‘ಪಾಪಿ’ಸ್ತಾನಕ್ಕೆ ಭಾರತೀಯ ಮಹಿಳಾ ಸೇನಾಧಿಕಾರಿಗಳ ಡಿಚ್ಚಿ – ಉಗ್ರ ನರಮೇಧ ಮಾಹಿತಿ ಬಿಚ್ಚಿಟ್ಟ ನಾರಿ ಶಕ್ತಿ!

ಏಪ್ರಿಲ್ 22ರಂದು ಪಾಕ್ ಬೆಂಬಲಿತ ಉಗ್ರರು ಕಾಶ್ಮೀರದ ಪಹಲ್ಗಾಮ್​​ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಪೈಶಾಚಿಕ ಕೃತ್ಯ ನಡೆಸಿದ್ದರು. ಭಯೋತ್ಪಾದಕ ದಾಳಿಯಲ್ಲಿ 26 ಅಮಾಯಕರು ಜೀವ ಕಳೆದುಕೊಂಡಿದ್ದರು. ಉಗ್ರರ ದಾಳಿಗೆ ಭಾರತ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿತ್ತು. ಈ ಬೆನ್ನಲ್ಲೇ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ಮಂಗಳವಾರ ತಡರಾತ್ರಿ ‘ಆಪರೇಷನ್ ಸಿಂಧೂರ್’ ಆರಂಭಿಸಿ ಒಟ್ಟು 21 ಭಯೋತ್ಪಾದಕ ಅಡಗುತಾಣಗಳ ಮೇಲೆ ಅಟ್ಯಾಕ್ ಮಾಡಿ ಸುಮಾರು 80ಕ್ಕೂ ಹೆಚ್ಚು ಉಗ್ರರನ್ನು ಹೊಡೆದುರುಳಿಸಿದ್ದಾರೆ.

ಇದೀಗ ‘ಆಪರೇಷನ್ ಸಿಂಧೂರ್’ ಬಗ್ಗೆ ಭಾರತದ ಇಬ್ಬರು ದಿಟ್ಟ ಮಹಿಳಾ ಸೇನಾಧಿಕಾರಿಗಳಾದ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್, ಕರ್ನಲ್ ಸೋಫಿಯಾ ಖುರೇಷಿ ಹಾಗೂ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲೂ ಪಾಕ್​​ಗೆ ಭಾರತ ದಿಟ್ಟ ಉತ್ತರ ನೀಡಿದೆ. 9 ಕಡೆ ಉಗ್ರರ ಲಾಂಚ್ ಪ್ಯಾಡ್ ನಾಶ ಮಾಡಿದ್ದೇವೆ, ಹಾಗೆಯೇ ಉಗ್ರರ ತರಬೇತಿ ಶಿಬಿರಗಳನ್ನು ಟಾರ್ಗೆಟ್ ಮಾಡಿ ನಾಶ ಮಾಡಲಾಗಿದೆ ಎಂದು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್, ಕರ್ನಲ್ ಸೋಫಿಯ ಖುರೇಷಿ ಮಾಹಿತಿ ನೀಡಿದ್ದಾರೆ.

ಸುದ್ಧಿಗೋಷ್ಠಿಗೂ ಮೊದಲು ವಿಡಿಯೋ ಪ್ರದರ್ಶನ ಮಾಡಿದ ಭಾರತ, ‘ಅಪರೇಷನ್​ ಸಿಂಧೂರ’ ವಿಡಿಯೋ ಟೈಟಲ್​​ನಲ್ಲಿ ‘ಕುಂಕುಮ’ ಚೆಲ್ಲಿದ ಚಿತ್ರವನ್ನು ತೋರಿಸಿದೆ. ಪಾಕ್​​ನಲ್ಲಿರುವ ಉಗ್ರರನ್ನೇ ಗುರಿಯಾಗಿರಿಸಿ ದಾಳಿ ಮಾಡಲಾಗಿದ್ದು, ಏರ್​ಸ್ಟ್ರೈಕ್​ ಮೂಲಕ ಕಠಿಣ ಸಂದೇಶ ನೀಡಿದ್ದೇವೆ. ಇಂದು ಮುಂಜಾನೆ ಉಗ್ರರ ವಿರುದ್ಧದ ಕಾರ್ಯಾಚರಣೆ ಯಶಸ್ವಿಯಾಗಿದೆ. ಮತ್ತೆ ಲಷ್ಕರ್ ಉಗ್ರರು ದಾಳಿ ನಡೆಸಬಹುದು ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಎಚ್ಚರಿಕೆಯನ್ನೂ ನೀಡಿದ್ದಾರೆ.

