ಆಸ್ತಿ ಕಲಹ – ಕೊಡಗಿನಲ್ಲಿ ತಮ್ಮನಿಗೆ ಗುಂಡಿಟ್ಟು ಕೊಂದ ಅಣ್ಣ!

ಮಡಿಕೇರಿ : ಆಸ್ತಿ ವಿಚಾರವಾಗಿ ಸಹೋದರರ ನಡುವೆ ಕಲಹ ಏರ್ಪಟ್ಟು ಅಣ್ಣನೇ ತಮ್ಮನಿಗೆ ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅಭ್ಯತ್ ಮಂಗಲ ಗ್ರಾಮದಲ್ಲಿ ನಡೆದಿದೆ. ವಿನು ಕುಮಾರ್ (53) ಮೃತ ದುರ್ದೈವಿ.

ನಂಜರಾಯಪಟ್ಟಣದಲ್ಲಿ ವಾಸವಾಗಿದ್ದ ವಿನು ಕುಮಾರ್​, ಅಭ್ಯತ್ ಮಂಗಲದಲ್ಲಿ ತೋಟದ ಗೋದಾಮಿನಲ್ಲಿ ಪೈಪುಗಳ ಪರಿಶೀಲನೆಗೆ ತೆರಳಿದ ಸಂದರ್ಭ ಸಹೋದರ ಮಣಿ ಹಿಂದಿನಿಂದ ಬಂದು ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ಪೊಲೀಸರು ಮಣಿಯನ್ನು ವಶಕ್ಕೆ ಪಡೆದಿದ್ದಾರೆ.

ಮೃತ ದುರ್ದೈವಿ, ವಿನು ಕುಮಾರ್
ಮೃತ ದುರ್ದೈವಿ, ವಿನು ಕುಮಾರ್

ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕೊಡಗು ಎಸ್‌ಪಿ ರಾಮರಾಜನ್ ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಬಿಜೆಪಿ ಸರ್ಕಾರದಲ್ಲೇ ಸುಹಾಸ್ ಶೆಟ್ಟಿ ಮೇಲೆ ರೌಡಿಶೀಟರ್ ಓಪನ್​.. ದಾಖಲೆ ಬಿಡುಗಡೆ ಮಾಡಿ “ಕೇಸರಿ”ಗೆ ‘ಕೈ’ ಕೌಂಟರ್​​!

Btv Kannada
Author: Btv Kannada

Read More