‘ಆಪರೇಷನ್ ಸಿಂಧೂರ’ ಸಕ್ಸಸ್​ಗೆ ರಾಜ್ಯ ಸರ್ಕಾರ ಸಾಥ್.. ಬೆಂಗಳೂರಲ್ಲಿ ತಿರಂಗಾ ಯಾತ್ರೆ!

ಬೆಂಗಳೂರು : ʻಆಪರೇಷನ್‌ ಸಿಂಧೂರ’ ಕಾರ್ಯಾಚರಣೆ ನಡೆಸುತ್ತಿರುವ ಭಾರತೀಯ ಸೈನ್ಯಕ್ಕೆ ಬೆಂಬಲ ಸೂಚಿಸಿ ನಗರದ ಕೆ.ಆರ್. ವೃತ್ತದಿಂದ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಯ ಮಿನ್ಸ್ ಸ್ಟೇರ್‌ವರೆಗೆ ಇಂದು ‘ತಿರಂಗಾ ಯಾತ್ರೆ’ಯನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರ ಹಮ್ಮಿಕೊಂಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್​ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಯಾತ್ರೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು, ಸರ್ಕಾರಿ, ಖಾಸಗಿ ಉದ್ದಿಮೆಗಳ ನೌಕರರು, ಸಾಹಿತಿಗಳು, ಚಿಂತಕರು, ಚಿತ್ರರಂಗದವರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದಾರೆ.

‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಗೆ ಒಕ್ಕೊರಲಿನ ಬೆಂಬಲ ನೀಡುವ ಸಲುವಾಗಿ ಇಂದು ಆಯೋಜಿಸಿರುವ ‘ತಿರಂಗಾ ರ್‍ಯಾಲಿ’ಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳೋಣ. ದೇಶಕ್ಕಾಗಿ ಹೋರಾಡುತ್ತಿರುವ ಭದ್ರತಾ ಪಡೆಗಳಿಗೆ ಗೌರವ ಸಲ್ಲಿಸೋಣ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ನಿನ್ನೆ ಟ್ವೀಟ್‌ ಮಾಡಿದ್ದರು. ಅದರಂತೆ ಇಂದು ‘ತಿರಂಗಾ ಯಾತ್ರೆ’ಗೆ ಸಾವಿರಾರು ಸಂಖ್ಯೆಯಲ್ಲಿ ಎಲ್ಲಾ ಕ್ಷೇತ್ರದ ಗಣ್ಯರು ಸಾಥ್​ ಕೊಟ್ಟಿದ್ದಾರೆ.

ಇದನ್ನೂ ಓದಿ : ಭಾರತ-ಪಾಕ್ ನಡುವೆ ಹೆಚ್ಚಿದ ಸಂಘರ್ಷ.. ದೇಶಾದ್ಯಂತ 24 ಏರ್‌ಪೋರ್ಟ್‌ಗಳು ಬಂದ್‌ – ಎಲ್ಲೆಡೆ ಹೈ ಅಲರ್ಟ್‌!

Btv Kannada
Author: Btv Kannada

Read More