ಬಾಲಿವುಡ್​ ನಟ ಸೋನು ಸೂದ್​ಗೆ ಸಂಕಷ್ಟ – ಬಂಧನ ವಾರಂಟ್ ಹೊರಡಿಸಿದ ಕೋರ್ಟ್​!

ಪಂಜಾಬ್ : ವಂಚನೆ ಪ್ರಕರಣಕ್ಕೆ ಸಂಬಂಧಿದಂತೆ ಬಾಲಿವುಡ್​ನ ಖ್ಯಾತ ನಟ ಸೋನು ಸೂದ್ ವಿರುದ್ದ ಪಂಜಾಬ್ ನ್ಯಾಯಾಲಯ ಬಂಧನದ​​​ ವಾರಂಟ್ ಹೊರಡಿಸಿದೆ. ಲುಧಿಯಾನ ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ರಮಣಪ್ರೀತ್ ಕೌರ್ ಅವರು ವಾರಂಟ್ ಜಾರಿ ಮಾಡಿ ಆದೇಶಿಸಿದ್ದಾರೆ.

ಲುಧಿಯಾನ ಮೂಲದ ವಕೀಲ ರಾಜೇಶ್ ಖನ್ನಾ ಅವರು ಮೋಹಿತ್ ಶುಕ್ಲಾ ವಿರುದ್ಧ 10 ಲಕ್ಷ ರೂ. ವಂಚನೆ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದು, ನಕಲಿ ರಿಜಿಕಾ ನಾಣ್ಯದಲ್ಲಿ ಹೂಡಿಕೆ ಮಾಡುವಂತೆ ಆಮಿಷವೊಡ್ಡಲಾಗಿದೆ ಎಂದು ಆರೋಪಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಸಾಕ್ಷಿ ಹೇಳಲು ಸೋನು ಸೋದ್ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಆದರೆ ಗೈರಾದ ಹಿನ್ನೆಲೆ ಬಂಧನದ ವಾರಂಟ್ ಜಾರಿಗೊಳಿಸಲಾಗಿದೆ. ಸೋನ್ ಸೂದ್ ಅವರನ್ನು ಬಂಧಿಸುವಂತೆ ಮುಂಬಯಿಯ ಅಂಧೇರಿ ಪಶ್ಚಿಮದಲ್ಲಿರುವ ಓಶಿವಾರಾ ಪೊಲೀಸ್ ಠಾಣೆಯ ನಿರೀಕ್ಷಕರಿಗೆ ಲುಧಿಯಾನ ನ್ಯಾಯಾಲಯ ಆದೇಶಿಸಿದೆ.

ಫೆ.10ರ ಒಳಗಾಗಿ ಅದೇಶ ಪಾಲನೆ ಆಗದಿದ್ದರೆ, ಯಾಕೆ ಕಾರ್ಯಗತ ಆಗಿಲ್ಲ ಎಂಬುದನ್ನು ಅನುಮೋದನೆಯೊಂದಿಗೆ ಪ್ರಮಾಣೀಕರಿಸಬೇಕು’ ಎಂದು ನ್ಯಾಯಾಲಯ ಆದೇಶ ಪ್ರತಿಯಲ್ಲಿ ಉಲ್ಲೇಖಿಸಿದೆ ಎಂದು ತಿಳಿದುಬಂದಿದೆ. ಹಾಗೆಯೇ ಪ್ರಕರಣದ ಮುಂದಿನ ವಿಚಾರಣೆಯನ್ನು ಫೆ.10ಕ್ಕೆ ಮುಂದೂಡಿದೆ.

ಇದನ್ನೂ ಓದಿ : http://ಮುಡಾ ಕೇಸ್​ : ಸಿಎಂ ಸಿದ್ದರಾಮಯ್ಯ ವಿರುದ್ಧ ಸಿಬಿಐ ತನಿಖೆಗೆ ಕೋರಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್!

Btv Kannada
Author: Btv Kannada

Read More