ಇನ್ನು ಮರ್ಕಜ್ ಸುಭಾನಲ್ಲಾ ಜೈಶ್-ಎ-ಮೊಹಮ್ಮದ್‌ನ ಪ್ರಧಾನ ಕಚೇರಿಯನ್ನು ನಾಶ ಮಾಡಲಾಗಿದೆ. ಇಲ್ಲಿ ಭಯೋತ್ಪಾದಕರಿಗೆ ತರಬೇತಿ ನೀಡಲಾಗುತ್ತಿತ್ತು. ಯಾವುದೇ ಮಿಲಿಟರಿ ನೆಲೆಯನ್ನು ಗುರಿಯಾಗಿಸಿಕೊಂಡಿಲ್ಲ. ಯಾವುದೇ ನಾಗರಿಕರಿಗೂ ಹಾನಿಯಾಗಿಲ್ಲ ಎಂದು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಲಾಗಿದೆ.

21 ಉಗ್ರರ ಕ್ಯಾಂಪ್​ಗಳನ್ನು ಧ್ವಂಸ ಮಾಡಿದ ಭಾರತೀಯ ಸೇನೆ 

  • ಟಾರ್ಗೆಟ್​ 1 – ಸವಾಯ್-
  • ಟಾರ್ಗೆಟ್​ 2 – ಬಿಲಾಲ್-
  • ಟಾರ್ಗೆಟ್ 3 – ಮಸ್ಕರ್-
  • ಟಾರ್ಗೆಟ್ 4 – ಚಲಬಂಡಿ-
  • ಟಾರ್ಗೆಟ್ 5 – ಅಬ್ದುಲ್ ಬಿನ್ ಮಲೀಕ್-
  • ಟಾರ್ಗೆಟ್ 6 – ದುಲಾಯ್-
  • ಟಾರ್ಗೆಟ್ 7 – ಗರಾಯಿ-
  • ಟಾರ್ಗೆಟ್ 8 – ಬತ್ರಾಸಿ-
  • ಟಾರ್ಗೆಟ್ 9 – ಬಾಲಾಕೋಟ್-
  • ಟಾರ್ಗೆಟ್ 10 -ಓಘಿ-
  • ಟಾರ್ಗೆಟ್ 11 – ಬೋಯಿ-
  • ಟಾರ್ಗೆಟ್ 12- ಸೆನ್ಸಾ-
  • ಟಾರ್ಗೆಟ್ 13 – ಗುಲ್ ಪುರ್-
  • ಟಾರ್ಗೆಟ್ 14- ಕೋಟ್ಲಿ-
  • ಟಾರ್ಗೆಟ್ 15 – ಬರಲಾಲಿ-
  • ಟಾರ್ಗೆಟ್ 16 – ದುಂಘಿ-
  • ಟಾರ್ಗೆಟ್ 17 – ಬರ್ನಾಲ
  • ಟಾರ್ಗೆಟ್ 18 – ಬಹುವಾಲ್ಪರ್
  • ಟಾರ್ಗೆಟ್ 19 – ಮೆಹಮೂನಾ
  • ಟಾರ್ಗೆಲ್ 20 – ಮುದರಿಕೆ
  • ಟಾರ್ಗೆಟ್ 21 – ಗರ್ಭಿ ಅಬ್ದುಲ್ಲಾ ಕ್ಯಾಂಪ್

ಇದನ್ನೂ ಓದಿ : ರಣಹೇಡಿ ಪಾಕಿಸ್ತಾನಕ್ಕೆ ತಕ್ಕ ಉತ್ತರ – ‘ಆಪರೇಷನ್ ಸಿಂಧೂರ್’ಗೆ ಸಿಎಂ ಸಿದ್ದು, ಡಿಸಿಎಂ ಡಿಕೆಶಿ ಮೆಚ್ಚುಗೆ!

Btv Kannada
Author: Btv Kannada

Read More