ಭಾರತದ ವಿರೋಧದ ನಡುವೆಯೂ ‘ಪಾಪಿ’ ಪಾಕಿಸ್ತಾನಕ್ಕೆ 19 ಸಾವಿರ ಕೋಟಿ ಸಾಲ ನೀಡಿದ IMF!

ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಪಾಕಿಸ್ತಾನಕ್ಕೆ 1 ಬಿಲಿಯನ್ ಡಾಲರ್‌ ಸಾಲ ನೀಡಿದೆ. ಭಾರತೀಯ ಕರೆನ್ಸಿಯಲ್ಲಿ ಇದರ ಮೌಲ್ಯ ಸುಮಾರು 19 ಸಾವಿರ ಕೋಟಿ ರೂಪಾಯಿ ಆಗಿದೆ.

ಪಾಕಿಸ್ತಾನಕ್ಕೆ ಸಾಲ ನೀಡದಂತೆ ಭಾರತ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಭಾರತದ ವಿರೋಧದ ನಡುವೆಯೂ ಐಎಂಎಫ್​, 1 ಬಿಲಿಯನ್ ಡಾಲರ್‌ ಹಣ ನೀಡಲು ಅನುಮೋದಿಸಿದೆ. ಸಾಲ ಸಿಕ್ಕ ಬೆನ್ನಲ್ಲೇ ಮಾಹಿತಿ ಪ್ರಕಟಿಸಿರುವ ಪಾಕಿಸ್ತಾನ ಸರ್ಕಾರ, ಪಾಕಿಸ್ತಾನದ ಆರ್ಥಿಕ ಸ್ಥಿತಿ ಸುಧಾರಿಸಿದೆ ಮತ್ತು ದೇಶವು ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಪಾಕಿಸ್ತಾನಕ್ಕೆ ಹೊಸದಾಗಿ 2.3 ಬಿಲಿಯನ್ ಡಾಲರ್ ಸಾಲ ನೀಡುವ ಐಎಂಎಫ್ ಪ್ರಸ್ತಾವನೆಯನ್ನು ಭಾರತ ವಿರೋಧಿಸಿತ್ತು. ಈ ಹಣವನ್ನು ಪಾಕ್ ಗಡಿಯಾಚೆಗಿನ ಭಯೋತ್ಪಾದನೆಗೆ ಬಳಸಿಕೊಳ್ಳಲಿದೆ. ಹೀಗಾಗಿ ಪಾಕ್​​ಗೆ ಹಣ ನೀಡಬಾರದು ಎಂದಿತ್ತು. ಅಲ್ಲದೇ ಅಂತರರಾಷ್ಟ್ರೀಯ ಹಣಕಾಸು ನಿಧಿಯ ಮಹತ್ವದ ಸಭೆಯಲ್ಲಿ ಭಾರತ ಮತದಾನದಿಂದ ದೂರ ಉಳಿದಿತ್ತು. ಮತದಾನದ ಫಲಿತಾಂಶಗಳು ಪಾಕಿಸ್ತಾನದ ಪರವಾಗಿದ್ದವು. ಅದಕ್ಕೆ IMF ಸಾಲವನ್ನು ನೀಡಿದೆ.

ಇದನ್ನೂ ಓದಿ : ಪಾಕ್‌ ಡ್ರೋನ್ ದಾಳಿಗೆ ಭಾರತ ಪ್ರತ್ಯುತ್ತರ – ‘ಪಾಪಿ’ಸ್ಥಾನದ 3 ವಾಯುನೆಲೆಗಳ ಮೇಲೆ ಕೌಂಟರ್​ ಅಟ್ಯಾಕ್​!

Btv Kannada
Author: Btv Kannada

Read More

Read More