ಬೆಂಗಳೂರಿನಲ್ಲಿ ಡಾಕ್ಟರ್​​​ ನಿವಾಸಕ್ಕೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟ ಕಿಡಿಗೇಡಿಗಳು – ಪ್ರಕರಣ ದಾಖಲು!

ಬೆಂಗಳೂರು : ಬೆಂಗಳೂರಿನಲ್ಲಿ ವೈದ್ಯರೊಬ್ಬರ ಮನೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ವಿಜಯನಗರದ ಬಾಪೂಜಿ ಲೇಔಟ್​ನಲ್ಲಿ ನಡೆದಿದೆ. ಎರಡು ಬೈಕ್​ನಲ್ಲಿ ಬಂದ ನಾಲ್ವರು ಕಿಡಿಗೇಡಿಗಳು ವೈದ್ಯ ಗಂಗಾಧರ್ ಎಂಬುವವರ ಮನೆ ಮೇಲೆ ಕೃತ್ಯ ಎಸಗಿದ್ದಾರೆ.

ಮೇ 10ರ ಮಧ್ಯರಾತ್ರಿ 12:20 ಸುಮಾರಿಗೆ ಎರಡು ಬೈಕ್​ನಲ್ಲಿ ಬಂದ ಕಿಡಿಗೇಡಿಗಳು ವೈದ್ಯ ಗಂಗಾಧರ್ ಮನೆ ಗೇಟ್​ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಬೆಂಕಿ ಹಚ್ಚುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೆಂಕಿಯ ತೀವ್ರತೆಗೆ ಕಾಂಪೌಂಡ್​ನಲ್ಲಿದ್ದ ಕಾರಿಗೂ ಹಾನಿಯಾಗಿದ್ದು, ಸೆಕ್ಯುರಿಟಿ ಗಾರ್ಡ್ ತ್ಯಾಗರಾಜು ಎಂಬವರಿಗೆ  ಕೈ ಮತ್ತು ತಲೆಗೆ ಬೆಂಕಿ ತಗುಲಿ ಹಣೆ, ಕೈಗಳಿಗೆ ಗಾಯವಾಗಿದೆ.

ಈ ಹಿಂದೆ ವೈದ್ಯ ಗಂಗಾಧರ್ ಮಗನಿಗೆ ಸೇರಿದ ಫಾರ್ಮಾ ಕಂಪನಿ ಬಾಗಿಲಿಗೂ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಈ ಸಂಬಂಧ ದೂರನ್ನೂ ನೀಡಲಾಗಿತ್ತು. ಇದೀಗ ಗಂಗಾಧರ್ ಮನೆಗೂ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಸದ್ಯ ಘಟನಾ ಸಂಬಂಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ : ರಾಕೇಶ್ ಮಿಸ್ ಯೂ.. ಕಾಮಿಡಿ ಕಿಲಾಡಿ ಸ್ಟಾರ್​ ನಿಧನಕ್ಕೆ ಸಂತಾಪ ಸೂಚಿಸಿದ ನಟಿ ರಕ್ಷಿತಾ ಪ್ರೇಮ್ – ಭಾವುಕ ಪೋಸ್ಟ್!

Btv Kannada
Author: Btv Kannada

Read More