ಮದುವೆಯ ಬಗ್ಗೆ ಬಿಗ್​ ಅಪ್​ಡೇಟ್​ ಕೊಟ್ಟ ಬಿಗ್​ಬಾಸ್ ಬೆಡಗಿ​ ಐಶ್ವರ್ಯಾ!

ಬಿಗ್​ಬಾಸ್​ ಕನ್ನಡ ಸೀಸನ್​ 11ರಲ್ಲಿ ನಟಿ ಐಶ್ವರ್ಯಾ ಸಿಂಧೋಗಿ 90 ದಿನಗಳವರೆಗೆ ಆಟವಾಡಿ ಹೊರಬಂದಿದ್ದರು. ದೊಡ್ಮನೆಯಿಂದ ಐಶ್ವರ್ಯಾ ಹೊರಬರುವ ವೇಳೆ ಬಿಗ್​ಬಾಸ್ ಭಾವನಾತ್ಮಕ ವಿಧಾಯ ಹೇಳಿತ್ತು.

ಪತ್ರದ ಮೂಲಕ ಐಶ್ವರ್ಯಾಗೆ ಬಿಗ್​​ಬಾಸ್ ಗುಡ್​ಬೈ ಹೇಳಿತ್ತು. ‘ಪ್ರೀತಿಯ ಐಶ್ವರ್ಯ 13 ವಾರಗಳ ಕಾಲ ಒಬ್ಬ ಪ್ರಬಲ ಸ್ಪರ್ಧಿಯಾಗಿ ಈ ಮನೆಯಿಂದ ಜೀವಿಸಿರುವುದು ಸಂತೋಷಕರ ವಿಷಯ. ತುಸು ಬೇಸರವಿದ್ದರೂ ನಗು ದುಃಖ, ಕೋಪ, ತುಂಟಾಟ ಹೀಗೆ ನಿಮ್ಮ ಭಾವನೆಗಳಿಗೆ ಸಾಕ್ಷಿಯಾಗಿರುವ ಈ ಮನೆಯಿಂದ ಈಗ ನಿಮ್ಮನ್ನು ಕಳುಹಿಸಿಕೊಡಲೇಬೇಕಾಗಿದೆ’ ಎಂದು ಅದರಲ್ಲಿ ಬರೆಯಲಾಗಿತ್ತು. ಈ ಮೂಲಕ, 13ನೇ ವಾರದಲ್ಲಿ ಅವರು ಬಿಗ್ ಬಾಸ್ ಶೋನಿಂದ ಹಲವು ವೀಕ್ಷಕರ ನೆಚ್ಚಿನ ಐಶ್ವರ್ಯ ಹೊರಕ್ಕೆ ಬಂದಿದ್ದರು. 

ಬಿಗ್​ಬಾಸ್​ ಮನೆಯಲ್ಲಿ ಒಳ್ಳೆಯ ಹೆಸರು ಮಾಡಿದ್ದ ಐಶ್ವರ್ಯ ಅವರು ಇದಾಗಲೇ ತಮ್ಮ ಜೀವನದ ಹಲವು ವಿಷಯಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಇದೀಗ ಅವರಿಗೆ ಮದುವೆಯ ಬಗ್ಗೆ ಪ್ರಶ್ನೆ ಎದುರಾಗಿದೆ. ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಐಶ್ವರ್ಯ ಅವರು ಮದುವೆಯ ಬಗ್ಗೆ ಮಾತನಾಡಿದ್ದಾರೆ.

ನನಗೆ ಇನ್ನೂ ಮಾಡಬೇಕಾದದ್ದು ಬಹಳಷ್ಟು ಇದೆ. ಕರಿಯರ್​ನಲ್ಲಿ ಮುಂದೆ ಹೋಗಬೇಕು ಎಂದು ಇದೆ. ಸದ್ಯ ಮದುವೆ ಇಲ್ಲ. ಆದರೆ ಮದುವೆ ಮತ್ತು ಲವ್​ ಯಾವಾಗ ಆಗುತ್ತದೆ ಎಂದು ಹೇಳಲು ಆಗುವುದಿಲ್ಲ. ಅದನ್ನು ನಾವಾಗಿಯೇ ಮಾಡಿಕೊಂಡು ಹೋಗುವುದಲ್ಲ, ತಂತಾನೆಯಾಗಿಯೇ ಆಗಿಬಿಡುತ್ತದೆ. ಅದಕ್ಕಾಗಿ ಇಷ್ಟು ವರ್ಷ ಅಂತೆಲ್ಲಾ ನಾನು ಹೇಳುವುದಿಲ್ಲ. ಆದರೆ ಒಳ್ಳೆಯ ಹುಡುಗ, ತುಂಬಾ ಕೇರಿಂಗ್​ ಮಾಡುವವ ಇದ್ದರೆ ಮದುವೆಯಾಗುವೆ. ಅದಕ್ಕಿಂತ ಮುಖ್ಯವಾಗಿ ಗೌರವ ಕೊಡುವುದು ಆತನಿಗೆ ತಿಳಿದಿರಬೇಕು. ಹಾಗಿದ್ದರೆ ಮಾತ್ರ ದಾಂಪತ್ಯ ಜೀವನ ಚೆನ್ನಾಗಿ ನಡೆದುಕೊಂಡು ಹೋಗುತ್ತದೆ ಎಂದು ಐಶ್ವರ್ಯ ಹೇಳಿದರು. ಐಶ್ವರ್ಯ ಅಭಿಮಾನಿಗಳು ಅವರು ಯಾವಾಗ ಮದುವೆಯಾಗತರಾರೆ ಎಂದು ಕಾಯ್ತಿದ್ದಾರೆ.

ಇದನ್ನೂ ಓದಿ : http://ಬಾಲಿವುಡ್​ ನಟ ಸೋನು ಸೂದ್​ಗೆ ಸಂಕಷ್ಟ – ಬಂಧನ ವಾರಂಟ್ ಹೊರಡಿಸಿದ ಕೋರ್ಟ್​!

Btv Kannada
Author: Btv Kannada

Read More