಕ್‌ಟೇಲ್‌ ಸಿನಿಮಾದ ಮೂಲಕ ಫೇಮಸ್ ಆದ ರಾಚೇಲ್ ಡೇವಿಡ್ ಈ ಸಿನಿಮಾದಲ್ಲಿ ಪ್ರಮೋದ್ ಅವರಿಗೆ ಜೋಡಿಯಾಗಿದ್ದು, ಅಶ್ವತಿ ಪೃಥ್ವಿಗೆ ಜೋಡಿಯಾಗಿ ನಟಿಸಿದ್ದಾರೆ.

ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಪ್ರಕಾಶ್ ತುಮ್ಮಿನಾಡು, ಸಿದ್ಲಿಂಗು ಶ್ರೀಧರ್, ಹರಿಣಿ, ಸ್ಪರ್ಶ ರೇಖಾ, ಪ್ರಜ್ವಲ್ ಶೆಟ್ಟಿ ಮತ್ತು ಚೇತನ್ ದುರ್ಗ ಚಿತ್ರದ ತಾರಾಬಳಗದಲ್ಲಿದ್ದಾರೆ. ಇನ್ನೂ, ಈ ಚಿತ್ರಕ್ಕೆ ಉದಯ್ ಲೀಲಾ ಅವರ ಛಾಯಾಗ್ರಹಣ, ಗುಮ್ಮನೇನಿ ವಿಜಯ್ ಅವರ ಸಂಗೀತ ಹಾಗೂ ಸುನೀಲ್ ಕಶ್ಯಪ್ ಅವರ ಸಂಕಲನವಿದೆ. 

ಇದನ್ನೂ ಓದಿ : http://ಅಪ್ಪನ ಜೊತೆ ಫೋಟೋಗೆ ಪೋಸ್‌‌ ಕೊಟ್ಟ ಸಾನ್ವಿ ಸುದೀಪ್‌‌.. ನಮ್ಮ ಹೃದಯ ಕದ್ದು ಬಿಟ್ರಿ ಎಂದ ಫ್ಯಾನ್ಸ್!

Btv Kannada
Author: Btv Kannada

Read More

Read More