ಬೆಂಗಳೂರು : ಕರ್ನಾಟಕ ಸೇರಿ ಎಂಟು ರಾಜ್ಯಗಳಲ್ಲಿ CBI ಪೊಲೀಸರು ದಾಳಿ ನಡೆಸಿದ್ದಾರೆ. ಸೈಬರ್ ಕ್ರೈಂ, ಡಿಜಿಟಲ್ ಅರೆಸ್ಟ್, ಸೈಬರ್ ಕ್ರೈಂ ಅನಧಿಕೃತ ಸಿಮ್ ಬಳಕೆ ಸಂಬಂಧ CBI ಪೊಲೀಸರು ದಾಳಿ ನಡೆಸಿದ್ದು, ಆಪರೇಷನ್ ಚಕ್ರ-V ಅಡಿಯಲ್ಲಿ ಕಾರ್ಯಾಚರಣೆ ನಡೆಯುತ್ತಿದೆ.
8 ರಾಜ್ಯಗಳಲ್ಲಿ 42 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಸೈಬರ್ ಕ್ರೈಂ ಜೊತೆ ಸೇರಿಕೊಂಡು ವಂಚನೆ ಎಸಗುತ್ತಿರುವ ಮೊಬೈಲ್ ಸರ್ವಿಸ್ದಾರರು, ಮೋಸದ ಜಾಹೀರಾತು, ಹೂಡಿಕೆ ವಂಚನೆ, UPI ವಂಚನೆಗಳು, ಟೆಲಿಕಾಂ ಆಪರೇಟರ್‌ಗಳ ವಿವಿಧ ಪಾಯಿಂಟ್ ಆಫ್ ಸೇಲ್ ಮತ್ತು ಏಜೆಂಟ್‌ಗಳು ನೀಡಿದ ಅನಧಿಕೃತ ಸಿಮ್ ಕಾರ್ಡ್‌ಗಳ ಮಾರಾಟ ಮತ್ತು ದುರುಪಯೋಗವನ್ನು ತಡೆಯುವ ನಿಟ್ಟಿನಲ್ಲಿ ಸಿಬಿಐ ಶೋಧ ನಡೆಸಿದೆ.
ಅಸ್ಸಾಂ, ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡು ಸೇರಿದಂತೆ 42 ಪಾಯಿಂಟ್‌ಗಳ ಸೇಲ್ ಏಜೆಂಟ್‌ಗಳ ಆವರಣದಲ್ಲಿ CBI ಪೊಲೀಸರು ಶೋಧ ನಡೆಸಿದ್ದಾರೆ. ದಾಳಿ ವೇಳೆ ಮೊಬೈಲ್ ಫೋನ್‌ಗಳು, ಎಲೆಕ್ಟ್ರಾನಿಕ್ ಡಿವೈಸ್ ಗಳು, KYC ದಾಖಲೆಗಳು, ಸಿಮ್ ಕಾರ್ಡ್‌ಗಳ ವಿತರಣೆಯಲ್ಲಿ ತೊಡಗಿರುವ ಮಧ್ಯವರ್ತಿಗಳನ್ನು ಸಿಬಿಐ ಪತ್ತೆಹಚ್ಚಿದೆ. ಇನ್ನು KYC ನಿಯಮಾವಳಿಗಳನ್ನು ಉಲ್ಲಂಘಿಸಿ ಅನಧಿಕೃತವಾಗಿ ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡಿದ್ದ 5 ಜನರನ್ನು ಸಿಬಿಐ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ : ಭಾರತ-ಪಾಕ್ ಯುದ್ಧದ ವೇಳೆ ಫೇಕ್ ಸುದ್ದಿಗಳ ಹಾವಳಿ – ಸುಳ್ಳು ಮಾಹಿತಿಗೆ ಕಡಿವಾಣ ಹಾಕುವಂತೆ ಸಿಎಂ ಸೂಚನೆ!
