‘ದೇಶ ಮೊದಲು.. ಕಲೆ ನಂತರ’ – ದಿಢೀರ್​ ಸಿನಿಮಾ ಕಾರ್ಯಕ್ರಮ ರದ್ದು ಮಾಡಿದ ಕಮಲ್ ಹಾಸನ್!

ಭಾರತ ಮತ್ತು ಪಾಕಿಸ್ತಾನ ನಡುವಿನ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ತಮ್ಮ ‘ಥಗ್ ಲೈಫ್’ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ನಟ ಕಮಲ್ ಹಾಸನ್ ಘೋಷಿಸಿದ್ದಾರೆ.

ಮಣಿರತ್ನಂ ನಿರ್ದೇಶನದ, ನಟ ಕಮಲ್ ಹಾಸನ್ ಸಹ-ಬರೆದಿರುವ, ಮುಂಬರುವ ತಮಿಳು ಗ್ಯಾಂಗ್‌ಸ್ಟರ್ ಆಕ್ಷನ್ ಡ್ರಾಮಾ ‘ಥಗ್ ಲೈಫ್’, ತಾರೆಯ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಮೇ 16ರಂದು ‘ಥಗ್ ಲೈಫ್’ ಚಿತ್ರದ ಆಡಿಯೋ ಬಿಡುಗಡೆಯನ್ನು ಚಿತ್ರತಂಡ ಯೋಜಿಸಿತ್ತು. ಆದರೆ ಇದೀಗ ಅದನ್ನು ಮರು ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ಹೇಳಿದ್ದಾರೆ.

ಕಮಲ್ ಹಾಸನ್ ಅವರ ನಿರ್ಮಾಣ ಸಂಸ್ಥೆ ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್, “ದೇಶ ಮೊದಲು.. ಕಲೆ ನಂತರ”. ನಮ್ಮ ದೇಶದ ಗಡಿಯಲ್ಲಿನ ಬೆಳವಣಿಗೆಗಳು ಮತ್ತು ಪ್ರಸ್ತುತ ಹೆಚ್ಚಿನ ಎಚ್ಚರಿಕೆಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಮೇ 16ರಂದು ಯೋಜಿಸಲಾಗಿದ್ದ ಥಗ್ ಲೈಫ್‌ನ ಆಡಿಯೋ ಬಿಡುಗಡೆಯನ್ನು ಮರು ನಿಗದಿಪಡಿಸಲು ನಾವು ನಿರ್ಧರಿಸಿದ್ದೇವೆ” ಎಂದು ಹೇಳಿಕೆಯನ್ನು ಹಂಚಿಕೊಂಡಿದೆ.

ಇದನ್ನೂ ಓದಿ : ರಾಷ್ಟ್ರಧ್ವಜವನ್ನು ಕರವಸ್ತ್ರದಂತೆ ಬಳಸಿ ಅಪಮಾನ – ಕನ್ನಡ ಅಭಿಮಾನಿ ಸಂಘದ ಅಧ್ಯಕ್ಷ ಕೃಷ್ಣಪ್ಪ, ಶಾಸಕ ಸಿ.ಕೆ ರಾಮಮೂರ್ತಿ ವಿರುದ್ದ ದೂರು!

Btv Kannada
Author: Btv Kannada

Read More