ನಟ ಯಶ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್‌ನಲ್ಲಿ ಮೂಡಿಬಂದ ʻಕೆಜಿಎಫ್ 1’ ಮತ್ತು ʻಕೆಜಿಎಫ್ 2’ ಸರಣಿಗಳು ಸಿನಿಮಾಗಳ ದಿಕ್ಕನ್ನೇ ಬದಲಿಸಿದ್ದವು. ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್‌ನಲ್ಲಿ ʻರಾಕಿ ಭಾಯ್ʼ ಹವಾ ಸೃಷ್ಟಿಸಿದ್ದರು. ಬಾಕ್ಸಾಫೀಸ್‌ನಲ್ಲಿ ದಾಖಲೆ ಮಟ್ಟಕ್ಕೆ ಯಶಸ್ಸನ್ನು ಕಂಡಿತು. ಸದ್ಯ ʻಕೆಜಿಎಫ್ 3’ ಸಿನಿಮಾಗಾಗಿ ರಾಕಿಂಗ್ ಸ್ಟಾರ್ ಅಭಿಮಾನಿಗಳು ಕಾದು ಕುಳಿತಿದ್ದಾರೆ. ʻಕೆಜಿಎಫ್ 3′ ಸಿನಿಮಾ ಶುರುವಾಗೋದು ಯಾವಾಗ ಅನ್ನೋದೇ ಎಲ್ಲರ ಪ್ರಶ್ನೆಯಾಗಿದೆ. ಈ ಬೆನ್ನಲ್ಲೇ ಹೊಂಬಾಳೆ ಸಂಸ್ಥೆಯಿಂದ ಬಿಗ್ ಅಪ್ಡೇಟ್‌ವೊಂದು ಸಿಕ್ಕಿದೆ.
‘ಕೆಜಿಎಫ್ 1’ ಮತ್ತು ‘ಕೆಜಿಎಫ್ 2’ ಭರ್ಜರಿ ಯಶಸ್ಸಿನ ಬಳಿಕ ಅಭಿಮಾನಿಗಳು ‘ಕೆಜಿಎಫ್ 3’ ಕುರಿತು ಅಪ್‌ಡೇಟ್‌ಗಾಗಿ ಎದುರು ನೋಡುತ್ತಿರುವಾಗಲೇ ಹೊಂಬಾಳೆ ಫಿಲ್ಮ್ಸ್ ತನ್ನ ಅಫೀಶಿಯಲ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ʻಕೆಜಿಎಫ್ 3’ ಸಿನಿಮಾದ ಕುರಿತು ವಿಶೇಷ AI ವಿಡಿಯೋವೊಂದನ್ನು ಹಂಚಿಕೊಂಡಿದೆ. ಈ ಮೂಲಕ ರಾಕಿಂಗ್ ಸ್ಟಾರ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದೆ.
ವಿಡಿಯೋದಲ್ಲಿ ಏನಿದೆ? ‘ನರಾಚಿ’ ದ್ವಾರದಿಂದ ವಿಡಿಯೋ ಆರಂಭವಾಗುತ್ತೆ. ಕೆಜಿಎಫ್-2ನಲ್ಲಿ ರಾಕಿ ಭಾಯ್ ಹಡಗಿನಲ್ಲಿ ಚಿನ್ನ ತುಂಬಿಕೊಂಡು ಸಮುದ್ರದ ಮಧ್ಯೆ ನಿಲ್ಲುವವರೆಗೆ ಸಾಗುತ್ತದೆ. ಆ ದೃಶ್ಯ ಸಿಗುತ್ತೆ. ಕೆಜಿಎಫ್ ಚಾಪ್ಟರ್-1ನಲ್ಲಿ ಯಶ್ ನರಾಚಿಗೆ ಎಂಟ್ರಿ ಕೊಟ್ಟಾಗಿನಿಂದ ಇಡೀ ಕೆಜಿಎಫ್ ಸಾಮ್ರಾಜ್ಯಕ್ಕೆ ಸಾಮ್ರಾಟನಾದವರೆಗಿನ ಕಥೆಯನ್ನ ಈ ವಿಡಿಯೋನಲ್ಲಿ ಕಟ್ಟಿಕೊಡಲಾಗಿದೆ. ʻನೀವು ರಾಕಿ ಭಾಯ್ ಜೊತೆಗೆ ಮುಂದುವರಿಯಿರಿ, ಇದು ಯಾರೂ ನಿಯಂತ್ರಿಸಲಾಗದ ಶಕ್ತಿʼ ಎಂದು ಇಂಗ್ಲಿಷ್‌ನಲ್ಲಿ ಟ್ಯಾಗ್ ಲೈನ್ ಬರೆದುಕೊಂಡಿದೆ.
ಒಟ್ಟಾರೆ ವಿಡಿಯೋ ಕಂಡು ಯಶ್ ಫ್ಯಾನ್ಸ್ ಸಖತ್ ಖುಷ್ ಆಗಿದ್ದಾರೆ. ಆದಷ್ಟು ಬೇಗ ಕೆಜಿಎಫ್ 3 ರಿಲೀಸ್ ಮಾಡಿ ಎಂದು ಫ್ಯಾನ್ಸ್ ರಿಕ್ವೆಸ್ಟ್ ಮಾಡ್ತಿದ್ದಾರೆ. ಸದ್ಯ ನಿರ್ದೇಶಕ ಪ್ರಶಾಂತ್ ನೀಲ್ ಜೂ. ಎನ್‌ಟಿಆರ್ ಜೊತೆಗಿನ ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಇದರ ಬಳಿಕ ಅವರು ‘ಸಲಾರ್ 2’ ಸಿನಿಮಾ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ರಾಕಿಂಗ್ ಸ್ಟಾರ್ ಯಶ್ ಸದ್ಯ ಟಾಕ್ಸಿಕ್ ಚಿತ್ರದ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಬಾಲಿವುಡ್‌ನ ರಾಮಾಯಣ ಚಿತ್ರದಲ್ಲಿ ರಾವಣನ ರೋಲ್ ಕೂಡ ಮಾಡುತ್ತಿದ್ದಾರೆ.
ಒಟ್ಟಾರೆ, ಯಶ್ ಮತ್ತು ಪ್ರಶಾಂತ್ ನೀಲ್ ತಮ್ಮ ಕೆಲಸದಲ್ಲಿಯೇ ಬ್ಯುಸಿ ಇರುವುದರಿಂದ ‘ಕೆಜಿಎಫ್ 3’ ಚಿತ್ರ 2027 ಅಥವಾ 2028ರ ನಂತರ ಬರಬಹುದು ಎಂದು ಹೇಳಲಾಗುತ್ತಿದೆ. ಹೀಗಾಗಿ ಚಿತ್ರದ ಮುಹೂರ್ತ ಯಾವಾಗಾ? ಶೂಟಿಂಗ್ ಎಷ್ಟು ವರ್ಷ ನಡೆಯುತ್ತೆ? ಯಾವಾಗ ಚಿತ್ರ ತೆರೆಗೆ ಬರಲಿದೆ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗಳಿಗೆ ಅಭಿಮಾನಿಗಳು ಇನ್ನೂ ಕಾಯಬೇಕಾಗುತ್ತದೆ.
ಇದನ್ನೂ ಓದಿ : ಟ್ರೇಲರ್ನಲ್ಲೇ ಕುತೂಹಲ ಮೂಡಿಸಿದ ‘ದಿ’ – ಬಹುನಿರೀಕ್ಷಿತ ಸಿನಿಮಾ ಮೇ 16ಕ್ಕೆ ತೆರೆಗೆ!
