ಜಮ್ಮು ಕಾಶ್ಮೀರದಲ್ಲಿ ಪಾಕ್​ನ​ 3 ಫೈಟರ್​ ​ಜೆಟ್ ಹೊಡೆದುರುಳಿಸಿದ ಭಾರತ!

ನವದೆಹಲಿ : ಭಾರತ ಮತ್ತು ಪಾಕಿಸ್ತಾನ ನಡುವಣ ಉದ್ವಿಗ್ನ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದೆ. ಇದೇ ಸಂದರ್ಭದಲ್ಲಿ ಭಾರತೀಯ ಸೇನಾ ಪಡೆ 3 ಪಾಕಿಸ್ತಾನಿ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ.

ಮೂಲಗಳ ಪ್ರಕಾರ, ಪಾಕಿಸ್ತಾನದ 3 ಫೈಟರ್​ ​ಜೆಟ್​ಗಳಲ್ಲಿ 2 ಜೆಟ್‌ಗಳನ್ನು ಜಮ್ಮು ಕಾಶ್ಮೀರದಲ್ಲಿ ಮತ್ತು ಇನ್ನೊಂದನ್ನು ಉತ್ತರ ಕಾಶ್ಮೀರದಲ್ಲಿ ಹೊಡೆದುರುಳಿಸಲಾಗಿದೆ. ಘಟನೆಯ ಬಗ್ಗೆ ರಕ್ಷಣಾ ಇಲಾಖೆ ಇನ್ನೂ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ಆದಾಗ್ಯೂ, ಭಾರತೀಯ ಸೇನೆ ಹೊಡೆದುರುಳಿಸಿರುವುದು F-16 ಜೆಟ್‌ಗಳು ಎಂದು ವರದಿಯಾಗಿದೆ. ಏತನ್ಮಧ್ಯೆ, ಉಭಯ ರಾಷ್ಟ್ರಗಳ ವಾಯುಪಡೆಗಳ ನಡುವಣ ದಾಳಿ, ಪ್ರತಿದಾಳಿ ಮುಂದುವರಿದಿರುವುದನ್ನು ಸರ್ಕಾರಿ ಮೂಲಗಳು ದೃಢಪಡಿಸಿವೆ.

ಇದನ್ನೂ ಓದಿ : ದೆಹಲಿ ಗುರಿಯಾಗಿಸಿ ಪಾಕ್​ ಹಾರಿಸಿದ ‘ಬ್ಯಾಲಿಸ್ಟಿಕ್‌ ಮಿಸೈಲ್‌’ ಹರಿಯಾಣದಲ್ಲೇ ಛಿದ್ರ ಛಿದ್ರ!

Btv Kannada
Author: Btv Kannada

Read More