‘ಆಪರೇಷನ್​ ಸಿಂಧೂರ’ಕ್ಕೆ ಕಿಚ್ಚನ ಮೆಚ್ಚುಗೆ – ನ್ಯಾಯ ಸಿಕ್ಕಿದೆ ಎಂದ ಸುದೀಪ್!

ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರವಾಗಿ ಬುಧವಾರ ನಸುಕಿನ ಜಾವ ಭಾರತೀಯ ಸೇನೆ ಪಾಕಿಸ್ತಾನದಲ್ಲಿ ನಡೆಸಿದ ಆಪರೇಷನ್ ‘ಸಿಂಧೂರ’ ಕುರಿತು ನಟ ಕಿಚ್ಚ ಸುದೀಪ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಒಬ್ಬ ಭಾರತೀಯನಾಗಿ ಈ ಪವಿತ್ರ ಮಣ್ಣಿನ ಮಗನಾಗಿ, ಪಹಲ್ಗಾಮ್‌ನಲ್ಲಿ ನಡೆದ ಘಟನೆಯಿಂದ ನೋವು ಅನುಭವಿಸಿದೆ. ಇಂದು ನ್ಯಾಯ ಸಿಕ್ಕಿದೆ ಎಂದು ಸುದೀಪ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಅದರಂತೆಯೇ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ ಕೇವಲ ಒಂದು ಧ್ಯೇಯವಲ್ಲ. ಇದು ಪವಿತ್ರ ಪ್ರತಿಜ್ಞೆ. ಉಗ್ರರು ದಾಳಿ ಮಾಡುವ ಮೂಲಕ ಭಾರತದ ಸಿಂಧೂರಕ್ಕೆ ಅಪಮಾನ ಮಾಡಲಾಗಿತ್ತು. ಆದರೆ ನಮ್ಮ ಧೈರ್ಯಶಾಲಿ ಸೈನಿಕರು ನಿಖರತೆಯಿಂದ ಅದರ ಗೌರವವನ್ನು ಪುನಃಸ್ಥಾಪಿಸಿದ್ದಾರೆ. ನಮ್ಮ ಸಶಸ್ತ್ರ ಪಡೆಗಳಿಗೆ ನನ್ನ ವಂದನೆಗಳು ಎಂದಿದ್ದಾರೆ.

ನಮ್ಮ ಗೌರವಾನ್ವಿತ ಪ್ರಧಾನಿಗಳು ರಕ್ಷಣಾ ನಾಯಕತ್ವಕ್ಕೆ, ಎತ್ತರವಾಗಿ, ದೃಢವಾಗಿ ಮತ್ತು ನಿರ್ಭೀತವಾಗಿ ನಿಂತಿದ್ದಕ್ಕಾಗಿ ಧನ್ಯವಾದಗಳು. ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರ ಕಾರ್ಯಕ್ಕಾಗಿ ವಂದನೆಗಳು. ಭಾರತ ಮರೆಯುವುದಿಲ್ಲ. ಭಾರತ ಕ್ಷಮಿಸುವುದಿಲ್ಲ. ಜೈ ಹಿಂದ್ ಎಂದು ಕಿಚ್ಚ ಸುದೀಪ್ ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ‘ಪಾಪಿ’ಸ್ತಾನಕ್ಕೆ ಭಾರತೀಯ ಮಹಿಳಾ ಸೇನಾಧಿಕಾರಿಗಳ ಡಿಚ್ಚಿ – ಉಗ್ರ ನರಮೇಧ ಮಾಹಿತಿ ಬಿಚ್ಚಿಟ್ಟ ನಾರಿ ಶಕ್ತಿ!

Btv Kannada
Author: Btv Kannada

Read More